ಪ್ರಗತಿವಾಹಿನಿ ಸುದ್ದಿ; ಗದಗ: ಚೈತ್ರಾ ಕುಂದಾಪುರ ವಂಚನೆ ಪ್ರಕರಣದ ಪ್ರಮುಖ ಆರೋಪಿ ಅಭಿನವ ಹಾಲಶ್ರೀ ಸ್ವಾಮೀಜಿ ವಿರುದ್ಧ ಮತ್ತೊಂದು ವಂಚನೆ ಕೇಸ್ ದಾಖಲಾಗಿದೆ. ಹಾಲಶ್ರೀ ವಿರುದ್ಧ ಗ್ರಾಮ ಪಂಚಾಯಿತಿ ಪಿಡಿಒ ಒಬ್ಬರು ದೂರು ನೀಡಿದ್ದಾರೆ.
ಶಿರಹಟ್ಟಿ ಮೀಸಲು ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಭರವಸೆ ನೀಡಿ 1 ಕೋಟಿ ಹಣ ಪಡೆದಿದ್ದಾಗಿ ಅಭಿನವ ಹಾಲಶ್ರೀ ವಿರುದ್ಧ ಸಂಜಯ ಚವಡಾಳ ಎಂಬುವವರು ಮುಂಡರಗಿ ಠಾಣೆಯಲ್ಲಿ ಲಿಖಿತ ದೂರು ನೀಡಿದ್ದಾರೆ.
ಶಿರಹಟ್ಟಿ ತಾಲೂಕಿನ ರಣತೂರು ಗ್ರಾಮ ಪಂಚಾಯಿತಿ ಪಿಡಿಒ ಸಂಜಯ ಚವಡಾಳ ಕರ್ತವ್ಯಲೋಪದ ಆರೋಪದಲ್ಲಿ ಅಮಾನತುಗೊಂಡಿದ್ದರು. ವಿಧನಸಭಾ ಚುನಾವಣೆ ಸ್ಪರ್ಧೆಗಾಗಿ ಹಲವು ವರ್ಷಗಳಿಂದ ತಯಾರಿನಡೆಸಿದ್ದರು. ಆದರೆ ಟಿಕೆಟ್ ಸಿಗದ ಕಾರಣ ಸಾಧ್ಯವಾಗಿಲ್ಲ. ಅಭಿನವ ಹಾಲಶ್ರೀ ಸ್ವಾಮೀಜಿ ತಾನು ಬಿಜೆಪಿಯಲ್ಲಿ ಪ್ರಭಾವಿಯಾಗಿ ಗುರುತಿಸಿಕೊಂಡಿದ್ದಾಗಿ ಹೇಳಿದ್ದರಂತೆ. ಹಾಗಾಗಿ ಶಿರಹಟ್ಟಿ ಮೀಸಲು ಕ್ಷೇತ್ರದ ಟಿಕೆಟ್ ಕೊಡಿಸುವಂತೆ ಸಂಜಯ ಚವಡಾಳ, ಹಾಲಶ್ರೀಗೆ ಕೇಳಿದ್ದರಂತೆ. ಟಿಕೆಟ್ ಗಾಗಿ ಬರೋಬ್ಬರಿ 1 ಕೋಟಿ ಹಣವನ್ನು ಹಾಲಶ್ರೀಗೆ ನೀಡಿದ್ದರಂತೆ.
ಆದರೆ ಚುನಾವಣೆ ವೇಳೆ ಟಿಕೆಟೂ ಸಿಗದೆ, ಕೊಟ್ಟ ಹಣವೂ ವಾಪಸ್ ಸಿಗದೇ ಮೋಸ ಹೋಗಿದ್ದಾರೆ. ಇದೀಗ ಉದ್ಯಮಿಗೆ ವಂಚನೆ ಪ್ರಕರಣದಲ್ಲಿ ಅಭಿನವ ಹಾಲಶ್ರೀ ಬಂಧನವಾಗುತ್ತಿದ್ದಂತೆ ಮುಂದರಗಿ ಠಾಣೆಯಲ್ಲಿ ದೂರು ನೀಡಿರುವ ಸಂಜಯ, ಹಾಲಶ್ರೀಯಿಂದ ತನಗೂ ಕೋಟಿ ವಂಚನೆಯಾಗಿದೆ ಎಂದು ದೂರು ನೀಡಿದ್ದಾರೆ.
ಹಾಲಶ್ರೀಗೆ ಹಣ ನಿಡಿದ ಬಗ್ಗೆ ಸೂಕ್ತ ದಾಖಲೆ ನೀಡುವಂತೆ ಪೊಲೀಸರು ಸಂಜಯ ಚವಡಾಳಗೆ ಸೂಚಿಸಿದ್ದಾರೆ. ದಾಖಲೆ ನೀಡಿದರೆ ಎಫ್ ಐ ಆರ್ ದಾಖಲಿಸಿ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ