
ಮಾಜಿ ಸೈನಿಕನಿಂದ ತಮ್ಮನ ಕುಟುಂಬದ ಮೇಲೆ ಗುಂಡೇಟು
ಪ್ರಗತಿವಾಹಿನಿ ಸುದ್ದಿ, ಅಂಕೋಲಾ –
ಮಾಜಿ ಸೈನಿಕ ತನ್ನ ತಮ್ಮನ ಮಗನ ಹಾಗೂ ತಮ್ಮನ ಹೆಂಡತಿಯ ಮೇಲೆ ಗುಂಡಿನ ದಾಳಿ ನಡೆಸಿ ಬಾಲಕ ಸಾವು ಕಂಡು ಆತನ ನಾದಿನಿ ಗಂಭೀರ ಗಾಯಗೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಪಟ್ಟಣದ ಮಠಾಕೇರಿ ಬಡಾವಣೆಯಲ್ಲಿ ನಡೆದಿದೆ.
ತಮ್ಮನ ಮಗ ಅನುಜ್ (೦೯) ಸ್ಥಳದಲ್ಲೇ ಸಾವು ಕಂಡಿದ್ದು ತಮ್ಮನ ಹೆಂಡತಿ ಮೇದಾ(೪೦) ಗಂಭೀರ ಗಾಯಗೊಂಡಿದ್ದು ಮಣಿಪಾಲ್ ತಾಲೂಕು ಆಸ್ಪತ್ರೆಗೆ ಸಾಗಿಸಿಲಾಗಿದೆ.
ಸ್ಥಳಕ್ಕೆ ಅಂಕೋಲಾ ಪೊಲೀಸರು ಆಗಮಿಸಿದ್ದು ಆರೋಪಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.