Latest

10 ಮುಸ್ಲಿಂ ಶಾಸಕರಿಂದ ಯಡಿಯೂರಪ್ಪಗೆ ಮನವಿ

10 ಮುಸ್ಲಿಂ ಶಾಸಕರಿಂದ ಯಡಿಯೂರಪ್ಪಗೆ ಮನವಿ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು –

ಇದೇ ತಿಂಗಳು 12ರಂದು ಮುಸ್ಲಿಂರು ಬಕ್ರೀದ್ ಆಚರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ 6 ಶಾಸಕರು ಮತ್ತು 4 ವಿಧಾನಪರಿಷತ್ ಸದಸ್ಯರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ನಿವೇದನೆ ಸಲ್ಲಿಸಿದ್ದಾರೆ.

ಮಾಜಿ ಸಚಿವರೂ, ಹಾಲಿ ಶಾಸಕರೂ ಆಗಿರುವ ತನ್ವೀರ್ ಸೇಠ್, ಯು.ಟಿ.ಖಾದರ್, ಜಮೀರ್ ಅಹ್ಮದ್, ಶಾಸಕರಾದ ರಹೀಂ ಖಾನ್, ಖನೀಜ್ ಫಾತಿಮಾ, ಎನ್.ಎ.ಹ್ಯಾರೀಸ್, ವಿಧಾನಪರಿಷತ್ ಸದಸ್ಯರಾದ ಸಿ.ಎಂ.ಇಬ್ರಾಹಿಂ, ನಸೀರ್ ಅಹ್ಮದ್, ರಿಜ್ವಾನ್ ಅರ್ಷದ್ ಹಾಗೂ ಅಬ್ದುಲ್ ಜಬ್ಬಾರ ಸಿಎಂ ಗೆ ಮನವಿ ಸಲ್ಲಿಸಿದ್ದಾರೆ.

Home add -Advt

ಮುಸ್ಲಿಂರು 1400 ವರ್ಷಗಳಿಂದಲೂ ಬಕ್ರೀದ್ ಆಚರಿಸುತ್ತ ಬರುತ್ತಿದ್ದು, ಇದು ಪವಿತ್ರ ಹಬ್ಬವಾಗಿದೆ. ಈ ಸಂದರ್ಭದಲ್ಲಿ ಎಲ್ಲಾ ಮುಸ್ಲಿ ಸಮುದಾಯದವರು ಅವರ ಸಾಮರ್ಥ್ಯಕ್ಕೆ ತಕ್ಕಂತೆ ದೇವರ ಹೆಸರಿನಲ್ಲಿ ಬಲಿಯನ್ನು ನೀಡಿ, ಅದನ್ನು ಬಡವರ್ಗಕ್ಕೆ ದಾನವಾಗಿ ನೀಡುತ್ತಾ ಬಂದಿದ್ದಾರೆ. ಇದು ದಶಕಗಳಿಂದಲೂ ಪಂರಪರೆಯಾಗಿ ನಡೆದುಕೊಂಡು ಬಂದಿರುತ್ತದೆ. ಎಲ್ಲಾ ಮುಸ್ಲಿಂಮರೂ ಇದನ್ನು ಆಚರಿಸಲೇಬೇಕಾಗುತ್ತದೆ.

ಆದ್ದರಿಂದ ಬಕ್ರೀದ್ ಸಂದರ್ಭದಲ್ಲಿ ಪ್ರಾಣಿಗಳನ್ನು ವಾಹನದಲ್ಲಿ ಸಾಗಿಸಲು ಅಡಚಣೆ ಮಾಡದಂತೆ ಹಾಗೂ ಈ ಹಬ್ಬವನ್ನು ಸುಗಮವಾಗಿ ನಡೆಸಲು ಅನುಕೂಲವಾಗುವಂತೆ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತಗಳಿಂದ ಸೂಕ್ತ ರಕ್ಷಣೆ ನೀಡುವಂತೆ ಆದೇಶ ನೀಡಬೇಕು ಎಂದು ಅವರು ಕೋರಿದ್ದಾರೆ.

 

Related Articles

Back to top button