Belagavi NewsBelgaum NewsKannada NewsKarnataka NewsLatestUncategorized

ಪಂಚಮಸಾಲಿ ಮೀಸಲಾತಿ ಕುರಿತು ಮಂಗಳವಾರ ಸಿಎಂ ಜೊತೆ ಚರ್ಚೆ – ಲಕ್ಷ್ಮೀ ಹೆಬ್ಬಾಳಕರ್

ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ: ಸಮಾಜದ ಯಾವುದೇ ಕೆಲಸದಲ್ಲಿ ನಾನು ಸಮಾಜದ ಮಗಳಾಗಿ ನಿರಂತರ ಇರುತ್ತೇನೆ. ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಕೊಡುವ ವಿಚಾರದಲ್ಲಿ ಸ್ವಾಮಿಗಳ ಅಪೇಕ್ಷೆಯಂತೆ ಸಮಾಜ ಮತ್ತು ಸರಕಾರದ ಕೊಂಡಿಯಾಗಿ ಕೆಲಸ ಮಾಡುತ್ತೇನೆ. ಮಂಗಳವಾರ ಈ ಕುರಿತು ಮುಖ್ಯಮಂತ್ರಿಗಳ ಜೊತೆ ಸಮಗ್ರವಾಗಿ ಚರ್ಚಿಸುತ್ತೇನೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭರವಸೆ ನೀಡಿದ್ದಾರೆ.

ನಿಪ್ಪಾಣಿಯಲ್ಲಿ ಭಾನುವಾರ 2 ಎ ಮೀಸಲಾತಿ ಸಂಬಂಧ ಪಂಚಮಸಾಲಿ ಜಗದ್ಗುರು ಬಸವ ಜಯ ಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ನಡೆದ ಸಮಾವೇಶದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಪಂಚಮಸಾಲಿ ಮೀಸಲಾತಿ ಸಂಬಂಧ ಮೊದಲ ಹೋರಾಟದಿಂದ ಈಗ 6ನೇ ಹಂತದ ಹೋರಾಟದವರೆಗೂ ನಾನು ಪಾಲ್ಗೊಂಡಿದ್ದೇನೆ. ಹಾಗಾಗಿ ಈ ವಿಷಯದ ಕುರಿತು ನನಗೆ ಸಂಪೂರ್ಣಅರಿವಿದೆ. ನಮ್ಮ ಸಮಾಜಕ್ಕೆ ಮೀಸಲಾತಿ ಏಕೆ ಅಗತ್ಯ ಎನ್ನುವ ಕುರಿತು ಮುಖ್ಯಮಂತ್ರಿಗಳಿಗೆ ಮನವರಿಗೆ ಮಾಡಿಕೊಡುತ್ತೇನೆ ಎಂದು ಅರು ಭರವಸೆ ನೀಡಿದರು.

ಸ್ವಾಮಿಗಳು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನನ್ನು ಚನ್ನಮ್ಮ ಎಂದು ಕರೆಯುತ್ತಾರೆ. ಆದರೆ ನಾನು ಚನ್ನಮ್ಮನ ಪಾದದ ಧೂಳಿಗೂ ಸಮನಲ್ಲ. ಆದರೆ ಚನ್ನಮ್ಮನ ಸಮಾಜದಲ್ಲಿ ಜನಿಸಿದ್ದೇನೆ ಎನ್ನುವ ಹೆಮ್ಮೆ ನನಗಿದೆ ಎಂದೂ ಹೆಬ್ಬಾಳಕರ್ ಹೇಳಿದರು.

ಈ ವೇಳೆ ಮಾತನಾಡಿದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ, ಮಂತ್ರಿಯಾದರೂ ಲಕ್ಷ್ಮೀ ಹೆಬ್ಬಾಳಕರ್ ಅವರು ನಮ್ಮ ಹೋರಾಟದ ಸ್ಥಳಕ್ಕೆ ಸರಕಾರದ ಪ್ರತಿನಿಧಿಯಾಗಿ ಆಗಮಿಸಿ ಮನವ ಸ್ವೀಕರಿಸಿದ್ದಾರೆ. ಅವರಿಗೆ ಸರಕಾರ ಮತ್ತು ಸಮಾಜ ಎರಡು ಕಣ್ಣುಗಳಿದ್ದಂತೆ. ಸರಕಾರದೊಂದಿಗೆ ಮಾತನಾಡಿ ಲೋಕಸಭಾ ಚುನಾವಣೆ ಪೂರ್ವ ನಮ್ಮ ಸಮಾಜಕ್ಕೆ ಮೀಸಲಾತಿ ಕೊಡುವ ಕೆಲಸವಾಗಲಿ ಎಂದರು.

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಮಾಜಿ ಸಚಿವ ಶಶಿಕಾಂತ ನಾಯಿಕ, ಅಡಿವೇಶ ಇಟಗಿ, ರೋಹಿಣಿ ಪಾಟೀಲ ಮೊದಲಾದವರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button