Belagavi NewsBelgaum NewsKannada NewsKarnataka NewsLatest

*ಬೆಳಗಾವಿಯಲ್ಲಿ ದುರಂತ; ಕರೆಂಟ್ ಶಾಕ್ ಗೆ ದಂಪತಿ ದುರ್ಮರಣ*

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ವಿದ್ಯುತ್ ತಂತಿ ಸ್ಪರ್ಶಿಸಿ ರೈತ ದಂಪತಿ ಸಾವನ್ನಪ್ಪಿರುವ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ಬಿಜಗರಣಿ ಗ್ರಾಮದಲ್ಲಿ ನಡೆದಿದೆ.

28 ವರ್ಷದ ಅಮಿತ್ ದೇಸಾಯಿ ಹಾಗೂ ಪತ್ನಿ 26 ವರ್ಷದ ಲತಾ ದೇಸಾಯಿ ಮೃತ ದುರ್ದೈವಿಗಳು. ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಪತಿ ನಿಸಾರ್ ಗೆ ವಿದ್ಯುತ್ ತಂತಿ ತಗುಲಿ ಕರೆಂಟ್ ಶಾಕ್ ಹೊಡೆದಿದೆ. ಪತಿಯನ್ನು ರಕ್ಷಿಸಲು ಹೋದ ಪತ್ನಿ ಲತಾಗೂ ವಿದ್ಯುತ್ ಪ್ರವಹಿಸಿದೆ. ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

Home add -Advt

ಗೆಣಸು ಬೆಳೆಗೆ ಔಷಧ ಸಿಂಪಡಿಸುವಾಗ ಈ ದುರಂತ ಸಂಭವಿಸಿದೆ. ಮೃತರಿಗೆ ಚಿಕ್ಕ ಮಗುವಿದೆ ಎಂದು ಗೊತ್ತಾಗಿದೆ.

ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿದಲೇ ದುರಂತ ಸಂಭವಿಸಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


Related Articles

Back to top button