ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ರಾಜ್ಯದಲ್ಲಿ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯನ್ನು ತಕ್ಷಣದಲ್ಲಿ ಆರಂಭಿಸಲು ಕ್ರಮ ಕೈಗೊಳ್ಳುವಂತೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಪ್ರಧಾನ ಕಾರ್ಯದರ್ಶಿ ರಿತೇಶಕುಮಾರ್ ಸಿಂಗ್ ಅವರು ಇಲಾಖೆ ಆಯುಕ್ತರಿಗೆ ಸೂಚಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಇನ್ನೆರಡು ದಿನಗಳಲ್ಲಿ ವರ್ಗಾವಣೆ ವೇಳಾಪಟ್ಟಿ ಬಿಡುಗಡೆಗೆ ಆಯುಕ್ತರ ಇಲಾಖೆ ನಿರ್ಧರಿಸಿದೆ.
ಕರ್ನಾಟಕ ರಾಜ್ಯ ನಾಗರಿಕ ಸೇವೆಗಳ ಕಾಯಿದೆ -2020 ಜಾರಿಗೊಳಿಸಿ ಕಳೆದ ಡಿಸೆಂಬರ್ ತಿಂಗಳಿನಲ್ಲಿ ರಾಜ್ಯ ಸರಕಾರ ಅಧಿಸೂಚನೆ ಹೊರಡಿಸಿತ್ತು. ಇದರಲ್ಲಿ ಹಲವು ನಿಯಮಾವಳಿಗಳನ್ನು ಸಡಿಲೀಕರಿಸಿದ್ದರಿಂದ ಶಿಕ್ಷಕ ವರ್ಗ ಇದನ್ನು ಮುಕ್ತವಾಗಿ ಸ್ವಾಗತಿಸಿತ್ತು. ವರ್ಗಾವಣೆ ವೇಳಾಪಟ್ಟಿ ಬಿಡುಗಡೆಗೊಂಡು ಸುಮಾರು 80 ಸಾವಿರ ಶಿಕ್ಷಕರು ವರ್ಗಾವಣೆ ಕೋರಿ ಅರ್ಜಿ ಸಲ್ಲಿಸಿದ್ದರು.
ಆದರೆ ಶಿಕ್ಷಣ ಇಲಾಖೆ 10,500 ಶಿಕ್ಷಕರನ್ನು ಹೆಚ್ಚುವರಿ ಎಂದು ಪರಿಗಣಿಸಿ ಪಟ್ಟಿ ಮಾಡಿತ್ತು. ಸ್ಥಳ ನಿಯೋಜನೆ ಗೊಂದ, ವಿಧಾನಸಭೆ ಚುನಾವಣೆ ಇತ್ಯಾದಿಗಳ ಮಧ್ಯೆ ಈ ಪ್ರಕ್ರಿಯೆ ನನೆಗುದಿಗೆ ಬಿತ್ತು.
ಇದೀಗ ನಿಯಮಾವಳಿಗಳು ಬದಲಾಗಿದ್ದು ಕೆಲಸಕ್ಕದ ಸೇರಿದ ನಂತರ 5 ವರ್ಷ ಹಾಗೂ ಸೇವಾ ನಿವೃತ್ತಿಗೆ 5 ವರ್ಷ ಮೊದಲು ವರ್ಗಾವಣೆಗೆ ಅವಕಾಶ ಇಲ್ಲ. ಪರಸ್ಪರ ವರ್ಗಾವಣೆಗೆ ಇದ್ದ ಒಂದು ಬಾರಿಯ ಅವಕಾಶದ ಮಿತಿಯನ್ನು ರದ್ದುಗೊಳಿಸಲಾಗಿದೆ. ವರ್ಗಾವಣೆ ಹೊಂದಿದವರು ಇನ್ನೊಂದು ವರ್ಗಾವಣೆಯನ್ನು 3 ವರ್ಷಗಳ ನಂತರ ಕೋರಲು ಅವಕಾಶ ನೀಡಲಾಗಿದೆ.
10ರಿಂದ 20 ವರ್ಷ ಸೇವೆ ಸಲ್ಲಿಸಿ ಪದೋನ್ನತಿ ಪಡೆದ ಶಿಕ್ಷಕರ ಕೋರಿಕೆಯಂತೆ ಸೇವಾ ಅಂಕಗಳನ್ನು ನೀಡಲಾಗಿದೆ. ಗ್ರಾಮೀಣದಲ್ಲಿ ಸೇವೆ ಸಲ್ಲಿಸಿದವರಿಗೆ 3 ಅಂಕ, ಅರೆ ನಗರಗಳಲ್ಲಿ ಸೇವೆ ಸಲ್ಲಿಸಿದವರಿಗೆ 2 ಹಾಗೂ ನಗರಗಳಲ್ಲಿ ಸೇವೆ ಸಲ್ಲಿಸಿದವರಿಗೆ ಒಂದು ಅಂಕ ನೀಡಲಾಗುತ್ತಿದೆ.
ನಂಜುಂಡಪ್ಪ ವರದಿ ಪ್ರಕಾರ ಕರ್ನಾಟಕದ ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶವೆಂದು ಗುರುತಿಸಲಾದ ಆರು ಜಿಲ್ಲೆಗಳಿಗೆ ಹೋಗಲು ಬಯಸುವವರಿಗೆ ವಿಶೇಷ ಆದ್ಯತೆ ನೀಡಲಾಗಿದೆ.
https://pragati.taskdun.com/bsc-hons-awareness-program-at-kls-git/
https://pragati.taskdun.com/increase-in-gold-and-silver-prices/
https://pragati.taskdun.com/heavy-rain-is-likely-in-different-parts-of-the-state-today-continued-yellow-alert/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ