EducationKannada NewsKarnataka NewsLatestUncategorized

ಪ್ರೇಕ್ಷಕರ ಗ್ಯಾಲರಿಗೆ ತೆರಳಲು ಕಾಯುತ್ತಿದ್ದ ಶಾಲಾ ಮಕ್ಕಳನ್ನು ಭೇಟಿಯಾದ ಸಚಿವೆ; ಹಸ್ತಲಾಘವ ನೀಡಿ ಖುಷಿಪಟ್ಟ ಮಕ್ಕಳು

ಬೆಂಗಳೂರು: ವಿಧಾನಮಂಡಲ ಅಧಿವೇಶನ ಹಿನ್ನೆಲೆಯಲ್ಲಿ ಸದನದ ಕಲಾಪ ವೀಕ್ಷಿಸಲು ಬಂದಿದ್ದ ಶಾಲಾ ಮಕ್ಕಳನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿಯಾದರು.

ವಿಧಾನಮಂಡಳದ ಅಧಿವೇಶನ ವೀಕ್ಷಿಸುವ ಸಲುವಾಗಿ ವಿಧಾನಸಭೆಯ ಪಡಸಾಲೆಯಲ್ಲಿ ಪ್ರೇಕ್ಷಕರ ಗ್ಯಾಲರಿಗೆ ತೆರಳಲು ಕಾಯುತ್ತಿದ್ದ ಶಾಲಾ ಮಕ್ಕಳನ್ನು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭೇಟಿಯಾದರು.

Home add -Advt

ಸಚಿವರನ್ನು ಸುತ್ತುವರಿದ ಶಾಲಾ ಮಕ್ಕಳು ಹಸ್ತಲಾಘವ ನೀಡಿ ಖುಷಿಪಟ್ಟರು. ಮಕ್ಕಳೊಂದಿಗೆ ಬೆರತದ್ದು ನಿಜಕ್ಕೂ ಖುಷಿ ನೀಡಿತು ಎಂದು ಲಕ್ಷ್ಮೀ ಹೆಬ್ಬಾಳಕರ್ ಪ್ರತಿಕ್ರಿಯಿಸಿದರು.

Related Articles

Back to top button