Kannada News

ಬೇಡಿಕೆ ಈಡೇರಿಕೆಗೆ ಅಗ್ರಹಿಸಿ ಮುಖ್ಯೋಪಾಧ್ಯಾಯ ಸಂಘದ ಮನವಿ

ಬೇಡಿಕೆ ಈಡೇರಿಕೆಗೆ ಅಗ್ರಹಿಸಿ ಮುಖ್ಯೋಪಾಧ್ಯಾಯ ಸಂಘದ ಮನವಿ

ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಬಹುದಿನಗಳ ಸಮಸ್ಯೆಗಳ ಈಡೇರಿಕೆಗಾಗಿ ಹಿರಿಯ ಅಧಿಕಾರಿಗಳ ಗಮನಕ್ಕೆ ತರುವ ನಿಟ್ಟಿನಲ್ಲಿ ನ್ಯಾಯಯುತ ಬೇಡಿಕೆಗಳ ಕುರಿತು ಮನವಿ ಸಲ್ಲಿಸುವುದು ಜಿಲ್ಲೆಯಲ್ಲಿ ಸಂಘಟನೆ ಬಲಗೊಳಿಸುವುದು ಸೇರಿದಂತೆ ಹಲವು ಮಹತ್ವದ ವಿಚಾರಗಳ ಕುರಿತು ಇಂದಿಲ್ಲಿ ಚರ್ಚೆ ನಡೆಸಲಾಯಿತು.

ಬೆಳಗಾವಿಯ ನಗರ ಕೇಂದ್ರ ಗ್ರಂಥಾಲಯದ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಹಿರಿಯ ಹಾಗೂ ಪದವಿದರೇತರ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರ ಸಂಘದ ಜಿಲ್ಲಾ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸುಧೀರ್ಘ ಚರ್ಚಿಸಿ, ಅವುಗಳ ಈಡೆರಿಕೆಗಾಗಿ ಮನವಿ ನೀಡಿ ಹೋರಾಟ ನಡೆಸಿ ಈಡೇರಿಸಿಕೊಳ್ಳುವ ಕುರಿತು ನಿರ್ಣಯಿಸಲಾಯಿತು.

6ನೇಯ ವೇತನ ಆಯೋಗದ ಶಿಫಾರಸ್ಸಿನಂತೆ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಿಗೆ 20,25,30 ವರ್ಷ ಸೇವೆಯ ವಿಶೇಷ ವೇತನ ಬಡ್ತಿ ಮಂಜೂರ ಮಾಡುವುದು. ವಿದ್ಯಾರ್ಥಿಗಳ ಸ್ಕಾಲರಶೀಫ್ ಅರ್ಜಿಗಳಿಗೆ ಆಧಾರ ಲಿಂಕ್ ಜೋಡಣೆಯ ಕಾರ್ಯಗಳಿಂದ ಮುಖ್ಯೋಪಾಧ್ಯಾಯರನ್ನು ಹೊರತುಪಡಿಸಬೇಕು.

ಮಧ್ಯಾಹ್ನ ಬಿಸಿಯೂಟ ಯೋಜನೆಯ ಮೇಲ್ವಿಚಾರಣೆ ಕಾರ್ಯಗಳಿಂದ ಬಿಡುಗಡೆಗೊಳಿಸಬೇಕು. ಪ್ರಾಥಮಿಕ ಶಾಲೆಗಳಿಗೆ ಶಾಲಾನುಧಾನವನ್ನು 1 ಲಕ್ಷದವರೆಗೆ ಏರಿಸಬೇಕು. ಹಿರಿಯ ಪ್ರಾಥಮಿಕ ಶಾಲೆಗಳಿಗೆ ‘ಡಿ’ ದರ್ಜೆ ನೌಕರರನ್ನು ಮಂಜೂರ ಮಾಡಬೇಕು. ವಲಯಕ್ಕೊಂದು ಕಂಪ್ಯೂಟರ ಕೇಂದ್ರಗಳನ್ನು ಸ್ಥಾಪಿಸಬೇಕು. ಸೇರಿದಂತೆ ಹಲವು ಬೇಡಿಕೆಗಳನ್ನು ಮಂಡಿಸಲು ನಿರ್ಧರಿಸಲಾಯಿತು.

ಸಂಘದ ಜಿಲ್ಲಾಧ್ಯಕ್ಷ ಬಿ.ಎಸ್.ಹುಣಸೀಕಟ್ಟಿ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಗೌರವಾಧ್ಯಕ್ಷ ಶಶಿಧರ ರೊಟ್ಟಿ, ಉಪಾಧ್ಯಕ್ಷ ಕೆ.ಆರ್.ದೊಂಡಪ್ಪನವರ, ಪ್ರಧಾನ ಕಾರ್ಯದರ್ಶಿ ಬಸವರಾಜ ಸುಣಗಾರ ಪದಾಧಿಕಾರಿಗಳಾದ ಎಸ್.ಬಿ.ಜಕಾತಿ, ಎಂ.ಎಸ್.ಬೋಳಣ್ಣವರ, ವಾಯ್.ಆರ್.ಗುಡಿ, ಸುರೇಶ ಬೆಳಗಾವಿ, ಎಸ್.ಎಂ.ಶಹಾಪೂರಮಠ, ಬಿ.ವಾಯ್.ಮಡಿವಾಳರ, ಎಸ್.ಜಿ.ಚವಲಗಿ, ಪಿ.ಕೆ.ಘೋಲಪೆ, ಶ್ರೀಮತಿ ಸುಶೀಲಾ ರಜಪೂತ, ಎಂ.ವಾಯ್.ಕೊರಡೆ, ರಾಜೇಂದ್ರ ಚಲವಾದಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಬಸವರಾಜ ಸುಣಗಾರ ಕಾರ್ಯಕ್ರಮ ನಿರ್ವಹಿಸಿದರು. /////

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button