Belagavi NewsBelgaum NewsKannada NewsKarnataka NewsLatest

ಮಳೆಗಾಲದ ಅನುಭವಗಳ ಸ್ವಾರಸ್ಯಕರ ನೆನಪುಗಳು

ಮನೆಮನೆಗೆ ಸಾಹಿತ್ಯ ಕಾರ್ಯಕ್ರಮ


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತು ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಮಂಟಪಗಳ ಆಶ್ರಯದಲ್ಲಿ ರಾಣಿ ಚೆನ್ನಮ್ಮ ನಗರದ ಎರಡನೇ ಹಂತದಲಿರುವ ನಿವೇದಾರ್ಪಣ ಧ್ವನಿ ಸಂಸ್ಥೆಯ ಸಹಯೋಗದೊಂದಿಗೆ ಮನೆ- ಮನೆಗೆ ಸಾಹಿತ್ಯ-೯೨ ನೇ ಕಾರ್ಯಕ್ರಮ” ವಿಶಿಷ್ಟ ರೀತಿಯಲ್ಲಿ ನಡೆಯಿತು.

“ಮಳೆಗಾಲದ ಅನುಭವಗಳು” ಎಂಬ ವಿಷಯವಾಗಿ ಹಲವರು ತಮ್ಮ ಸ್ವಾರಸ್ಯಕರ ಅನುಭವಗಳನ್ನು ಹಂಚಿಕೊಂಡರು.
ಆರಂಭದಲ್ಲಿ ಈ ಕಾರ್ಯಕ್ರಮಕ್ಕೆ ಆತಿಥ್ಯ ನೀಡಿದ ನಿವೇದಾರ್ಪಣ ಸಂಸ್ಥೆಯ ಚಂದ್ರಶೇಖರ ನವಲಗುಂದ ಅವರು ಸ್ವಾಗತಿಸಿದರು. ಹಿರಿಯ ಸಾಹಿತಿ ಎಲ್. ಎಸ್. ಶಾಸ್ತ್ರಿ ಅವರು ” ಕವಿಗಳು ಕಂಡ ಮಳೆಗಾಲ” ದ ಕುರಿತು ಮಾತನಾಡಿ “ಕವಿದೃಷ್ಟಿ ಇತರರಿಗಿಂತ ಭಿನ್ನವಾಗಿಯೇ ಇರುತ್ತದೆ. ನಾವು ನೋಡುವ ಸೂರ್ಯೋದಯ ಸೂರ್ಯಾಸ್ತ, ಚಂದ್ರೋದಯ, ನಿಸರ್ಗ ಎಲ್ಲವನ್ನೂ ಕವಿಗಳು ತಮ್ಮ ಅಪೂರ್ವ ಕಲ್ಪನೆಯ ರೂಪಕಗಳ ಮೂಲಕ ಹೊಸ ಬಗೆಯಲ್ಲಿ ಬಣ್ಣಿಸುತ್ತಾರೆ ” ಎಂದು ಹೇಳಿ ಪಂಜೆ ಮಂಗೇಶರಾಯರ ” ತೆಂಕಣಗಾಳಿಯಾಟ, ಲಕ್ಷ್ಮೀನಾರಾಯಣ ಭಟ್ಟರ ಶಿವಮೊಗ್ಗೆಯಲ್ಲಿ ಮಳೆ, ಕಣವಿ ,ಅಡಿಗ, ಬೇಂದ್ರೆ ಮೊದಲಾದವರ ಕವನಗಳ ಉದಾಹರಣೆಯ ಮೂಲಕ ಮಳೆಗಾಲದ ಮತ್ತು ಕಾವ್ಯದ ಸೊಗಸನ್ನು ವಿವರಿಸಿದರು.
ನಂತರ ಪ್ರೊ. ಶಾಂತಾರಾಮ ಹೆಗಡೆ ಮಲೆನಾಡ ಮಳೆಗಾಲದ ವೈಶಿಷ್ಟ್ಯಗಳನ್ನು ವಿವರಿಸಿದರು. ಗುಂಡೇನಟ್ಟಿ ಮಧುಕರ ಮಳೆಗೆ ಕುರಿತಂತೆ ’ಹೊಸ ಛತ್ರಿ’ ಸ್ವರಚಿತ ಕತೆಯನ್ನು ಹೇಳಿದರು. ಗಾಯಕ ಶ್ರೀರಂಗ ಜೋಶಿ ಅವರು ಬೇಂದ್ರೆಯವರ ಮಳೆಗಾಲದ ಕುರಿತಾದ ಭಾವಗೀತೆ ಹಾಡಿದರು. ಡಾ. ಸಿ. ಕೆ. ಜೋರಾಪುರ, ಅಶೋಕ ಮಳಗಲಿ, ವಿಶ್ವನಾಥ ಗುಗ್ಗರಿ, ಜಗದೀಶ ಹೊಸಮನಿ, ಅನಂದ ಪುರಾಣಿಕ, ಮುರುಗೇಶ ಶಿವಪೂಜಿ ಮೊದಲಾದವರು ಬೆಳಗಾವಿ, ಖಾನಾಪುರ ಮತ್ತು ಬಯಲುಸೀಮೆಯ ಮಳೆಗಾಲದ ಅನುಭವಗಳನ್ನು ಹಂಚಿಕೊಂಡರು.

ಅಧ್ಯಕ್ಷತೆ ವಹಿಸಿದ್ದ ಪ್ರಿ. ವಿ. ಎನ್. ಜೋಶಿ ಅವರು ಕೊಡೆಯ ಆವಿಷ್ಕಾರದ ಹಂತಗಳ ಬಗ್ಗೆ ಮಾತಾಡಿದರು. ಎಂ. ಎ. ಪಾಟೀಲ, ಮದನ ಕಣಬೂರ ಮೊದಲಾದವರು ಉಪಸ್ಥಿತರಿದ್ದರು.



ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button