Kannada NewsKarnataka News

ಇಬ್ಬರು ಯುವತಿಯರು ನಾಪತ್ತೆ


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿಯ ರೈತಗಲ್ಲಿ, ಮುಜಾವರ ಬಿಲ್ಡಿಂಗ್, ವಡಗಾವಿಯ ನಿವಾಸಿಯಾದ ಸಾನೀಕಾ ದಶರಥ ಸುತಾರ(೨೬) ಇವರು ಜೂನ್ ೧, ೨೦೨೩ ರಂದು ಸಂಜೆ ೭ ಗಂಟೆಗೆ ಮನೆಯಿಂದ ಹೊರಗಡೆ ಹೋದವರು ಮರಳಿ ಬಾರದೇ ಕಾಣೆಯಾಗಿದ್ದಾರೆ ಎಂದು ಇವರ ತಂದೆ ಶಹಾಪೂರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕಾಣೆಯಾದ ಯುವತಿಯ ಚಹರೆ :
ಎತ್ತರ ೪ ಫೂಟ್ ೬ ಇಂಚು. ಕೋಲು ಮುಖ, ನೆಟ್ಟನೆಯ ಮೂಗು, ಸದೃಢ ಮೈಕಟ್ಟು, ಹಾಗೂ ಗೋಧಿಗೆಂಪು ಮೈಬಣ್ಣ ಹೊಂದಿದ್ದಾರೆ. ಬಿಳಿ ಬಣ್ಣದ ಟಾಪ್ ಮತ್ತು ನೀಲಿ ಬಣ್ಣದ ಜಿನ್ಸ್ ಪ್ಯಾಂಟ್ ಧರಿಸಿರುತ್ತಾರೆ ಹಾಗೂ ಮರಾಠಿ ಭಾಷೆ ಮಾತನಾಡುತ್ತಾರೆ.
ಯುವತಿಯ ಬಗ್ಗೆ ಮಾಹಿತಿ ದೊರೆತಲ್ಲಿ ಪೊಲೀಸ್ ಆಯುಕ್ತರು ಬೆಳಗಾವಿ ನಗರ ಅಥವಾ ಪೊಲೀಸ್ ಇನ್ಸ್‌ಪೆಕ್ಟರ್ ಶಹಾಪೂರ್ ಪೋಲಿಸ್ ಠಾಣೆ ಅಥವಾ ಪೊಲೀಸ್ ಕಂಟ್ರೋಲ್ ರೂಂ ೦೮೩೧-೨೪೦೫೨೩೩ ಅಥವಾ ೦೮೩೧-೨೪೦೫೨೪೪, ಮೊ.ಸಂ ೯೪೮೦೮೦೪೦೪೬ ಗೆ ಸಂಪರ್ಕಿಸಬಹುದು ಎಂದು ಶಹಾಪೂರ ಪೊಲೀಸ್ ಠಾಣೆ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ರಾಮದುರ್ಗ ಯುವತಿ ನಾಪತ್ತೆ
ರಾಮದುರ್ಗ ತಾಲೂಕಿನ ಬನ್ನೂರ ತಾಂಡಾದ ನಿವಾಸಿಯಾದ ಸುರೇಖಾ ಭೀಲಪ್ಪಾ ರಾಠೋಡ(೨೧) ಇವರು ಬೆಳಗಾವಿಯ ಸಫಾರಗಲ್ಲಿ ವಡಗಾವಿಯಿಂದ ಇವರು ಜೂನ್.೫ ೨೦೨೩ ರಂದು ಮದ್ಯಾಹ್ನ ೨.೧೫ ರಿಂದ ಸಂಜೆ ೪ ಗಂಟೆಯ ನಡುವಿನ ಅವಧಿಯಲ್ಲಿ ಮನೆಯಿಂದ ಹೊರಗಡೆ ಹೋದವರು ಮರಳಿ ಬಾರದೇ ಕಾಣೆಯಾಗಿದ್ದಾರೆ ಎಂದು ಇವರ ತಾಯಿ ಶಹಾಪೂರ ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Home add -Advt

ಕಾಣೆಯಾದ ಯುವತಿಯ ಚಹರೆ :
ಎತ್ತರ ೪ ಫೂಟ್, ಕೋಲು ಮುಖ, ನೆಟ್ಟನೆಯ ಮೂಗು, ಸದೃಢ ಮೈಕಟ್ಟು, ಹಾಗೂ ಗೋಧಿಗೆಂಪು ಮೈಬಣ್ಣ ಹೊಂದಿದ್ದಾರೆ. ಹಳದಿ ಬಣ್ಣದ ಟಾಪ್ ಮತ್ತು ಬಿಳಿ ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ ಹಾಗೂ ಕನ್ನಡ ಮತ್ತು ಲಮಾಣಿ ಭಾಷೆ ಮಾತನಾಡುತ್ತಾರೆ.
ಸದರಿ ಯುವತಿಯ ಬಗ್ಗೆ ಮಾಹಿತಿ ದೊರೆತಲ್ಲಿ ಪೊಲೀಸ್ ಆಯುಕ್ತರು ಬೆಳಗಾವಿ ನಗರ ರವರಿಗೆ ಅಥವಾ ಪೊಲೀಸ ಇನ್ಸ್‌ಪೆಕ್ಟರ್ ಶಹಾಪೂರ್ ಪೋಲಿಸ್ ಠಾಣೆ ಅಥವಾ ಪೊಲೀಸ್ ಕಂಟ್ರೋಲ್ ರೂಂ ೦೮೩೧-೨೪೦೫೨೩೩ ಅಥವಾ ೦೮೩೧-೨೪೦೫೨೪೪, ಮೊ.ಸಂ ೯೪೮೦೮೦೪೦೪೬ ಗೆ ಸಂಪರ್ಕಿಸಬಹುದು ಎಂದು ಶಹಾಪೂರ ಪೊಲೀಸ್ ಠಾಣೆ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Related Articles

Back to top button