ಪ್ಯಾರಾ ಕ್ಲೈಂಬಿಂಗ್ ವಿಶ್ವ ಚಾಂಪಿಯನ್ ಗೆ ಖಾನಾಪುರ ಬಿಇಒ ಸನ್ಮಾನ
ಪ್ರಗತಿವಾಹಿನಿ ಸುದ್ದಿ, ಖಾನಾಪುರ: ಪ್ಯಾರಾ ಕ್ಲೈಂಬಿಂಗ್ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಪಡೆದ ಖಾನಾಪುರ ತಾಲೂಕಿನ ತೋಲಗಿ ಗ್ರಾಮದ ಅಂಧ ಯುವತಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಶ್ವರಿ ಕುಡಚಿ ಸತ್ಕರಿಸಿದರು.
ತೋಲಗಿ ಗ್ರಾಮದ ಸುನಿತಾ ಧೊಂಡಪ್ಪನವರ್ ಅಂಧರ ಪ್ಯಾರಾಕ್ಲೈಂಬಿಂಗ್ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಪಡೆದು ದೇಶದ ಕೀರ್ತಿ ಬೆಳಗಿಸಿದ್ದಾಳೆ. ಥೈಲ್ಯಾಂಡ್, ಜಮ್ಮು ಕಾಶ್ಮೀರ್, ಆಲ್ಟ್ರಾಮ್ಯಾರಾತಾನ್ ,ಮಾಸ್ಕೋ ಹಲವಾರು ದೇಶಗಳಲ್ಲಿ ೧೦, ೪೨ ಕಿ.ಮಿ. ಓಟ, ವಾಲ್ ಕ್ಲೈಂಬಿಂಗ್ ಮತ್ತಿತರ ಸ್ಪರ್ಧೆಗಳಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.
ಕೃಷಿ ಕುಟುಂಬದಲ್ಲಿ ಜನಿಸಿದ ಇವರು ತಮ್ಮ ವೈಕಲ್ಯವನ್ನು ಮೆಟ್ಟಿನಿಂತು ಸಾಧನೆ ಗೈದಿದ್ದಾರೆ. ಸಾಮಾನ್ಯ ಸರಕಾರಿ ಶಾಲೆಯಲ್ಲಿ 1 ರಿಂದ 12 ನೆಯ ತರಗತಿಯವರೆಗೆ ಶಿಕ್ಷಣವನ್ನು ಪಡೆದು ನಂತರ ಬಿಎ ಡಿಗ್ರಿಯನ್ನು ಬೆಂಗಳೂರಿನಲ್ಲಿ ಪಡೆದಿದ್ದಾರೆ . ಶಿಕ್ಷಕರ ಸ್ಪೂರ್ತಿ, ಜೊತೆಗೆ ಪಾಲಕರ ಸಹಕಾರ ಹಾಗೂ ಐಎಂಎಫ್ ಫೌಂಡೇಶನ್ ಇವರ ಸಹಾಯದಿಂದ ಈ ಸಾಧನೆ ಮಾಡಿದ್ದಾರೆ.
ಕ್ಷೇತ್ರ ಶಿಕ್ಷಣಾಧಿಕಾರಿ ರಾಜೇಶ್ವರಿ ಕುಡಚಿ ಗ್ರಾಮಕ್ಕೆ ತೆರಳಿ ಯುವತಿಯನ್ನು ಸತ್ಕರಿಸಿ, ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಬಿ.ಐ ಇ ಆರ್ ಟಿ ಶಂಕರ್ ಕಮ್ಮಾರ್ ಮತ್ತು ಸಿ ಆರ್ ಪಿ ಗಳಾದ ಗೌಡರ್. ಕಿಲಾರಿ, ಹೊಂಗಲ್, ಪೂಜಾರ್ ಹಾಗೂ ಕಡತನ ಬಾಗೇವಾಡಿ, ಬೋಗೂರ, ತೋಲಗಿ ಶಾಲೆಗಳ ಪ್ರಧಾನ ಗುರುಗಳು, ಊರ ಪ್ರಮುಖರು ಸತ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ