Kannada NewsLatest

ಸರದಾರ ರಾಜಾ ಲಖಮಗೌಡರ 156ನೇ ಜಯಂತಿ ಅಂಗವಾಗಿ, ರಕ್ತದಾನ ಶಿಬಿರ

ಸರದಾರ ರಾಜಾ ಲಖಮಗೌಡರ 156ನೇ ಜಯಂತಿ ಅಂಗವಾಗಿ, ರಕ್ತದಾನ ಶಿಬಿರ

ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : ಬೆಳಗಾವಿ ನಗರದ ಪ್ರತಿಷ್ಠಿತ ಕೆ.ಎಲ್.ಇ. ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ ಮಹಾವಿದ್ಯಾಲಯ (ಸ್ವಾಯತ್ತ)ದಲ್ಲಿ ದಿನಾಂಕ 29-07-2019 ರಂದು “ಸರದಾರ ರಾಜಾ ಲಖಮಗೌಡರ 156ನೇ ಜಯಂತಿ ಉತ್ಸವದ ಅಂಗವಾಗಿ ರಾಷ್ಟ್ರೀಯ ಸೇವಾ ಯೋಜನಾ ಘಟಕ ಮತ್ತು ಎನ್.ಸಿ.ಸಿ. ಘಟಕಗಳ ಸಂಯುಕ್ತ ಆಶ್ರಯದಲ್ಲಿ “ರಕ್ತದಾನ ಶಿಬಿರ” ಕಾರ್ಯಕ್ರಮ ಜರುಗಿತು.

ರಕ್ತದಾನ ಶಿಬಿರವನ್ನು ಉದ್ದೇಶಿಸಿ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ವ್ಹಿ.ಡಿ. ಯಳಮಲಿ ಅವರು ಮಾತನಾಡುತ್ತಾ, ದಾನಗಳಲ್ಲಿ ರಕ್ತದಾನವು ಪ್ರಮುಖವಾದದು. ಅಪಘಾತಗಳ ಸಂದರ್ಭಗಳಲ್ಲಿ ದಾನ ಮಾಡಿದ ರಕ್ತದಿಂದ ಮಾನವ ಜೀವಿಗಳನ್ನು ಬದುಕಿಸಲು ಸಹಕಾರಿಯಾಗುತ್ತದೆ.

ವಿವಿಧ ರೀತಿಯ ಶಸ್ತ್ರಚಿಕಿತ್ಸೆಗಳಿಗೆ ಒಳಗಾಗುವ ನಾಗರಿಕರಿಗೆ ರಕ್ತದಿಂದ ಅನುಕೂಲವಾಗುತ್ತದೆ. ಖಾಯಿಲೆಗಳಿಗೆ ಒಳಗಾಗಿರುವ ವಯೋವೃದ್ಧರಿಗೆ ಮತ್ತು ಯುವಕರಿಗೆ ದಾನಮಾಡಿದ ರಕ್ತದಿಂದ ಪ್ರಯೋಜನವಾಗುತ್ತದೆ. ರಕ್ತದಾನ ಮಾಡುವ ಗುಣಗಳನ್ನು ವಿದ್ಯಾರ್ಥಿಗಳು ಬದುಕಿನಲ್ಲಿ ರೂಢಿಸಿಕೊಳ್ಳಬೇಕು ಎಂದು ನುಡಿದರು.

ಕಾರ್ಯಕ್ರಮದಲ್ಲಿ ರಾಜಾ ಲಖಮಗೌಡ ಪದವಿ ಪೂರ್ವ ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ. ಎಸ್.ಜಿ. ನಂಜಪ್ಪನವರ ಅವರು, ಎನ್.ಎಸ್.ಎಸ್. ಅಧಿಕಾರಿಯಾದ ಪ್ರೊ. ಎಸ್.ಎಸ್. ಅಬ್ಬಾಯಿ,, ಎನ್.ಸಿ.ಸಿ. ಅಧಿಕಾರಿಗಳಾದ ಪ್ರೊ. ಎಸ್.ಡಿ. ಗೋರಿನಾಯ್ಕ ಮತ್ತು ಪ್ರೊ.(ಶ್ರೀಮತಿ) ಎಚ್.ಆಯ್. ಹಾಲಪ್ಪನವರ, ಮಹಾವಿದ್ಯಾಲಯದ ಸಿಬ್ಬಂದಿಗಳು, ಎನ್.ಎಸ್.ಎಸ್. ಸ್ವಯಂಸೇವಕರು, ಮತ್ತು ಎನ್.ಸಿ.ಸಿ. ಕೆಡೆಟ್ಸ್ಗಳು ಉಪಸ್ಥಿತರಿದ್ದರು.

53 ವಿದ್ಯಾರ್ಥಿಗಳು ಶಿಬಿರದಲ್ಲಿ ರಕ್ತದಾನ ಮಾಡಿದರು. ರಕ್ತವನ್ನು ಕೆ.ಎಲ್.ಇ. ಸಂಸ್ಥೆಯ ಡಾ.ಪ್ರಭಾಕರ ಕೋರೆ ವೈದ್ಯಕೀಯ ಸಂಶೋಧನಾ ಕೇಂದ್ರ ಮತ್ತು ಆಸ್ಪತ್ರೆಯ ರಕ್ತ ಭಂಢಾರಕ್ಕೆ ನೀಡಲಾಯಿತು.////

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button