ಕೊಂಚ ಕಡಿಮೆಯಾದ ವರುಣಾರ್ಭಟ; ಬೆಳಗಾವಿಯಲ್ಲಿ 13 ಸೇತುವೆಗಳು ಸಂಚಾರಕ್ಕೆ ಮುಕ್ತ
17 ಸೇತುವೆಗಳು ಇನ್ನೂ ಮುಳುಗಡೆ
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಮಹಾರಾಷ್ಟ್ರ ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ವರುಣಾರ್ಭಟ ಕೊಂಚ ಕಡಿಮೆಯಾಗಿದ್ದು, ಬೆಳಗಾವಿ ಜಿಲ್ಲೆಯಲ್ಲಿ ನದಿಗಳ ಅಬ್ಬರಕ್ಕೆ ಮುಳುಗಡೆಯಾಗಿದ್ದ 30 ಸೇತುವೆಗಳಲ್ಲಿ 13 ಸೇತುವೆಗಳು ಸಂಚಾರಕ್ಕೆ ಮುಕ್ತವಾಗಿವೆ.
ಬೆಳಗಾವಿ ಜಿಲ್ಲೆಯಲ್ಲಿ ನಿನ್ನೆಯಿಂದ ಮಳೆಯ ಅಬ್ಬರ ಕಡಿಮೆಯಾಗಿದ್ದು, ಅಪಾಯದ ಮಟ್ಟದಲ್ಲಿ ಬೋರ್ಗರೆದು ಹರಿಯುತ್ತಿದ್ದ ನದಿಗಳ ನೀರಿನ ಮಟ್ಟವೂ ಕಡಿಮೆಯಾಗಿದೆ. ನದಿಗಳ ಅಬ್ಬರಕ್ಕೆ ಮುಳುಗಡೆಯಾಗಿದ್ದ 30 ಸೇತುವೆಗಳಲ್ಲಿ ಪೈಕಿ 13 ಸೇತುವೆಗಳಲ್ಲಿ ನೀರು ಕಡಿಮೆಯಾಗಿದ್ದು, ಜನರು ಹಾಗೂ ವಾಹನ ಸಂಚಾರ ಪುನರಾರಂಭವಾಗಿದೆ.
ಇನ್ನೂ 17 ಸೇತುವೆಗಳು ಮುಳುಗಡೆಯಾಗಿದ್ದು, ಪೊಲೀಸರು ಬ್ಯಾರಿಕೇಡ್ ಗಳನ್ನು ಹಾಕಿ ವಾಹನ ಸಂಚಾರಕ್ಕೆ ನಿರ್ಬಂಧ ಮುಂದುವರೆಸಿದ್ದಾರೆ.
ಭೋಜ-ಕಾರದಗ, ಭೀಜವಾಡಿ-ನಿಪ್ಪಾಣಿ, ಮಲಿಕವಾಡ-ದತ್ತವಾಡ, ಬರ್ವಾಡ್-ಕುನ್ನೂರು, ಸಿದ್ನಾಳ್-ಅಕ್ಕೋಳ್, ಭೋಜ್-ಕುನ್ನೂರ್, ಭೀವಶಿ-ಜತ್ರಾಟ್, ಮಂಜರಿ -ಸೌಂದತ್ತಿ, ಕುಡಚಿ ಸೇತುವೆ, ರಾಯಭಾಗ-ಚಿಂಚಳ್ಳಿ, ಮಂಗಾವಟ್ಟಿ-ರಾಜಾಪುರ, ಕುರ್ಣಿ-ಕೊಚಾರಿ, ಶೆಟ್ಟಿಹಳ್ಳಿ-ಮರನಹೋಳ್, ಯರನಾಳ್-ಹುಕ್ಕೇರಿ, ಶಿಂಗಳಾಪುರ-ಗೋಕಾಕ್, ಅರ್ಜುನವಾಡಿ-ಕುರಣಿ ಸೇರಿದಂತೆ 17 ಸೇತುವೆಗಳು ಜಲಾವೃತವಾಗಿವೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ