ಪ್ರಗತಿವಾಹಿನಿ ಸುದ್ದಿ, ಚಿಕ್ಕಮಗಳೂರು: ಪ್ರಕರಣ ದಾಖಲಿಸಿಕೊಳ್ಳಲು ಪೊಲೀಸರು ವಿಳಂಬಿಸಿದ್ದಕ್ಕೆ ಸಿಟ್ಟಿಗೆದ್ದ ಮಹಿಳೆಯೊಬ್ಬರು ನ್ಯಾಯಕ್ಕಾಗಿ ರಾತ್ರಿ 1 ಗಂಟೆಯವರೆಗೂ ಜಿಲ್ಲೆಯ ಕಳಸ ತಾಲೂಕಿನ ಕುದುರೆಮುಖ ಪೊಲೀಸ್ ಠಾಣೆಯಲ್ಲಿ ಕುಳಿತು ಪಟ್ಟು ಹಿಡಿದ ಘಟನೆ ನಡೆದಿದೆ.
ನೆರೆಮನೆ ಯುವಕರು ತಮ್ಮೊಂದಿಗೆ ಅಸಭ್ಯವಾಗಿ ವರ್ತಿಸುತ್ತಿರುವುದಾಗಿ ಹಾಗೂ ಪತಿಗೆ ಜೀವ ಬೆದರಿಕೆ ಹಾಕುತ್ತಿರುವುದಾಗಿ ದೂರು ನೀಡಲು ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.
ಆದರೆ ಈ ಕುರಿತು ಪ್ರಕರಣ ದಾಖಲಿಸಿಕೊಳ್ಳಲು ಕುದುರೆಮುಖ ಠಾಣೆ ಪೊಲೀಸರು ಹಿಂದೇಟು ಹಾಕಿದ್ದಾಗಿ ಆರೋಪಿಸಲಾಗಿದೆ. ಇದರಿಂದ ಕೆರಳಿದ ಮಹಿಳೆ ಕಳಸ ಪೊಲೀಸ್ ನಿರೀಕ್ಷಕರ ಕಚೇರಿಯಲ್ಲಿ ಮಧ್ಯರಾತ್ರಿ ನಂತರದವರೆಗೂ ಕುಳಿತು ದೂರು ದಾಖಲಿಸಿಕೊಳ್ಳುವಂತೆ ಪಟ್ಟು ಹಿಡಿದು ಕುಳಿತರು.
ಮಗುವಿಗೆ ಠಾಣೆಯ ಬೆಂಚ್ ಮೇಲೆಯೇ ಮಲಗಿಸಿ ಅಲ್ಲಿಂದ ಕದಲದೆ ಕುಳಿತ ಮಹಿಳೆಯ ಅಚಲ ನಿರ್ಧಾರಕ್ಕೆ ಮಣಿದ ಪೊಲೀಸರು ಕೊನೆಗೂ ದೂರು ದಾಖಲಿಸಿಕೊಳ್ಳಬೇಕಾಯಿತು. ಈ ಕುರಿತ ವಿಡಿಯೊ ಈಗ ಜಾಲತಾಣದಲ್ಲಿ ವೈರಲ್ ಆಗಿದೆ.
https://pragati.taskdun.com/extension-of-restraining-order-in-dcm-d-k-shivakumars-disproportionate-assets-case/
https://pragati.taskdun.com/gold-and-silver-prices-decreased-today/
https://pragati.taskdun.com/honble-chief-minister-bommais-letter-to-siddaramaiah/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ