ಶ್ರೀ ಚಿದಂಬರ ಸೌಹಾರ್ದ ಪತ್ತಿನ ಸದಸ್ಯರ ಸಂಪರ್ಕ ಸಭೆ
ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : ಶ್ರೀ ಚಿದಂಬರ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತ ಸಂಸ್ಥೆಯ ಬೆಳಗಾವಿ ಶಾಖೆಯಲ್ಲಿ ಷೇರುದಾರರಿಗೆ 12.5 ಶೇಕಡಾದ ಡಿವಿಡೆಂಡ್ (ಲಾಭಾಂಶ) ವಿತರಿಸಲು ನಿರ್ಧರಿಸಲಾಗಿದೆ ಎಂದು ಸಂಸ್ಥೆಯ ಸಂಸ್ಥಾಪಕಅಧ್ಯಕ್ಷ ಜಿ. ಕೆ ಕುಲಕರ್ಣಿ ತಿಳಿಸಿದ್ದಾರೆ.
ಶನಿವಾರ ತಿಳಕವಾಡಿಯ ಉದಯ ಭುವನದಲ್ಲಿ ನಡೆದ ಸಂಸ್ಥೆಯ ಸದಸ್ಯರ ಸಂಪರ್ಕ ಸಭೆಯ ನಂತರ ಅವರು ಈ ಘೋಷಣೆ ಮಾಡಿದರು. ಈ ಸಭೆಯಲ್ಲಿ ಚಿದಂಬರ ನಗರದ ಹಿರಿಯ ನ್ಯಾಯವಾದಿ ಡಿ. ಬಿ ಜೋಶಿ ಸೇರಿದಂತೆ 80 ವರ್ಷ ಮೀರಿದ ಹಿರಿಯ 15 ಸದಸ್ಯರನ್ನು ಸನ್ಮಾನಿಸಲಾಯಿತು.
ಈ ಹಣಕಾಸು ಸಂಸ್ಥೆ ಕೇವಲ ಏಳು ವರ್ಷಗಳಲ್ಲಿ ತುಂಬ ಉತ್ತಮ ಕಾರ್ಯ ನಿರ್ವಹಿಸಿದೆ. ಬೆಳಗಾವಿ ಶಾಖೆಯಲ್ಲಿಯೇ ಸುಮಾರು 15 ಲಕ್ಷ ಲಾಭ ಗಳಿಸಲಾಗಿದೆ.
ಸಂಸ್ಥೆ ಉಳಿತಾಯ ಠೇವಣಿ ಮೇಲೆ ಶೇಕಡಾ 6 ಹಾಗೂ ಹಿರಿಯನಾಗರಿಕರ ಮುದ್ದತಿ ಠೇವಣಿ ಮೇಲೆ 12 ಶೇಕಡಾ ಬಡ್ಡಿ ನೀಡುತ್ತಿದೆ.
ಎಲ್ಲಾ ಸದಸ್ಯರಿಗೆ ವಿಮಾ ಸೌಲಭ್ಯ ನೀಡಲಾಗಿದೆ.
ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಹಾಗೂ ಸುಲಭ ಸಾಲ ಸೌಲಭ್ಯ ನೀಡಲಾಗಿದೆ. ಶೇಕಡಾ 12 ರ ಬಡ್ಡಿಯಂತೆ ಶೈಕ್ಷಣಿಕ ಸಾಲ ನೀಡಿ, ವಿದ್ಯಾರ್ಥಿಗಳಿಗೆ ಉದ್ಯೋಗ ದೊರೆತ ನಂತರ ಅದನ್ನು ಮರು ಪಾವತಿ ಮಾಡುವ ಸೌಲಭ್ಯ ಇದೆ.
ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ನಗರಗಳಲ್ಲಿ ಇರುವ ಎಲ್ಲಾ 10 ಶಾಖೆಗಳು ಸಂಪರ‍್ಣ ಗಣಕೀಕೃತ ಶಾಖೆಗಳು ಇವುಗಳಲ್ಲಿ ಸಿಬಿಎಸ್ ಅಳವಡಿಸಲಾಗಿದೆ ಎಂದು ಅವರು ತಿಳಿಸಿದರು.
ಶೀಘ್ರದಲ್ಲಿಯೇ ರಾಜ್ಯದ ಏಳು ನಗರಗಳಲ್ಲಿ ಶಾಖೆಗಳನ್ನು ಆರಂಭಿಸಲು ಆಯೋಜಿಸಲಾಗಿದೆ. ಜನರಲ್ ಮ್ಯಾನೇಜರ್ ಪರ್ವತಿ, ನಿರ್ದೇಶಕ ವಿ. ಎಸ್ ಜೋಷಿ ಹಾಗೂ ಇತರರು ಹಾಜರಿದ್ದರು. ////
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ