ವ್ಯಾಸರಾಯರ ವೃಂದಾವನದಲ್ಲಿ ದುಷ್ಕೃತ್ಯ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ಹಂಪಿ ನವವೃಂದಾವನ ಗಡ್ಡೆಯಲ್ಲಿ ನಡೆದಿರುವ ದುಷ್ಕೃತ್ಯವನ್ನು ಖಂಡಿಸಿರುವ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷ ಹನುಮಂತ ಕೊಟಬಾಗಿ, ಅಪರಾಧಿಗಳ ಮೇಲೆ ಕಾನೂನು ಕ್ರಮ ತೆಗೆದುಕೊಂಡು ನವವೃಂದಾವನಕ್ಕೆ ರಕ್ಷಣೆ ನೀಡಬೇಕೆಂದು ಆಗ್ರಹಿಸಿದ್ದಾರೆ.
ಗಂಗಾವತಿಯ ಆನೆಗೊಂದಿ ಎಂಬ ಊರಿನ ನಡುಗಡ್ಡೆಯ ಒಂಬತ್ತು ಬೃಂದಾವನಗಳಲ್ಲಿ ಇತಿಹಾಸದ ಪರಂಪರೆಯುಳ್ಳ ವ್ಯಾಸರಾಯರ ವೃಂದಾವನವನ್ನು ಕಿಡಿಗೇಡಿಗಳು ಕೆಡವಿ ಏನಾದರೂ ಆ ವೃಂದಾವನದ ಬುಡಕ್ಕೆ ನಿಧಿ ವಜ್ರ ವೈಢೂರ್ಯಗಳು ಸಿಗುತ್ತವೆಯೇ ಎಂಬ ದುರಾಲೋಚನೆಯಿಂದ ವೃಂದಾವನವನ್ನು ಕೆಡವಿ ಅಲ್ಲಿ ಶೋಧಿಸುವ ಕೆಲಸವನ್ನು ಮಾಡಿದ್ದಾರೆ.
ಇದೊಂದು ಅಪಚಾರ ಇಡೀ ಮಾಧ್ವ ಸಮಾಜಕ್ಕೆ ಮತ್ತು ಇಡೀ ಜಗತ್ತಿಗೆ ವ್ಯಾಸರಾಯರು ದೊಡ್ಡ ಗುರುಗಳು. ನಾರಾಯಣನಾದ ವೆಂಕಟೇಶ್ವರನ ಪೂಜೆ ಮಾಡಿರುವ ವ್ಯಾಸರಾಯರ ವೃಂದಾವನವನ್ನು ಕೆಡವಿದ ಆ ದುಷ್ಕರ್ಮಿಗಳಿಗೆ ಶಿಕ್ಷೆಯನ್ನು ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ