Uncategorized

*ಅರಣ್ಯ ಹಕ್ಕು ಕಾಯಿದೆಯಲ್ಲಿ ಅರ್ಜಿ ತೀರಸ್ಕಾರ; ಜುಲೈ 3 ರಂದು ಸಾಗರದಲ್ಲಿ ಮೇಲ್ಮನವಿ ಅಭಿಯಾನಕ್ಕೆ ಚಾಲನೆ*

ಪ್ರಗತಿವಾಹಿನಿ ಸುದ್ದಿ; ಶಿರಸಿ: ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ, ಅರಣ್ಯ ಭೂಮಿ ಸಾಗುವಳಿ ಹಕ್ಕಿಗಾಗಿ ಅರ್ಜಿ ಸಲ್ಲಿಸಿದ ಅರಣ್ಯವಾಸಿಗಳ ಮಂಜೂರಿ ಪ್ರಕ್ರೀಯೆಗೆ ಸಂಬಂಧಿಸಿ ಉಪವಿಭಾಗಾಧಿಕಾರಿ ಮತ್ತು ಅಧ್ಯಕ್ಷರು ಉಪವಿಭಾಗ ಅರಣ್ಯ ಹಕ್ಕು ಸಮಿತಿ ಸಾಗರ ಅವರೊಂದಿಗೆ ಜುಲೈ ೩, ಸೋಮವಾರ ಮುಂಜಾನೆ ೧೧ ಗಂಟೆಗೆ ಮಂಜೂರಿ ಪ್ರಕ್ರಿಯೇಯಲ್ಲಿ ಅರಣ್ಯವಾಸಿಗಳಿಗೆ ಉಂಟಾದ ಸಮಸ್ಯೆಗಳ ಕುರಿತು ಚರ್ಚಿಸಲಾಗುವುದೆಂದು ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 ಸಾಗರ ತಾಲೂಕಿನಾದ್ಯಂತ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರಣ್ಯವಾಸಿಗಳು ಸಲ್ಲಿಸಿದ ಅರ್ಜಿ ಕಾನೂನು ಬಾಹಿರ ಮತ್ತು ಕಾನೂನಿಗೆ ವ್ಯತಿರಿಕ್ತವಾಗಿ ತೀರಸ್ಕರಿಸಲ್ಪಟ್ಟ ಹಿನ್ನೆಲೆಯಲ್ಲಿ ಮೇಲ್ಮನವಿ ಸಲ್ಲಿಸಲಾಗುವುದಲ್ಲದೇ, ಅದೇ ಸಂದರ್ಭದಲ್ಲಿ ಉಪವಿಭಾಗಾಧಿಕಾರಿ ಮತ್ತು ಅಧ್ಯಕ್ಷರು ಉಪವಿಭಾಗ ಅರಣ್ಯ ಹಕ್ಕು ಸಮಿತಿ ಅವರೊಂದಿಗೆ ಕಾನೂನಿಗೆ ವ್ಯತಿರಿಕ್ತವಾಗಿ, ಕಾನೂನಿನ ವಿಧಿ ವಿಧಾನ ಅನುಸರಿಸದೇ ಅರ್ಜಿಗಳನ್ನು ತೀರಸ್ಕರಿಸಿರುವುದರಿಂದ ಚರ್ಚಿಸಲಾಗುವುದೆಂದು ಅವರು ತಿಳಿಸಿದ್ದಾರೆ.

ಶಿವಮೊಗ್ಗ ; ಶೇ. ೨೨.೫೭ ರಷ್ಟು ತೀರಸ್ಕಾರ:
 ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಶಿವಮೊಗ್ಗ ಜಿಲ್ಲೆ ವಿವಿಧ ಗ್ರಾಮ ಅರಣ್ಯ ಹಕ್ಕು ಸಮಿತಿಗಳಲ್ಲಿ ಬುಡಕಟ್ಟು- ೪,೫೭೭, ಪಾರಂಪರಿಕ- ೯೦,೮೫೪ ಹಾಗೂ ಸಮೂಹ ಉದ್ದೇಶಕ್ಕಾಗಿ-೧,೬೪೪ ಹೀಗೆ ಒಟ್ಟೂ ೯೭,೦೭೫ ಅರಣ್ಯವಾಸಿಗಳು ಅರ್ಜಿ ಸಲ್ಲಿಸಿದ್ದು ಇರುತ್ತದೆ. ಅವುಗಳಲ್ಲಿ ಬುಡಕಟ್ಟು ೧,೯೭೦, ಪಾರಂಪರಿಕ ೪೩೯, ಸಮೂಹ ಉದ್ದೇಶಕ್ಕೆ ೩೫ ಹೀಗೆ ಒಟ್ಟು ೨,೪೪೪ ಅರ್ಜಿಗಳಿಗೆ ಮಾನ್ಯತೆ ಸಿಕ್ಕಿರುವುದಾಗಿ ಹಾಗೂ ಒಟ್ಟೂ ೨೧,೯೧೬ ಅರ್ಜಿಗಳು(ಶೇ. ೨೨.೫೭)  ತೀರಸ್ಕಾರವಾಗಿರುವ ಅಂಕೆ-ಸAಖ್ಯೆ ೨೦೨೧ ರ ಮೇ ಪ್ರಕಾರ ತಿಳಿದು ಬರುತ್ತದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button