ಪ್ರಗತಿವಾಹಿನಿ ಸುದ್ದಿ, ತುಮಕೂರು: ಎರಡು ಕುಟುಂಬಗಳ ಮಧ್ಯೆ ನಡೆದ ಗಲಾಟೆಯಲ್ಲಿ ಯುವಕನೊಬ್ಬ ಮೃತಪಟ್ಟಿದ್ದಾನೆ.
ಜಿಲ್ಲೆ ತಿಪಟೂರು ತಾಲೂಕಿನ ಕನ್ನುಘಟ್ಟ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಮೃತನನ್ನು ವಸಂತ್ಕುಮಾರ್(24) ಎಂದು ಗುರುತಿಸಲಾಗಿದೆ.
ಚರಂಡಿ ನೀರು ಹರಿದುಹೋಗುವ ವಿಚಾರಕ್ಕೆ ಶಿವಬಸವಯ್ಯ ಮತ್ತು ಬಸವಲಿಂಗಯ್ಯ ಕುಟುಂಬದ ನಡುವೆ ಕುಟುಂಬಗಳ ನಡುವೆ ಗಲಾಟೆ ನಡೆದಿತ್ತು. ಇದು ಹೊಡೆದಾಟಕ್ಕೆ ತಿರುಗಿ ಬಸವಲಿಂಗಯ್ಯ ಕುಟುಂಬದವರು ಶಿವಬಸವಯ್ಯ ಕುಟುಂಬದ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದರು. ಈ ವೇಳೆ ಶಿವಬಸವಯ್ಯ ಪುತ್ರ ವಸಂತಕುಮಾರ್ ಗಂಭೀರ ಗಾಯಗೊಂಡಿದ್ದ.
ಪ್ರಕರಣದ ಸಂಬಂಧ ಬಸವಲಿಂಗಯ್ಯ, ಕುಮಾರ್, ವಿಜಯ್ ಸೇರಿದಂತೆ 8 ಜನರ ವಿರುದ್ಧ ನೊಣವಿನಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ