ವಿದ್ಯಾರ್ಥಿಗಳಿಗೆ ಉಚಿತ ಶೂ ಮತ್ತು ಸಾಕ್ಸ್ ವಿತರಣೆ, ಪಾರದರ್ಶಕತೆ ಕಾಯ್ದುಕೊಳ್ಳಬೇಕು: ಡಾ. ರಾಜೇಂದ್ರ ಕೆ.ವಿ
ವಿದ್ಯಾರ್ಥಿಗಳಿಗೆ ಉಚಿತ ಶೂ ಮತ್ತು ಸಾಕ್ಸ್ ವಿತರಣೆ, ಪಾರದರ್ಶಕತೆ ಕಾಯ್ದುಕೊಳ್ಳಬೇಕು: ಡಾ. ರಾಜೇಂದ್ರ ಕೆ.ವಿ
ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : 2019-20ನೇ ಶೈಕ್ಷಣಿಕ ಸಾಲಿಗೆ ಸರ್ಕಾರಿ ಶಾಲೆಗಳಲ್ಲಿ 1 ರಿಂದ 10ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಉಚಿತವಾಗಿ ಶೂ ಮತ್ತು ಸಾಕ್ಸ್ ವಿತರಣೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು ಎಂದು ಬೆಳಗಾವಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ. ರಾಜೇಂದ್ರ ಕೆ.ವಿ ಅವರು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆಯನ್ನು ನೀಡಿದ್ದಾರೆ.
ಪ್ರಾಥಮಿಕ ಹಾಗೂ ಪ್ರಾಢ ಶಾಲಾ ಮಕ್ಕಳಿಗೆ ಸರ್ಕಾರದಿಂದ ಉಚಿತವಾಗಿ ನೀಡಲಾಗುವ ಶೂ ಹಾಗೂ ಸಾಕ್ಸ್ಗಳ ವಿತರಣೆಯಲ್ಲಿ ಈ ಹಿಂದೆ ಸರ್ಕಾರದ ಮಾರ್ಗಸೂಚಿಗಳನ್ನು ಸರಿಯಾಗಿ ಪಾಲನೆ ಮಾಡದೆ ಹಾಗೂ ಪಾರದರ್ಶಕತೆಯನ್ನು ಕಾಯ್ದುಕೊಳ್ಳದೆ ಅವ್ಯವಹಾರ ನಡೆದಿರುವ ಬಗ್ಗೆ ಹಾಗೂ ಕಳಪೆ ಸಾಮಗ್ರಿಗಳನ್ನು ಪೂರೈಸಿದ ಬಗ್ಗೆ ಸಭೆಗಳಲ್ಲಿ ಚರ್ಚೆಯಾಗಿರುತ್ತದೆ.
ಈ ನಿಟ್ಟಿನಲ್ಲಿ ಪಾರದರ್ಶಕತೆಯನ್ನು ಕಾಯ್ದುಕೊಳ್ಳಲು ಹಾಗೂ ಸರ್ಕಾರದ ಆದೇಶ, ಸುತ್ತೋಲೆಯಲ್ಲಿ ತಿಳಿಸಿದಂತೆ ಎಸ.ಡಿ.ಎಮ್.ಸಿ.ಯು ಒಂದು ಅನುಮೋದಿತ ಸಮಿತಿಯನ್ನು ರಚಿಸಿ ಖರೀದಿ ಪ್ರಕ್ರಿಯೆಯನ್ನು ಮಾಡಲು ಅವಕಾಶ ಇರುತ್ತದೆ. ಕಾರಣ ಖರೀದಿ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು ಎಂದು ಸೂಚಿಸಿದ್ದಾರೆ.
ಅರ್ಹ ವಿದ್ಯಾರ್ಥಿಗಳ ಪಾದರಕ್ಷೆಗಳ ಅಳತೆ ದಾಖಲಿಸಿ, ಉತ್ತಮ ಗುಣಮಟ್ಟದ ಪಾದರಕ್ಷೆಯನ್ನು ಸ್ಥಳೀಯವಾಗಿ ಖರೀದಿಸಿ, ವಿತರಣೆ ಮಾಡುವ ಜವಾಬ್ದಾರಿಯನ್ನು ಸಂಬಂಧಿಸಿದ ಶಾಲೆಯ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ (ಎಸ್.ಡಿ.ಎಂ.ಸಿ)ಗೆ ವಹಿಸಬೇಕು.
ಒಂದು ಜೊತೆ ಕಪ್ಪು ಬಣ್ಣದ ಶೂಗಳನ್ನು ಹಾಗೂ ಎರಡು ಜೊತೆ ಬಿಳಿ ಬಣ್ಣದ ಸಾಕ್ಸ್ಗಳನ್ನು ಖರೀದಿಸಿ ವಿತರಿಸುವುದು. ವಾತಾವರಣದ ಸ್ಥಿಗತಿಗಳು ಮತ್ತು ಹಾಕಿಕೊಳ್ಳಲು ಹಾಗೂ ತೆಗೆಯಲು ಸುಲಭವಾಗುವಂತೆ ವಿದ್ಯಾರ್ಥಿಗಳು ಇಚ್ಛಿಸಿದಲ್ಲಿ, ಸ್ಥಳೀಯ ವಾತಾವರಣವನ್ನು ಗಮನಿಸಿ ಎಸ್.ಡಿ.ಎಮ್.ಸಿ ಗಳು ಸ್ಥಳೀಯ ಅಗತ್ಯತೆಯನ್ನು ಪರಿಗಣಿಸಿ, ಶೂ ಮತ್ತು ಸಾಕ್ಸ್ಗಳ ಬದಲಾಗಿ ಸ್ಯಾಂಡಲ್ಸ್ಗಳನ್ನು ಖರೀದಿಸಿ ವಿತರಿಸಬಹುದಾಗಿದೆ ಎಂದು ತಿಳಿಸಿದ್ದಾರೆ.
ಹಿಂದಿನ ಸಾಲಿನಲ್ಲಿ ಕಳಪೆ ಗುಣಮಟ್ಟದ ಮತ್ತು ನಕಲಿ ಬ್ರಾಂಡಡ್ ಶೂ-ಸಾಕ್ಸ್ ಸರಬರಾಜಾಗಿರುವ ಬಗ್ಗೆ ಸರ್ಕಾರದ, ಜಿಲ್ಲಾ, ತಾಲೂಕಾ ಹಂತದಲ್ಲಿ ಸಾಕಷ್ಟು ದೂರಗಳು ಸ್ವೀಕೃತವಾಗಿರುತ್ತವೆ. ಆದ್ದರಿಂದ ಪ್ರಸ್ತುತ ಸಾಲಿನಲ್ಲಿ ಜಾಗೂರುಕತೆಯಿಂದ ಪರಿಶೀಲಿಸಿ ರಾಷ್ಟçಮಟ್ಟದ ಹೆಸರಾಂತ ಕಂಪನಿಗಳ ಪ್ರತಿಷ್ಠಿತ ಬ್ರಾಂಡ್‌ಗಳ (ಬಾಟಾ, ಲಿಬರ್ಟಿ, ಲ್ಯಾನ್ಸರ್, ಪ್ಯಾರಾಗಾನ್, ಕರೋನ, ಆಕ್ಷನ್, ಲಕಾನಿ) ಅಧಿಕೃತ ಮಾರಾಟಗಾರರಿಂದ ಶೂ-ಸಾಕ್ಸ್ ಗಳನ್ನು ಖರಿದಿಸತಕ್ಕದ್ದು.
ಅನಧಿಕೃತ ಮಾರಾಟಗಾರರಿಂದ ನಕಲಿ ಬ್ರಾಂಡಡ್, ಕಳಪೆ ಗುಣಮಟ್ಟದ ಶೂ-ಸಾಕ್ಸ್ಗಳನ್ನು ಖರೀದಿಸುವ ಬಗ್ಗೆ ದೂರುಗಳು ವರದಿಯಾದಲ್ಲಿ ತಪಾಸಣೆಗೊಳಿಸಿ ಸಂಬಂಧಿಸಿದ ಶಾಲಾ ಮುಖ್ಯೋಪಾದ್ಯಾಯರು, ಕ್ಷೇತ್ರಶಿಕ್ಷಣಾಧಿಕಾರಿಗಳು, ಉಪನಿರ್ದೇಶಕರ ವಿರುದ್ಧ ನಿಯಮಾನುಸಾರ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಶೂ ಮತ್ತು ಸಾಕ್ಸ್ಗಳನ್ನು ವಿದ್ಯಾರ್ಥಿಗಳ ಹಾಜರಾತಿಯನ್ನು ಗಮನಿಸಿ, ಅದಕ್ಕೆ ತಕ್ಕಂತೆ ಎಸ್.ಡಿ.ಎಮ್.ಸಿ ಅನುಮೋದಿತ ಸಮಿತಿಯು ಸ್ಥಳೀಯವಾಗಿ ( ತಾಲ್ಲೂಕು, ಜಿಲ್ಲಾ) ಖರೀದಿಸುವುದು. ವಲಯ, ಕ್ಲಸ್ಟರ್ ಅಥವಾ ಜಿಲ್ಲಾ ಮಟ್ಟದಲ್ಲಿ ಕೇಂದ್ರಿಕೃತ ವ್ಯವಸ್ಥೆಯಡಿ ಖರೀದಿ ಪ್ರಕ್ರಿಯೆ ನಡೆಸುವದನ್ನು ನಿರ್ದಿಷ್ಟವಾಗಿ ನಿಷೇಧಿಸಲಾಗಿದೆ. ಯಾವುದೇ ಕಾರಣಕ್ಕೂ ಕೇಂದ್ರಿಕೃತ ಖರೀದಿ ಪ್ರಕ್ರಿಯೆ ನಡೆಸುವಂತಿಲ್ಲ ಎಂದು ತಿಳಿಸಿದರು.
ರೂಪಾಯಿ ಒಂದು ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ಶೂ-ಸಾಕ್ಸ್ ಅಥವಾ ಸ್ಯಾಂಡಲ್ಸ್ ಖರೀದಿಸುವ ಶಾಲೆಗಳಿಗೆ ಕರ್ನಾಟಕ ಸಾರ್ವಜನಿಕ ಖರೀದಿಯಲ್ಲಿ ಪಾರದರ್ಶಕತೆ ಅಧಿನಿಯಮ-1999 ರ ನಿಯಮ 4(ಜಿ) ರಡಿ ವಿನಾಯಿತಿಯನ್ನು ಪಡೆದುಕೊಳ್ಳಬೇಕು.
ನಿಯಮಾನುಸಾರ ಖರೀದಿ ಪ್ರಕ್ರಿಯೆಯನ್ನು ಪೂರ್ಣಗೋಳಿಸಿ, ಖರೀದಿ ಬಳಕೆ ಪ್ರಮಾಣ ಪತ್ರವನ್ನು ಮತ್ತು ಖರೀದಿ ಸ್ವಿÃಕೃತಿಗಳನ್ನು ಸಂಬಂಧಿತ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಒದಗಿಸುವುದು ಮತ್ತು ಈ ವೆಚ್ಚಗಳನ್ನು ಆಡಿಟ್‌ಗೆ ಒಳಪಡಿಸುವುದು.
ಶೂ ಮತ್ತು ಸಾಕ್ಸ್ಗಳನ್ನು ಖರೀದಿಯಲ್ಲಿ ಉಪನಿರ್ದೇಶಕರು ಹಾಗೂ ಕ್ಷೇತ್ರಶಿಕ್ಷಣಾಧಿಗಳಾಗಲಿ, ಹಾಗೂ ಇನ್ನಿತರ ಅಧಿಕಾರಿ, ಸಿಬ್ಬಂದಿಗಳಾಗಲಿ ಮುಖ್ಯೋಪಾದ್ಯಾಯರಿಗೆ ಅಥವಾ ಎಸ್.ಡಿ.ಎಮ್.ಸಿ ಯವರಿಗೆ ಓತ್ತಡ ಹೇರಿ ಯಾವುದೋ ಒಂದು ಕಡೆ ಅಥವಾ ಕೇಂದ್ರಿಕೃತ ಖರೀದಿ ಮಾಡಲು ಒತ್ತಡ ಹೇರತಕ್ಕದ್ದಲ್ಲ. ಹಾಗೂ ಎಸ್.ಡಿ.ಎಮ್.ಸಿ ದವರಿಗೆ ಖರೀದಿಯಲ್ಲಿ ಸ್ವಾತಂತ್ರ್ಯ ಒದಗಿಸುವುದು. ಒಂದು ವೇಳೆ ಒತ್ತಡ ಹೇರಿದಲ್ಲಿ ಸಂಬಂಧಿಸಿದ ಎಸ್.ಡಿ.ಎಮ್.ಸಿ ಮುಖ್ಯೋಪಾದ್ಯಾಯರು ಈ ಕಚೇರಿಗೆ ಅಂತವರ ಮೇಲೆ ದೂರು ಸಲ್ಲಿಸಲು ಸೂಚಿಸಿದೆ.
ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾಗಳು ಈ ಕುರಿತು ಸಾಕಷ್ಟು ಪ್ರಚಾರವನ್ನು ಮಾಡುವುದು ತಾಲೂಕಾ ಹಾಗೂ ಜಿಲ್ಲಾ ಹಂತದಲ್ಲಿ ನಡೆಯುವ ಮುಖ್ಯೋಪಾದ್ಯಾಯರ ಸಭೆಗಳಲ್ಲಿ ಈ ವಿಷಯವನ್ನು ಕಡ್ಡಾಯವಾಗಿ ತಿಳಿಸುವುದು ಹಾಗೂ ತಮ್ಮ ಜಿಲ್ಲಾ, ತಾಲೂಕಾ ಅಧಿಕಾರಿಗಳಿಗೆ ತಿಳಿಸಿ ಜಿಲ್ಲೆಯ ಎಲ್ಲ ಶಾಲಾ ಮುಖ್ಯೋಪಾದ್ಯಾಯರ ಗಮನಕ್ಕೆ ತರುವುದು.
ಶಾಲೆಗಳವರು ನಿಯಮಾನುಸಾರ ಕರ್ನಾಟಕ ಪಾರರ್ದಶಕ ಅಧಿನಿಯಯಮದಡಿ ಪ್ರಸ್ತಾಪಿಸಿರುವಂತೆ ದರಪಟ್ಟಿ ಕರೆದು ಕನಿಷ್ಠ ದರಗಳು ಬಂದಲ್ಲಿ ದರಪಟ್ಟಿ ಪರಿಶೀಲಿಸಿ ಎಲ್-1 ಆಗಿ ಆಯ್ಕೆಯಾಗುವ ಸರಬರಾಜುದಾರರಿಗೆ ಕಾರ್ಯಾದೇಶ ನೀಡುವುದು.
ಶೂ ಮತ್ತು ಸಾಕ್ಸ್ ಸರಬರಾಜು ಪ್ರಕ್ರಿಯೆ ಮುಗಿಯುತ್ತಿದ್ದಂತೆ ಸಂಬಂಧಪಟ್ಟ ಸರಬರಾಜುದಾರರಿಗೆ ಹಣವನ್ನು ಚೆಕ್ ಮೂಲಕ ವಿತರಣೆ ಮಾಡಬೇಕು ಎಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಪ್ರಕಟಣೆಯಲ್ಲಿ ಸೂಚಿಸಿದ್ದಾರೆ. ////
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ