Kannada NewsKarnataka News

ಬುಲೆಟ್ ಬೈಕ್ ಕಳ್ಳನ ಬಂಧನ

ಅಥಣಿ ಪೊಲೀಸರಿಂದ ಬುಲೇಟ್ ಬೈಕ್ ಕಳ್ಳನ ಬಂಧನ: ಸುಮಾರು ರೂ-500000/-  ಕಿಮ್ಮತ್ತಿನ ಸ್ವತ್ತು ವಶಕ್ಕೆ

ಪ್ರಗತಿವಾಹಿನಿ ಸುದ್ದಿ, ಅಥಣಿ: 
ಅಥಣಿ ಪಟ್ಟಣ ಹಾಗೂ ತಾಲೂಕಿನಾದ್ಯಾಂತ ಹೆಚ್ಚುತ್ತಿರುವ ಬುಲೇಟ್ ಮೋಟರ್ ಸೈಕಲ್ ಕಳ್ಳತನ ಪ್ರಕರಣಗಳನ್ನು ಪತ್ತೆ ಹಚ್ಚುವ ಸಲುವಾಗಿ  ಪೊಲೀಸ ಅಧೀಕ್ಷಕ  ಸಂಜೀವ ಪಾಟೀಲ್ಹಾ ಗೂ ಹೆಚ್ಚುವರಿ ಪೊಲೀಸ್ ಅಧಿಕ್ಷಕ ಎಮ್ ವೇಣುಗೋಪಾಲ, ಡಿಎಸ್ಪಿ ಶ್ರೀಪಾಲ ಜಲ್ಲೆ   ಮತ್ತು ಸಿಪಿಐ ರವೀಂದ್ರ ಕೆ ನಾಯ್ಕಡಿ  ಮಾರ್ಗದರ್ಶನದಲ್ಲಿ  ಶಿವಶಂಕರ ಮುಕರಿ ಪಿ ಎಸ್ ಐ ( ಕಾ & ಸು)   ಚಂದ್ರಶೇಖರ ಸಾಗನೂರ ಪಿ ಎಸ್ ಐ,  ಎಸ್. ಎಸ್ ಇಂಡಿಕರ ಪಿಎಸ್‌ಐ (ಅ.ವಿ)  ನೇತೃತ್ವದಲ್ಲಿ ಅಥಣಿ ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ವಿ ಜಿ ಆರೇರ ಎಎಸ್‌ಐ, ಜಮೀರ ಢಾಂಗೆ, ಶ್ರೀಧರ ಬಾಂಗಿ, ಎಮ್ ಎ ಪಾಟೀಲ, ಪಿ ಚ ನಾಯಿಕ, ವಿನೋದ ಠಕ್ಕನ್ನವರ  ಇವರನ್ನೊಳಗೊಂಡ ತಂಡ ರಚಿಸಲಾಗಿತ್ತು.
  ಶನಿವಾರ ತಂಡ 1 ಆರೋಪಿಯನ್ನು ಬಂಧಿಸಿ ಆತನಿಂದ ಒಟ್ಟು ಸುಮಾರು 5 ಲಕ್ಷ ರೂ ಕಿಮ್ಮತ್ತಿನ 3 ಬುಲೇಟ್ -ಮೋಟರ್ ಸೈಕಲ್ ಗಳನ್ನು  ಜಪ್ತ ಮಾಡಿಕೊಳ್ಳಲಾಗಿದೆ.  ತನಿಖಾ ತಂಡದ ಕಾರ್ಯವನ್ನು ಶ್ಲಾಘಿಸಿ ಆರಕ್ಷಕ ಅಧೀಕ್ಷಕರು   ನಗದು ಬಹುಮಾನ ಮತ್ತು ಪ್ರಶಂಸನಾ ಪತ್ರ ನೀಡಿದ್ದಾರೆ.

 

Home add -Advt

Related Articles

Back to top button