*ನಮ್ಮ ಹೋರಾಟಗಳಿಗೆ ಸಂಗೊಳ್ಳಿ ರಾಯಣ್ಣನೇ ಸ್ಪೂರ್ತಿ; ಡಿ.ಕೆ.ಶಿವಕುಮಾರ್*
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬ್ರಿಟೀಷರ ಪಾಲಿಗೆ ಸಿಂಹಸ್ವಪ್ನವಾಗಿದ್ದ ಸಂಗೊಳ್ಳಿ ರಾಯಣ್ಣ ಅವರ ಹೋರಾಟಕ್ಕೆ ಮತ್ತೊಮ್ಮೆ ಶಕ್ತಿ ತುಂಬಲು ನಾವೆಲ್ಲ ಹೊರಟಿದ್ದೇವೆ. ನಮ್ಮ ಹೋರಾಟಗಳಿಗೆ ರಾಯಣ್ಣನೇ ಸ್ಪೂರ್ತಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಕ್ರಾಂತವೀರ ಸಂಗೊಳ್ಳಿ ರಾಯಣ್ಣ ಜಯಂತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಡಿ.ಕೆ ಶಿವಕುಮಾರ್, ಈ ದೇಶದಲ್ಲಿ ಪ್ರಜಾಪ್ರಭುತ್ವ ಸುಮ್ಮನೆ ಬಂದಿಲ್ಲ. ರಾಯಣ್ಣನಂತವರ ತ್ಯಾಗ, ಬಲಿದಾನದಿಂದ ದೊರಕಿದೆ. ಇದನ್ನು ಕಾಪಾಡಬೇಕು ಎಂದರು.
ಕಳೆದ ವರ್ಷ ಇದೇ ರೈಲು ನಿಲ್ದಾಣದ ಬಳಿ ಇರುವ ರಾಯಣ್ಣ ಅವರ ಪ್ರತಿಮೆಯ ಬಳಿಯಿಂದಲೇ ಸುಮಾರು 3 ಲಕ್ಷ ಜನ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮ ಮಾಡಿದ್ದೇವು. ಇಡೀ ಕರ್ನಾಟಕದ ಇತಿಹಾಸದಲ್ಲಿ ಇದೊಂದು ಅಚ್ಚಳಿಯದ ಕಾರ್ಯಕ್ರಮ. ಈ ಕಾರ್ಯಕ್ರಮ ರಾಜ್ಯದಲ್ಲಿ ಹೊಸ ರಾಜಕೀಯ ಬದಲಾವಣೆಗೆ ಮುನ್ನುಡಿ ಬರೆಯಿತು.
ಈ ದೇಶದಿಂದ ಕೋಮುವಾದಿಗಳನ್ನು ಹೊಡೆದೊಡಿಸುವ ಕಾಲ ಹತ್ತಿರ ಬಂದಿದೆ. ಈ ಬದಲಾವಣೆ ಕರ್ನಾಟಕದಿಂದಲೇ ಆರಂಭಗೊಂಡಿದೆ, ಮತ್ತೊಮ್ಮೆ ಈ ದೇಶದಲ್ಲಿ ಗಾಂಧಿ ಅವರ ಆಶಯಗಳನ್ನು ಬಿತ್ತೋಣ, ಯುವಕರು ರಾಯಣ್ಣನಂತೆ ಹೋರಾಟದ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ನಮ್ಮ ಹೋರಾಟಗಳಿಗೆ ಸಂಗೊಳ್ಳಿ ರಾಯಣ್ಣನೇ ಸ್ಪೂರ್ತಿ; ಡಿ.ಕೆ.ಶಿವಕುಮಾರ್
ಬೆಂಗಳೂರು: ಬ್ರಿಟೀಷರ ಪಾಲಿಗೆ ಸಿಂಹಸ್ವಪ್ನವಾಗಿದ್ದ ಸಂಗೊಳ್ಳಿ ರಾಯಣ್ಣ ಅವರ ಹೋರಾಟಕ್ಕೆ ಮತ್ತೊಮ್ಮೆ ಶಕ್ತಿ ತುಂಬಲು ನಾವೆಲ್ಲ ಹೊರಟಿದ್ದೇವೆ. ನಮ್ಮ ಹೋರಾಟಗಳಿಗೆ ರಾಯಣ್ಣನೇ ಸ್ಪೂರ್ತಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಕ್ರಾಂತವೀರ ಸಂಗೊಳ್ಳಿ ರಾಯಣ್ಣ ಜಯಂತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಡಿ.ಕೆ ಶಿವಕುಮಾರ್, ಈ ದೇಶದಲ್ಲಿ ಪ್ರಜಾಪ್ರಭುತ್ವ ಸುಮ್ಮನೆ ಬಂದಿಲ್ಲ. ರಾಯಣ್ಣನಂತವರ ತ್ಯಾಗ, ಬಲಿದಾನದಿಂದ ದೊರಕಿದೆ. ಇದನ್ನು ಕಾಪಾಡಬೇಕು ಎಂದರು.
ಕಳೆದ ವರ್ಷ ಇದೇ ರೈಲು ನಿಲ್ದಾಣದ ಬಳಿ ಇರುವ ರಾಯಣ್ಣ ಅವರ ಪ್ರತಿಮೆಯ ಬಳಿಯಿಂದಲೇ ಸುಮಾರು 3 ಲಕ್ಷ ಜನ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮ ಮಾಡಿದ್ದೇವು. ಇಡೀ ಕರ್ನಾಟಕದ ಇತಿಹಾಸದಲ್ಲಿ ಇದೊಂದು ಅಚ್ಚಳಿಯದ ಕಾರ್ಯಕ್ರಮ. ಈ ಕಾರ್ಯಕ್ರಮ ರಾಜ್ಯದಲ್ಲಿ ಹೊಸ ರಾಜಕೀಯ ಬದಲಾವಣೆಗೆ ಮುನ್ನುಡಿ ಬರೆಯಿತು.
ಈ ದೇಶದಿಂದ ಕೋಮುವಾದಿಗಳನ್ನು ಹೊಡೆದೊಡಿಸುವ ಕಾಲ ಹತ್ತಿರ ಬಂದಿದೆ. ಈ ಬದಲಾವಣೆ ಕರ್ನಾಟಕದಿಂದಲೇ ಆರಂಭಗೊಂಡಿದೆ, ಮತ್ತೊಮ್ಮೆ ಈ ದೇಶದಲ್ಲಿ ಗಾಂಧಿ ಅವರ ಆಶಯಗಳನ್ನು ಬಿತ್ತೋಣ, ಯುವಕರು ರಾಯಣ್ಣನಂತೆ ಹೋರಾಟದ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಹೇಳುತ್ತಾ ಇದ್ದೆ, ಈ ದೇಶಕ್ಕೆ ಸ್ವಾತಂತ್ರ್ಯ ಬಂದು 76 ವರ್ಷವಾಗಿದೆ. ನಿಮಗೂ 76 ತುಂಬಿ 77 ಕ್ಕೆ ಬೀಳುತ್ತಿದೆ ಅದ್ದೂರಿಯಾಗಿ ಆಚರಣೆ ಮಾಡೋಣ ಎಂದು ಸಲಹೆ ನೀಡಿದೆ ಎಂದು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ