Belagavi NewsBelgaum NewsKannada NewsKarnataka NewsLatest

ನದಿ ಇಂಗಳಗಾಂವದ ಭಾರತೀಯ ಸೇನಾಪಡೆ ಯೋಧ ಅಪಘಾತದಲ್ಲಿ ಸಾವು

ಪ್ರಗತಿವಾಹಿನಿ ಸುದ್ದಿ, ಅಥಣಿ: ರಸ್ತೆ ಅಪಘಾತದಲ್ಲಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಅಥಣಿ ತಾಲೂಕಿನ ನದಿ ಇಂಗಳಗಾಂವದ ಯೋಧ ಮೃತಪಟ್ಟಿದ್ದಾರೆ.

ಲಕ್ಷ್ಮಣ ಘೋರ್ಪಡೆ ಮೃತಪಟ್ಟವರು. ಅವರು ರಜೆ ಹಿನ್ನಲೆಯಲ್ಲಿ ಸ್ವಗ್ರಾಮ ನದಿ ಇಂಗಳಗಾಂವಕ್ಕೆ ಆಗಮಿಸಿದ್ದರು. ಗ್ರಾಮದ ಇನ್ನೊಬ್ಬ ಯುವಕನ ಜತೆ ಬೈಕ್ ನಲ್ಲಿ ಸಾಗುತ್ತಿದ್ದ ವೇಳೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ.

Home add -Advt

ಅಪಘಾತದಲ್ಲಿ ಸಹ ಸವಾರ ಗಂಭೀರ ಗಾಯಗೊಂಡಿದ್ದು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಮೃತ ಯೋಧನ ಅಂತ್ಯಕ್ರಿಯೆ ಇಂದು ನದಿ ಇಂಗಳಗಾಂವದಲ್ಲಿ ನಡೆದಿದೆ.

Related Articles

Back to top button