*ತೆಲಂಗಾಣದಲ್ಲಿ ಕಾಂಗ್ರೆಸ್ ಮೊದಲ ಜಯಭೇರಿ; ಬಿಆರ್ ಎಸ್ ನ ಘಟಾನುಘಟಿ ನಾಯಕರಿಗೆ ಹಿನ್ನಡೆ*
ಪ್ರಗತಿವಾಹಿನಿ ಸುದ್ದಿ; ಹೈದರಾಬಾದ್: ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ಆಡಳಿತಾರೂಢ ಬಿಎಸ್ ಆರ್ ತೀವ್ರ ಹಿನ್ನಡೆ ಅನುಭವಿಸಿದ್ದು, ಕಾಂಗ್ರೆಸ್ ಗೆಲುವಿನ ವಿಶ್ವಾಸ ಬೀರಿದೆ.
ಇತ್ತೀಚಿನ ಮಾಹಿತಿ ಪ್ರಕಾರ ತೆಲಂಗಾಣದಲ್ಲಿ ಕಾಂಗ್ರೆಸ್ ಮೊದಲ ಗೆಲುವು ದಾಖಲಿಸಿದೆ. ಕಾಂಗ್ರೆಸ್ ಅಭ್ಯರ್ಥಿ ಆದಿನಾರಾಯಣ ಅಶ್ವರಾವುಪೇಟ ಕ್ಷೇತ್ರದಲ್ಲಿ ಜಯಭೇರಿ ಭಾರಿಸಿದ್ದಾರೆ.
ಸುಮಾರು 28 ಸಾವಿರ ಮತಗಳ ಅಂತರದಿಂದ ಆದಿನಾರಾಯಣ ಜಯಗಳಿಸಿದ್ದಾರೆ. ಈ ಕ್ಷೇತ್ರದಲ್ಲಿ ಬಿಎಸ್ ಆರ್ ಹಾಗೂ ಬಿಜೆಪಿಗೆ ತೀವ್ರ ಹಿನ್ನಡೆಯಾಗಿದೆ.
ಇನ್ನು ತೆಲಂಗಾಣದಲ್ಲಿ ಸಿಎಂ ಕೆ.ಚಂದ್ರಶೇಖರ್ ರಾವ್, ಪುತ್ರ ಸಚಿವ ಕೆ.ಇ.ರಾಮ್ ರಾವ್ ಸೇರಿದಂತೆ ಘಟಾನುಘಟಿ ನಾಯಕರಿಗೆ ಹಿನ್ನಡೆಯಾಗಿದೆ. ಸಿಎಂ ಚಂದ್ರಶೇಖರ್ ರಾವ್ ಸ್ವಕ್ಷೇತ್ರದಲ್ಲಿಯೇ ಸೋಲನುಭವಿಸಿದ್ದು, ಕಾಂಗ್ರೆಸ್ ಅಭ್ಯರ್ಥಿ ರೇವಂತರೆಡ್ಡಿ ಮುನ್ನಡೆಯಲಿದ್ದಾರೆ.
ಇನ್ನು ಕೆ.ಸಿ.ಆರ್ ಸಂಪುಟ ಸಚಿವರಾದ ಕೆ.ಟಿ.ರಾಮರಾವ್, ಎರಬೆಲ್ಲಿ, ಇಂದ್ರಕಿರಣ್ ರೆಡ್ಡಿ, ಕೊಪ್ಪುಲ ಈಶ್ವರ, ಪುವ್ವಾಡ ಅಜಯ್, ನಿರಂಜನ್ ರೆಡ್ಡಿ, ಪ್ರಶಾಂತ್ ರೆಡ್ಡಿ ಕೂಡ ತೀವ್ರ ಹಿನ್ನಡೆ ಅನುಭವಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ