Kannada NewsLatest

ಬೆಳಗಾವಿ ಜಿಲ್ಲಾ ಪಂಚಾಯತಿ ಕಾರ್ಯಾಲಯದಲ್ಲಿ ಶಿವಶರಣ ಶ್ರೀ ಹಡಪದ ಅಪ್ಪಣ್ಣರವರ 885ನೇ ಜಯಂತಿ ಆಚರಣೆ

ಬೆಳಗಾವಿ ಜಿಲ್ಲಾ ಪಂಚಾಯತಿ ಕಾರ್ಯಾಲಯದಲ್ಲಿ ಶಿವಶರಣ ಶ್ರೀ ಹಡಪದ ಅಪ್ಪಣ್ಣರವರ 885ನೇ ಜಯಂತಿ ಆಚರಣೆ

ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : ಬೆಳಗಾವಿ ಜಿಲ್ಲಾ ಪಂಚಾಯತಿ ಕಾರ್ಯಾಲಯದಲ್ಲಿ ಶಿವಶರಣ ಶ್ರೀ ಹಡಪದ ಅಪ್ಪಣ್ಣರವರ 885ನೇ ಜಯಂತಿಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ: ರಾಜೇಂದ್ರ ಕೆ.ವ್ಹಿ. ರವರು ಶ್ರೀ ಹಡಪದ ಅಪ್ಪಣ್ಣರವರ ಜೀವನ ಶೈಲಿಯ ಬಗ್ಗೆ ಸಿಬ್ಬಂದಿಗಳ ಕುರಿತು ಮಾತನಾಡುತ್ತ ಶ್ರೀ ಹಡಪದ ಅಪ್ಪಣ್ಣರವರು ಜೀವನದಲ್ಲಿ ಕಾಯಕ ಯೋಗಿಗಳಾಗಿದ್ದರು.

12ನೇ ಶತಮಾನದ ಕಾಯಕ ಯೋಗಿ ಅಣ್ಣ ಬಸವಣ್ಣನವರ ಅನುಭವ ಮಂಟಪದಲ್ಲಿ ಇವರು ಕೂಡ ಒಬ್ಬ ಶರಣರಾಗಿದ್ದರು. ಇವರು ಪ್ರತಿ ನಿತ್ಯ ಕಾಯಕಯೋಗಿಯಾಗಿದ್ದರು ಅದರಲ್ಲಿ ಬಂದತಂಹ ಹಣವನ್ನು ಶಿವ ಪೂಜೆ ಮತ್ತು ಶರಣರಿಗೆ ಅನ್ನದಾನವನ್ನು ಮಾಡುವ ಪದ್ದತಿಯನ್ನು ಇಟ್ಟುಕೊಂಡಿದ್ದರು. ಇವರ ಸಮಕಾಲಿನವರಾದ ಅಂಬಿಗರ ಚೌಡಯ್ಯ, ನೂಲಿ ಚಂದಯ್ಯ, ಮಡಿವಾಳ ಮಾಚಯ್ಯ, ಡೊಹರ ಕಕ್ಕಯ್ಯ, ಶಿವ ಶರಣೆ ಸಂಕಮ್ಮ, ಮಾದರ ಚನ್ನಯ್ಯ, ಚನ್ನಬಸವಣ್ಣ, ದೇವರ ದಾಸಿಮಯ್ಯ, ಸಮಗಾರ ಹರಳಯ್ಯ ಇನ್ನು ಹಲವಾರು ಶರಣರು ಅನುಭವ ಮಂಟಪದಲ್ಲಿ ಸೇರಿ ಅಣ್ಣ ಬಸವಣ್ಣನವರ ಜೋತೆಗೂಡಿ ವಿಚಾರ ವಿನಿಮಯ ಮಾಡಿಕೊಳ್ಳುತ್ತಿದ್ದರು.

ಜ್ಞಾನ ಎನ್ನುವುದು ಯಾರ ಸೊತ್ತು ಅಲ್ಲಾ, ಜಾತಿ-ಧರ್ಮ ಅನ್ನದೇ ಸುಜ್ಞಾನದ ಕಡೆಗೆ ಓಯ್ಯಲು ಜ್ಞಾನದ ಪ್ರವಚನವನ್ನು ಮಾಡುತ್ತಿದ್ದರು. ನಾವು ಕೂಡ ಅವರ ಹಾದಿಯಲ್ಲಿ ನಡೆದು ನಮ್ಮ ಕಾಯಕದಲ್ಲಿ ಅವರ ತತ್ವಗಳನ್ನು ಪಾಲಿಸಿದರೆ ಮಾತ್ರ ಜಯಂತಿ ಆಚರಣೆ ಮಾಡಿರುವುದು ಸಾರ್ಥಕ ಎಂದು ಎಂದು ಹೇಳುತ್ತಾ ಎಲ್ಲರಿಗೂ ಶುಭಾಷಯ ಕೋರಿದರು.

ಈ ಸಂದರ್ಭದಲ್ಲಿ ಡಿ. ಎಂ. ಜಕ್ಕಪ್ಪಗೋಳ, ಉಪಕಾರ್ಯದರ್ಶಿಗಳು (ಆಡಳಿತ), ಜಿ.ಪಂ. ಬೆಳಗಾವಿ, ಎಸ್. ಬಿ. ಮುಳ್ಳಳ್ಳಿ, ಉಪಕಾರ್ಯದರ್ಶಿಗಳು (ಅಭಿವೃದ್ಧಿ) ಜಿ.ಪಂ. ಬೆಳಗಾವಿ ಮತ್ತು ಪರಶುರಾಮ ದುಡಗುಂಟಿ, ಮುಖ್ಯ ಲೆಕ್ಕಾಧಿಕಾರಿಗಳು, ಜಿ.ಪಂ. ಬೆಳಗಾವಿ ಹಾಗೂ ಜಿಲ್ಲಾ ಪಂಚಾಯತಿಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. ////

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button