Kannada NewsLatest

ಪ್ರವಾಹ ಭೀತಿ: ಜನ, ಜಾನುವಾರಗಳ ಸ್ಥಳಾಂತರಕ್ಕೆ ಸೂಚನೆ

ಪ್ರವಾಹ ಭೀತಿ: ಜನ ಜಾನುವಾರಗಳ ಸ್ಥಳಾಂತರಕ್ಕೆ ಸೂಚನೆ

ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : ಮಹಾರಾಷ್ಟ್ರದ ಜಲಾಶಯಗಳಿಂದ ಬಿಡಲಾಗುತ್ತಿರುವ ನೀರಿನ ಪ್ರಮಾಣದಲ್ಲಿ ಅಂದಾಜು 4.00 ಅಡಿಗಳಷ್ಟು ನೀರು ಏರಿಕೆ ಆಗುವ ಸಂಭವವಿರುತ್ತದೆ. ಆದರಿಂದ ನದಿಗಳ ಪಾತ್ರಗಳಲ್ಲಿರುವ ಜನರು ತಮ್ಮ ಅಗತ್ಯ ಸಾಮಗ್ರಿಗಳೊಂದಿಗೆ, ಜಾನುವಾರುಗಳೊಂದಿಗೆ ಸುರಕ್ಷಿತ ಪ್ರದೇಶಗಳಿಗೆ ತೆರಳಬೇಕು ಎಂದು ಜಿಲ್ಲಾಧಿಕಾರಿ ಡಾ. ಎಸ್.ಬಿ ಬೊಮ್ಮನಹಳ್ಳಿ ಅವರು ತಿಳಿಸಿದ್ದಾರೆ.

ಜನ ಜಾನುವಾರುಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವಲ್ಲಿ ಜಿಲ್ಲಾಡಳಿತ ವತಿಯಿಂದ ಎಲ್ಲಾ ಅಗತ್ಯವಾದ ರೀತಿಯ ಸಹಕಾರಗಳನ್ನು ನೀಡಲಾಗುವುದು. ಜಿಲ್ಲಾಡಳಿತವು ರಕ್ಷಣಾ ಸಾಮಗ್ರಿಗಳೊಂದಿಗೆ ತಂಡಗಳನ್ನು ರಚಿಸಿ ಸಿದ್ಧತೆಯಲ್ಲಿಟ್ಟುಕೊಂಡಿದ್ದು, ಪ್ರವಾಹದ ಪರಿಸ್ಥಿತಿಯನ್ನು ಎದುರಿಸಲು ಎಲ್ಲ ರೀತಿಯ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಂಡಿದೆ.

ಸಾರ್ವಜನಿಕರು ಸಹಾಯದ ಅಗತ್ಯವೆನಿಸಿದಲ್ಲಿ ಈ ಕೆಳಕಂಡ ಕಾರ್ಯಾಲಯಗಳ ನಿಯಂತ್ರಣ ಕೊಠಡಿಗಳನ್ನು ಸಂಪರ್ಕಿಸಬಹುದಾಗಿದೆ.

ಕಾರ್ಯಾಲಯಗಳ ನಿಯಂತ್ರಣ ಕೊಠಡಿಗಳು ಹಾಗೂ ದೂರವಾಣಿ ಸಂಖ್ಯೆ:

ಜಿಲ್ಲಾಧಿಕಾರಿಗಳ ಕಾರ್ಯಾಲಯ ಬೆಳಗಾವಿ 0831-2407290, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಬೆಳಗಾವಿ 0831-2405231, ತಹಶೀಲ್ದಾರ ಕಾರ್ಯಾಲಯ ಚಿಕ್ಕೋಡಿ 08338-272228, ತಹಶೀಲ್ದಾರ ಕಾರ್ಯಾಲಯ ರಾಯಬಾಗ 08331-225482, ತಹಶೀಲ್ದಾರ ಕಾರ್ಯಾಲಯ ಅಥಣಿ 08289-251146, ತಹಶೀಲ್ದಾರ ಕಾರ್ಯಾಲಯ ನಿಪ್ಪಾಣಿ 08338-220395

ನೆರೆಯ ಮಹಾರಾಷ್ಟ್ರ ರಾಜ್ಯದಲ್ಲಿ ಭಾರಿ ಪ್ರಮಾಣದಲ್ಲಿ ಮಳೆ ಸುರಿಯುತ್ತಿದ್ದು, ಇದರಿಂದಾಗಿ ಕೃಷ್ಣಾ ನದಿ, ವೇದಗಂಗಾ ಹಾಗೂ ದೂಧಗಂಗಾ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ದಿನಾಂಕ:03.08.2019ರಂದು ಮುಂಜಾನೆ 10.00ಗಂಟೆಗೆ ಲಬ್ಯವಿರುವ ಮಾಹಿತಿಯ ಪ್ರಕಾರ ಮಹಾರಾಷ್ಟ್ರದ ಜಲಾಶಯಗಳಿಂದ ಒಟ್ಟು 205118 ಕ್ಯೂಸೆಕ್ಸ್ ನೀರು ಬರುತ್ತಿದೆ.

ಈ ಕೆಳಕಂಡ ರಸ್ತೆ, ಸೇತುವೆಗಳು ಜಲಾವೃತವಾಗಿದ್ದು, ಇವುಗಳಿಗೆ ಪರ್ಯಾಯ ರಸ್ತೆಗಳ ಮೂಲಕ ಸಂಚಾರ ಜಾಯಲ್ಲಿದೆ. ಕಲ್ಲೋಳ- ಯಡೂರ ತಾ:ಚಿಕ್ಕೋಡಿ (ಕೃಷ್ಣಾ ನದಿ)ಕಾರದಗಾ-ಭೋಜ ತಾ:ಚಿಕ್ಕೋಡಿ (ವೇದಗಂಗಾ+ದೂದಗಂಗಾ ನದಿ), ಮಲಿಕವಾಡ-ದತ್ತವಾಡ ತಾ:ಚಿಕ್ಕೋಡಿ (ದೂದಗಂಗಾ ನದಿ), ಭೋಜವಾಡಿ-ಕುನ್ನೂರ ತಾ: ಚಿಕ್ಕೋಡಿ (ವೇದಗಂಗಾ ನದಿ), ಸಿದ್ನಾಳ-ಅಕ್ಕೋಳ ತಾ: ಚಿಕ್ಕೋಡಿ (ವೇದಗಂಗಾ ನದಿ),

ಜತ್ರಾಟ-ಭೀವಶಿ ತಾ: ಚಿಕ್ಕೋಡಿ (ವೇದಗಂಗಾ ನದಿ), ಸದಲಗಾ-ಬೋರಗಾಂವ ತಾ:ಚಿಕ್ಕೋಡಿ (ವೇದಗಂಗಾ+ದೂದಗಂಗಾ ನದಿ), ಯಕ್ಸಂಬಾ-ದಾನವಾಡ ತಾ:ಚಿಕ್ಕೋಡಿ (ದೂದಗಂಗಾ ನದಿ), ಕುಡಚಿ ಸೇತುವೆ ತಾ: ರಾಯಬಾಗ (ಕೃಷ್ಣಾ ನದಿ), ರಾಯಬಾಗ-ಚಿಂಚಲಿ ತಾ:ರಾಯಬಾಗ (ಕೃಷ್ಣಾ ನದಿ), ನದಿ ಇಂಗಳಗಾಂವ-ತೀರ್ಥ ತಾ:ಅಥಣಿ (ಕೃಷ್ಣಾ ನದಿ), ಸಪ್ತಸಾಗರ-ಬನದವಸತಿ ತಾ:ಅಥಣಿ (ಕೃಷ್ಣಾ ನದಿ), ಕೊಕಟನೂರ-ಶಿರಹಟ್ಟಿ ತಾ:ಅಥಣಿ (ಕೃಷ್ಣಾ ನದಿ), ಜುಂಜರವಾಡ-ತುಬಚಿ ತಾ:ಅಥಣಿ (ಕೃಷ್ಣಾ ನದಿ), ಖವಟಕೊಪ್ಪ-ಶೇಗುಣಸಿ ತಾ:ಅಥಣಿ

(ಕೃಷ್ಣಾ ನದಿ), ಉಗಾರ ಕೆ.ಎಚ್ – ಉಗಾರ ಬಿ.ಕೆ, ರಸ್ತೆ ತಾ: ಕಾಗವಾಡ (ಕೃಷ್ಣಾ ನದಿ) ನದಿ ದಂಡೆಗಳ ಮೇಲಿರುವ ಪಂಪಸೆಟ್‍ಗಳನ್ನು ಹೊರತೆಗೆಯುವ ಪ್ರಯತ್ನಗಳನ್ನು ಮಾಡಬಾರದೆಂದು ಹಾಗೂ ಮೇಲೆ ವಿವರಿಸಿದ ರಸ್ತೆ, ಸೇತುವೆಗಳ ಮೇಲೆ ಸಾರ್ವಜನಿಕರು ಸಂಚಾರ ಮಾಡದಂತೆ ಜಿಲ್ಲಾಧಿಕಾರಿಗಳಾದ ಡಾ. ಎಸ್.ಬಿ ಬೊಮ್ಮನಹಳ್ಳಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.////

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button