Kannada NewsLatestNational

*ಸಿಕ್ಕಿಂ ನಲ್ಲಿ ಹಠಾತ್ ಪ್ರವಾಹ; 23 ಸೈನಿಕರು ನಾಪತ್ತೆ*

ಪ್ರಗತಿವಾಹಿನಿ ಸುದ್ದಿ. ಸಿಕ್ಕಿಂ: ಸಿಕ್ಕಿಂನ ಲಾಚೆನ್ ಕಣಿವೆಯ ತೀಸ್ತಾ ನದಿಯಲ್ಲಿ ಹಠಾತ್ ಪ್ರವಾಹ ಉಂಟಾಗಿ ಕನಿಷ್ಠ 23 ಸೈನಿಕರು ನಾಪತ್ತೆಯಾಗಿದ್ದಾರೆ ಎಂಬ ಆತಂಕಕಾರಿ ವರದಿಯಾಗಿದೆ. ದೂರದ ಕಣಿವೆಯಲ್ಲಿ ತೀವ್ರವಾದ ಮಳೆಯಿಂದಾಗಿ ತೀವ್ರ ತರವಾದ ಪ್ರವಾಹದ ಉಂಟಾಗಿ 23 ಸೈನಿಕರು ಕಾಣೆಯಾಗಿದ್ದಾರೆ ಎಂದು ಸೇನೆಯು ಹೇಳಿಕೆಯಲ್ಲಿ ತಿಳಿಸಿದೆ.

ಈ ಪ್ರದೇಶದಲ್ಲಿ ಮೇಘಸ್ಪೋಟವಾದ ನಂತರ ಚುಂಗ್‌ಥಾಂಗ್ ಅಣೆಕಟ್ಟಿನಿಂದ ನೀರು ಬಿಡುಗಡೆ ಮಾಡಿರುವುದು ಹಠಾತ್ ಪ್ರವಾಹಕ್ಕೆ ಕಾರಣ ಎನ್ನಲಾಗಿದೆ. ಇದರಿಂದಾಗಿ ಕೆಳಭಾಗದಲ್ಲಿ 20 ಅಡಿಗಳಷ್ಟು ನೀರಿನ ಮಟ್ಟ ಏರಿಕೆಯಾಗಿದೆ.

“ಉತ್ತರ ಸಿಕ್ಕಿಂನ ಲೊನಾಕ್ ಸರೋವರದ ಮೇಲೆ ಹಠಾತ್ ಮೇಘ ಸ್ಫೋಟದಿಂದಾಗಿ, ತೀಸ್ತಾ ನದಿಯಲ್ಲಿ ಪ್ರವಾಹ ಬಂದು 23 ಸಿಬ್ಬಂದಿ ಕಾಣೆಯಾಗಿದ್ದಾರೆ ಮತ್ತು ಕೆಲವು ವಾಹನಗಳು ಕೆಸರಿಡಿಯಲ್ಲಿ ಮುಳುಗಿವೆ ಎಂದೂ ವರದಿಯಾಗಿದೆ ” ಎಂದು ಸೇನೆಯು ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಅದಕ್ಕಾಗಿ ಕಾಣೆಯಾದ ಸೈನಿಕರಿಗಾಗಿ ಹುಡುಕಾಟ ನಡೆಯುತ್ತಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button