ಮಂಗಳೂರಿನ ಸಹ್ಯಾದ್ರಿ ಇಂಜನೀಯರಿಂಗ್ ಕಾಲೇಜಿನಲ್ಲಿ `ಟೆಡ್‌ಎಕ್ಸ್’’ ಕಾರ್ಯಕ್ರಮ
ಪ್ರಗತಿವಾಹಿನಿ ಸುದ್ದಿ – ಮಂಗಳೂರು : ಜಾಗತಿಕ ಮಟ್ಟದಲ್ಲಿ ಹೆಸರುವಾಸಿಯಾಗಿರುವ “ಟೆಡ್‌ಎಕ್ಸ್‘’ ಜಾಗತಿಕ ಸಮುದಾಯದ ಮುಖಾಂತರ ಕಲೆ, ಸಂಸ್ಕೃತಿ, ವಿಜ್ಞಾನ, ಆವಿಷ್ಕಾರ, ಮುಂದಾಳತ್ವ. ಔದ್ಯೋಗಿಕ ಪ್ರಗತಿ, ಕೃಷಿಯಲ್ಲಿ ತಾಂತ್ರಿಕತೆ, ಮಾನಸಿಕ ಸಮತೋಲನ, ಮೊದಲಾದ ಹೊಸ ಹೊಸ ವಿಚಾರಧಾರೆಗಳಿಗೆ ಪ್ರೋತ್ಸಾಹ ನೀಡುತ್ತ ಯುವ ಜನತೆಗೆ ಒಂದು ಹೊಸ ಆಯಾಮ ನೀಡುತ್ತಿದೆ.
ರವಿವಾರ ಜುಲೈ 28 ರಂದು ಮಂಗಳೂರಿನ ಸಹ್ಯಾದ್ರಿ ಇಂಜನೀಯರಿಂಗ್ ಮತ್ತು ಮ್ಯಾನೇಜ್‌ಮೆಂಟ ಕಾಲೇಜಿನಲ್ಲಿ ಟೆಡೆಕ್ಸ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇದರಲ್ಲಿ ಒಟ್ಟು 8 ಜನ ಪ್ರತಿಭಾನ್ವಿತರು ತಮ್ಮ ತಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಿ ಯುವಜನತೆಗೆ ಸ್ಪೂರ್ತಿದಾಯಕ ಭಾಷಣ ಮಾಡಲಿದ್ದಾರೆ.
ಈ ಒಂದು ವಿಶೇಷ ಕಾರ್ಯಕ್ರಮದಲ್ಲಿ ಹಾರ್ಡವರ್ಡ ವಿಶ್ವವಿದ್ಯಾಲಯದಲ್ಲಿ ಅಭ್ಯಸಿಸಿ ಉದ್ಯಮದಲ್ಲಿ ಕ್ರಾಂತಿ ಮಾಡಿದ ಸಿದ್ಧಾರ್ಥ ರಾಜಹಂಸ, ಚಿಕ್ಕವಯಸ್ಸಿನಲ್ಲಿ ಹೊಸ ಆವಿಷ್ಕಾರ ಮಾಡಿ, ಉಪಗ್ರಹವೊಂದಕ್ಕೆ ತನ್ನ ಹೆಸರನ್ನು ನಾಮಕರಣಗೊಳ್ಳುವಂತೆ ಮಾಡಿದ ರಾಷ್ಟ್ರೀಯ ಮಕ್ಕಳ ಪ್ರಶಸ್ತಿ ವಿಜೇತ ಸ್ವಸ್ತಿಕ್ ಪದ್ಮ, ಹುಟ್ಟಿನಿಂದಲೂ ವಿಚಿತ್ರ ಕಾಯಿಲೆಗೆ ತುತ್ತಾಗಿ 300 ಕ್ಕೂ ಹೆಚ್ಚು ಮುರಿದ ಎಲಬುಗಳೊಂದಿಗೆ ಜೀವಿಸಿ ಸಾಧಿಸಬೇಕೆಂಬ ಛಲ ಹೊಂದಿದ ಗಾಜಿನ ಮಹಿಳೆ ಧನ್ಯಾ ರವಿ.
ಕಂಪ್ಯೂಟರ್ ಸೈನ್ಸ್ ಪದವಿಧರೆಯಾದರೂ ಐ ಟಿ ಉದ್ಯೋಗ ನಿರಾಕರಿಸಿ ಕೃಷಿಯಲ್ಲಿ ಸಾಧನೆ ಮಾಡಿ ರೈತರೂ ಕೂಡ ಕೋಟಿ ಕೋಟಿ ಲಾಭಗಳಿಸುವ ಕನಸು ನನಸಾಗಿಸಿದ ರೈತ ಮಹಿಳೆ ಕವಿತಾ ಮಿಶ್ರಾ.
ಸ್ವಚ್ಛಭಾರತ ಅಭಿಯಾನಕ್ಕೆ ಮಂಗಳೂರಿನ ಶಾಲಾ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಕೈ ಜೋಡಿಸಿ ಸ್ವಚ್ಛ ಮಂಗಳೂರು ಕನಸನ್ನು ನನಸು ಮಾಡುತ್ತಿರುವ ರಾಮಕೃಷ್ಣ ಆಶ್ರಮದ ಸ್ವಾಮಿ ಏಕಾಜ್ಞಾನಾನಂದ, 1971 ರ ಭಾರತ ಪಾಕಿಸ್ತಾನ ಯುದ್ಧ, ಶ್ರೀಲಂಕಾ, ನಾಗಾ ಗೋರಿಲಾ ಅಪರೇಷನ್ ನಲ್ಲಿ ಪಾಲ್ಗೊಂಡ ಬ್ರಿಗೇಡಿಯರ್ ಐ ಎನ್ ರೈ.
ಮಂಗಳೂರು ಮಲ್ಲರ ಆಸ್ಪತ್ರೆಯ ಅಂಗಾಂಗ ಕೃಷಿ ತಜ್ಞ ಡಾ. ರೋಹಣ ಚಂದ್ರಗಟ್ಟಿ, ಯೋಗಸಾಧಕ ಪ್ಯಾನಿಕ್ ಹಿಲರ್ ಅಂಕಿತಕುಮಾರ ಇವರುಗಳು ಸ್ಪೂರ್ತಿ ತುಂಬುವ ಭಾಷಣ ಮಾಡಲಿದ್ದಾರೆ.
ಸಾಂಸ್ಕೃತಿಕ ವಿಭಾಗದಲ್ಲಿ ಕಥಕ್ ನೃತ್ಯಕಿ ಸಿ.ಬಿ.ಎಸ್‌ಸಿ ಟಾಪರ್ ಕರಿಷ್ಮಾ ಅರೋರಾ, ಯಕ್ಷ ಕಲಾವಿದ ಆದರ್ಶ ಪಕ್ಕಾಲ್, ಮಂಗಳೂರ ಪ್ರತಿಬೆ ಟೀಂ ಆರ್ಟ ಬಿಟ್ಸ್, ಬಾಲಿವುಡ್ ಹಿಪಾಪ್ ಡಾನ್ಸ್ ಕ್ರೀವ್ ಟೀಂ ಪ್ರೊಪೋಗಾಡಾ ಭಾಗವಹಿಸಿ ಪ್ರತಿಭೆ ಅನಾವರಣಗೊಳಿಸಲಿದ್ದಾರೆ ಎಂದು ಸಹ್ಯಾದ್ರಿ ಶಿಕ್ಷಣ ಸಮೂಹದ ಚೇರಮನ್ ಡಾ. ಮಂಜುನಾಥ ಭಂಡಾರಿ, ಟೆಡೆಕ್ಸ್ ಮುಖ್ಯ ಸಂಘಟಕಿ ಕುಮಾರಿ ಬಸವರಾಜೇಶ್ವರಿ ಅಂಬಿ, ಸಹ ಸಂಘಟಕ ಸೃಜನ ಅವರು ಪ್ರತಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ////
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ