Kannada NewsLatest

ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಅವಶ್ಯ- ಪಾರ್ವತಿ ವಸ್ತ್ರದ

ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಅವಶ್ಯ- ಪಾರ್ವತಿ ವಸ್ತ್ರದ

ಪ್ರಗತಿವಾಹಿನಿ ಸುದ್ದಿ – ನೇಗಿನಹಾಳ : ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕೇವಲ ಆಧುನೀಕರಣಕ್ಕೆ ಮಹತ್ವ ಕೊಡುತ್ತಾ ನಮ್ಮ ಸಂಸ್ಕೃತಿ ಸಂಸ್ಕಾರ ಮರೆಮಾಚುತ್ತಾ ಹೋಗುತ್ತಿದೆ ಆದರಿಂದ ಪ್ರತಿತೊಬ್ಬರೂ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುವುದರೊಂದಿಗೆ ಗುಣಾತ್ಮಕ ಶಿಕ್ಷಣ ನೀಡುವುದು ಅತ್ಯಂತ ಅವಶ್ಯವಾಗಿದೆ ಎಂದು ಬೈಲಹೊಂಗಲ ಕ್ಷೇತ್ರ ಶಿಕ್ಷಣಾಧಿಕಾರಿ ಪಾರ್ವತಿ ವಸ್ತ್ರದ ಹೇಳಿದರು.

ನೇಗಿನಹಾಳ ಗ್ರಾಮದಲ್ಲಿ ಲಿಂಗಾಯತ ಅಭಿವೃದ್ಧಿ ಸಂಸ್ಥೆಯಿಂದ ಆರಂಬಿಸಲಾದ ಶ್ರೀ ಗುರು ಬಸವೇಶ್ವರ ಪೂರ್ವ-ಪ್ರಾಥಮಿಕ ಶಾಲೆಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

ಇಂದಿನ ದಿನಮಾನಗಳಲ್ಲಿ ಒಂದು ನಿಮಿಷದಿಂದ ನಿಮಿಷಕ್ಕೆ ವಿನೂತನ ಅನ್ವೇಷಣೆಗಳು ರೂಪಗೊಳ್ಳುತ್ತಿರುವ ಸಂದರ್ಭದಲ್ಲಿ ಅದಕ್ಕೆ ತಕ್ಕಂತೆ ಸರಕಾರಿ, ಅರೇ ಸರಕಾರಿ ಹಾಗೂ ಶಾಲೆಗಳು ಸಹ ಮಾರ್ಪಾಡುಗೊಂಡು ಶಿಕ್ಷಣ ನೀಡಬೇಕೆಂದರು. ಅಕ್ಷರ ದಾಸೋಹ ಸಹಾಯಕ ನಿರ್ದೇಶಕರಾದ ಪ್ರಕಾಶ ಮೆಳವಂಕಿ ಸತ್ಕಾರ ಸ್ವೀಕರಿಸಿ ಮಾತನಾಡಿ ನಮ್ಮ ಗ್ರಾಮ ಬೆಳಗಾವಿ ಜಿಲ್ಲೆಗೆ ಅತೀ ಶಿಕ್ಷಕರನ್ನು ನೀಡಿದ ಗ್ರಾಮವಾಗಿದ್ದು ಇಂದು ಗುಣಾತ್ಮಕ ಹಾಗೂ ಆಧುನಿಕ ಶಿಕ್ಷಣಕ್ಕೆ ಒತ್ತು ನೀಡುವ ಉದ್ದೇಶದಿಂದ ನೂತನವಾಗಿ ಶಾಲೆಯನ್ನು ಆರಂಭಿಸಿದ್ದು ಇದು ಸಂಪೂರ್ಣ ಜಿಲ್ಲೆಗೆ ಹೆಸರು ಮಾಡುವಂತಾಗಲಿ ಎಂದರು.

ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ರೋಹಿಣಿ ಪಾಟೀಲ ಮಾತನಾಡಿ ಭೌವಿಷ್ಯತಿನ ದಿನಗಳಲ್ಲಿ ಶಿಕ್ಷಣ ಮತ್ತು ಸಂಸ್ಕಾರ ಎರಡು ಒಂದೇ ದಾರಿಯಲ್ಲಿ ನಡೆಸುವ ನಿಟ್ಟಿನಲ್ಲಿ ಪ್ರಯತ್ನಿಸುವ ಗುರಿಯನ್ನಿಟುಕೊಂಡು ಇತಂಹ ಒಂದು ಪ್ರಯತ್ನ ಮಾಡುತ್ತಿದ್ದೇವೆ ಅದಕ್ಕೆ ತಮ್ಮರೆಲ್ಲ ಮಾರ್ಗದರ್ಶನ, ಸಹಾಯ ಮತ್ತು ಸಹಕಾರ ಅವಶ್ಯವಿದೆ ಎಂದರು.

ಜಗದ್ಗುರು ಮಡಿವಾಳೇಶ್ವರ ಶಿವಯೋಗಿಗಳ ಮಠ ಪೀಠಾಧಿಪತಿಗಳಾದ ಬಸವ ಸಿದ್ಧಲಿಂಗ ಸ್ವಾಮೀಜಿಗಳು ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿ ನಾನು ಕೂಡಾ ಇಂಗ್ಲೀಷ್ ಭಾಷೆಯನ್ನು ಕಲಿಯುವಲ್ಲಿ ಅವಕಾಶ ವಂಚಿತನಾಗಿದ್ದೆ ಇದಕ್ಕೆ ನನ್ನದು, ನಮ್ಮ ಶಿಕ್ಷಕರದ್ದು ಹಾಗೂ ನಮ್ಮ ತಂದೆ-ತಾಯಿಗಳದ್ದು ದೋಷವಿತ್ತು. ಆದರಿಂದ ಇಂದು ಒಳ್ಳೆಯ ಸಂಸ್ಕಾರಯುತ ಶಾಲೆ ಆರಂಭಿಸಿದ್ದಾರೆ ಅದಕ್ಕೆ ನಮ್ಮ ಸಹಕಾರ ಪ್ರತಿಯೊಂದು ಹಂತದಲಿರುತ್ತದೆ ಎಂದರು.

ಜಿ.ಪಂ ಮಾಜಿ ಸದಸ್ಯ ಬಾಬಾಸಾಹೇಬ ಪಾಟೀಲ, ಬೆಳಗಾವಿ ಜಿಲ್ಲಾ ಲಿಂಗಾಯತ ಸಂಘಟನೆ ಸಂಸ್ಥಾಪಕ ಅದ್ಯಕ್ಷ ಶಂಕರ ಗುಡಸ, ಸಮಾಜ ಸೇವಕರಾದ ಕೃಷ್ಣಾಜಿ ಕುಲಕರ್ಣಿ, ಮಾತನಾಡಿದರು. ಗ್ರಾಮದ ಗಣ್ಯರಾದ ಕಾಶೀನಾಥ ಇನಾಮದಾರ, ತಾ.ಪಂ ಸದಸ್ಯ ಮಡಿವಾಳಪ್ಪ ಕುಲ್ಲೊಳ್ಳಿ, ಗ್ರಾ.ಪಂ ಸದಸ್ಯ ಸುವರ್ಣಾ ಕಾರಿಮನಿ, ಪ್ರಕಾಶ ಮಾಸ್ತಿಹೊಳಿ, ಅಜಪ್ಪ ಅಂಗಡಿ, ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಅರವಿಂದ ಪರುಶಟ್ಟಿ, ರಾಜು ಪದಮ್ಮಣ್ಣವರ, ತಾ.ಪಂ ಮಾಜಿ ಸದಸ್ಯೆ ಕರೆವ್ವ ಕಾರಿಮನಿ, ಅಶೋಕ ಪಾಟೀಲ, ಪ್ರಭು ಮರಿತಮ್ಮನವರ, ಮಹಾದೇವ ಮಡಿವಾಳರ, ಈರಣ್ಣಾ ಉಳವಿ, ಚಿದಾನಂದ ಬೆಳಗಾವಿ, ವೀರೇಶ ಹಲಕಿ, ನಾಗರಾಜ ಕುಂಕೂರ ಹಾಗೂ ಪಾಲಕರು, ಊರಿನ ಎಲ್ಲ ಶಾಲೆಗಳ ಮುಖ್ಯೋಪಾದ್ಯಯರು, ಶಿಕ್ಷಕರು, ಜನಪ್ರತಿನಿಧಿಗಳು ಉಪಸ್ಥಿತರಿದ್ದರು. ಶಿವಾನಂದ ಮೆಟ್ಯಾಲ ಸ್ವಾಗತಿಸಿದರು, ಪರವೀನ ಕೌಜಲಗಿ ವಂದಿಸಿದರು. ನಾಗಮ್ಮ ಅವರೊಳ್ಳಿ ವಂದಿಸಿದರು.////

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button