ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಕೆಲವು ಕೆಲಸಗಳು ಕೆಲವೇ ಅದೃಷ್ಟವಂತರಿಗೆ ಒಲಿದು ಬರುತ್ತವೆ. ಕೆಲಸಕ್ಕಿಂತ ಮಿಗಿಲಾಗಿ ಸಂಬಳವೇ ಜೀವನದ ಆಕರ್ಷಣೆ ಹೆಚ್ಚಿಸುತ್ತದೆ. ಇಷ್ಟಕ್ಕೂ ಬಾಲಿವುಡ್ ನ ಕೆಲ ತಾರೆಗಳ ಬಾಡಿಗಾರ್ಡ್ ಗಳು ತಿಂಗಳಿಗೆ ಕೋಟಿಗಟ್ಟಲೆ ಸಂಬಳ ಪಡೆಯುವ ವಿಷಯ ಇತ್ತೀಚೆಗೆ ಭಾರಿ ಚರ್ಚೆಯಲ್ಲಿದೆ. ಇದೇ ವೇಳೆ ನಾಯಿ ನೋಡಿಕೊಂಡು ಕೋಟಿ ಗಳಿಸುವ ಕೆಲಸವೊಂದು ಸದ್ದುಮಾಡಿದೆ.
ಅಮೆರಿಕದ ಶ್ರೀಮಂತ ಕುಟುಂಬವೊಂದು ಇಂಥ ನಿರ್ಧಾರ ಪ್ರಕಟಿಸಿದೆ. ಅವರ ಮನೆಯಲ್ಲಿರುವ ನಾಯಿಯನ್ನು ಮಾಲೀಕರು ಸರಿಯಾಗಿ ಆರೈಕೆ ಮಾಡುವುದು ಸಾಧ್ಯವಾಗುತ್ತಿಲ್ಲ ಎಂಬ ಕಾರಣಕ್ಕೆ ನಾಯಿ ಆರೈಕೆ ನೋಡಿಕೊಳ್ಳುವವರಿಗಾಗಿ ಅವರು ಪ್ರಕಟಣೆ ಹೊರಡಿಸಿದ್ದಾರೆ. ಇದಕ್ಕೆ ಕೋಟಿ ಸಂಬಳ ಕೂಡ ನಿಗದಿಪಡಿಸಿದ್ದಾರೆ.
‘ನ್ಯಾನ್ಸಿ’ ಹೆಸರಿನ ನಾಯಿಯ ಆರೈಕೆಗೆ ಆನ್ ಲೈನ್ ನಲ್ಲಿ ನೀಡಿದ ಜಾಹೀರಾತಿಗೆ ಈಗಾಗಲೇ 300ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆಯಂತೆ. ಹಾಗಂತ ಸುಮ್ಮನೆ ನಾಯಿ ನೋಡಿಕೊಂಡು ಕೂತರೆ ಈ ಜಾಬ್ ನಡೆಯುವುದಿಲ್ಲ. ನಾಯಿ ನೋಡಿಕೊಳ್ಳುವವನಿಗೆ ಆ ನಾಯಿಯ ಜೀವನ, ಆಹಾರಕ್ರಮ, ಆರೋಗ್ಯ ಸೇರಿದಂತೆ ಎಲ್ಲ ಬಗೆಯ ಮಾಹಿತಿಗಳೂ ಇರಬೇಕಂತೆ. ಕುಟುಂಬದವರಷ್ಟೇ ಕಾಳಜಿಯಿಂದ ನಾಯಿಯನ್ನು ನೋಡಿಕೊಳ್ಳಬೇಕೆಂತೆ.
‘ಶ್ವಾನ ಪಾಲಕ’ನಾಗಿ ಕೋಟಿ ಎಣಿಸುವ ಅದೃಷ್ಟವಂತ ಯಾರಾಗಬಹುದೆಂಬುದು ಮಾತ್ರ ಕುತೂಹಲಕಾರಿ ಎನಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ