ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬ್ರ್ಯಾಂಡ್ ಬೆಂಗಳೂರಿಗಾಗಿ ಸಾರ್ವಜನಿಕರಿಂದ 7 ಪ್ರಮುಖ ವಿಷಯಗಳ ಕುರಿತು ಸುಮಾರು 70,000ಕ್ಕೂ ಹೆಚ್ಚು ಸಲಹೆ, ಸೂಚನೆ ಮತ್ತು ಅಭಿಪ್ರಾಯಗಳು ಬಂದಿದ್ದು ನಾಗರಿಕರ ಈ ಪ್ರತಿಕ್ರಿಯೆಗಳನ್ನು ಇಂದು ಉಪ ಮುಖ್ಯಮಂತ್ರಿಗಳು ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಡಿ.ಕೆ ಶಿವಕುಮಾರ್ ಅವಲೋಕಿಸಿದರು.
ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಸಾರ್ವಜನಿಕರ ಪ್ರತಿಕ್ರಿಯೆ ಕಂಡು ಡಿ.ಕೆ.ಶಿವಕುಮಾರ ಫುಲ್ ಖುಷ್ ಆದರು.
ಈ ವೇಳೆ ಪ್ರಗತಿಯತ್ತ ಬೆಂಗಳೂರು; ನೆಮ್ಮದಿಯತ್ತ ನಾಗರಿಕರು ಎಂಬ ಘೋಷವಾಕ್ಯದ ಬ್ರ್ಯಾಂಡ್ ಬೆಂಗಳೂರು #BrandBengaluru ಪರಿಕಲ್ಪನೆಗಾಗಿ ನೇಮಿಸಲಾಗಿರುವ ನೋಡಲ್ ಸಂಸ್ಥೆಗಳು ಮತ್ತು ಶೈಕ್ಷಣಿಕ ಪಾಲುದಾರರು ಈ ಸಾರ್ವಜನಿಕರ ಅಭಿಪ್ರಾಯಗಳನ್ನು ಕ್ರೋಢೀಕರಿಸಿ ವರದಿ ನೀಡಲು ಸೂಚಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ