ಪ್ರಗತಿವಾಹಿನಿ ಸುದ್ದಿ; ಬಾರಾ: ಭೀಕರ ರಸ್ತೆ ಅಪಘಾತದಲ್ಲಿ 6 ಭಾರತೀಯ ಯಾತ್ರಾರ್ಥಿಗಳು ಸೇರಿ ೭ ಜನರು ಸಾವನ್ನಪ್ಪಿರುವ ಘಟನೆ ನೇಪಾಳದ ಬರಾ ಜಿಲೆಯಲ್ಲಿ ಸಂಭವಿಸಿದೆ.
ಜಿತ್ ಪುರ್ ಸಿಮಾರಾ ಉಪ ಮೆಟ್ರೋ ಪೊಲಿಟನ್-22ರ ಚುರಿಯಮಾಯಿ ದೇವಸ್ಥಾನದ ಬಳಿ ಬಸ್ ಅಪಘಾತದಲ್ಲಿ 7 ಜನರು ಸಾವನ್ನಪ್ಪಿದ್ದು 19 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಬಸ್ ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿತ್ತು. ಬಸ್ ನಲ್ಲಿ ಹೆಚ್ಚಿನವರು ಭಾರತದಿಂದ ಬಂದವರೇ ಇದ್ದರು. ಕಠ್ಮಂಡುವಿನಿಂದ ಕನಕ್ ಪುರಕ್ಕೆ ತೆರಳುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಗಾಯಾಳುಗಳನ್ನು ಹೆಟೌಡಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ