Kannada NewsLatest

ಗಂಜಿ ಕೇಂದ್ರಗಳಲ್ಲಿ ನಿರಾಶ್ರಿತರಿಗೆ ಸೌಲಭ್ಯಗಳಿಲ್ಲ !

ಗಂಜಿ ಕೇಂದ್ರಗಳಲ್ಲಿ ನಿರಾಶ್ರಿತರಿಗೆ ಸೌಲಭ್ಯಗಳಿಲ್ಲ !

ಪ್ರಗತಿವಾಹಿನಿ – ಅಥಣಿ : ಕೃಷ್ಣಾ ನದಿಯ ನೆರೆ ಸಂತ್ರಸ್ತರಿಗೆ ಎಲ್ಲಡೆ ತಾಲೂಕಿನಾದ್ಯಂತ 16 ಗಂಜಿ ಕೇಂದ್ರಗಳನ್ನು ನಿರ್ಮಿಸಿದರೂ ಅವುಗಳನ್ನ ನಿರ್ವಹಿಸುವಲ್ಲಿ ತಾಲೂಕಾಡಳಿತಕ್ಕೆ ಹಿನ್ನಡೆಯಾಗುತ್ತಿದೆ.

ಅಥಣಿ ತಾಲೂಕಿನಲ್ಲಿ ಪ್ರವಾಹ ಪೀಡಿತ ಜನರಿಗಾಗಿ ಹಾಗೂ ಜಾನುವಾರುಗಳಿಗಾಗಿ ತಾಲೂಕಿನಾದ್ಯಂತ ನಾಗನೂರ , ರಡ್ಡೇರಟ್ಟಿ ,ದೊಡವಾಡ , ಸತ್ತಿ ತೀರ್ಥ, ಹುಲಗಬಾಳಿ, ನದಿ ಇಂಗಳಗಾವ ಹಾಗೂ ಇನ್ನಿತರ ಗ್ರಾಮಗಳಿಗೊಂದರಂತೆ ಅಲ್ಲಿನ ನಿರಾಶ್ರಿತರಿಗೆ ಅನುಗುಣವಾಗಿ ತಾಲೂಕಾಡಳಿತ ವತಿಯಿಂದ ಗಂಜಿ ಕೇಂದ್ರಗಳನ್ನು ನಿರ್ಮಿಸಿದ್ದಾರೆ.

ಆದರೆ ಅವುಗಳು ಈಗಾಗಲೇ ಮಳೆಯಿಂದ ಸೋರುತ್ತಿದ್ದು ಒಳಗಡೆ ಮಳೆಯ ನೀರು ಬಂದು ಅವರ ಹತ್ತಿರವಿರುವ ವಸ್ತುಗಳೂ ಸಹ ಹೊಚ್ಚಿ ತಾವು ಆ ಕಡೆ ಈ ಕಡೆ ಯಾವ ಕಡೆ ?? ಎಂದು ಆಸರೆಯನ್ನ ಹುಡುಕುತ್ತಾ ಹೋಗುವಂತಹ ಸನ್ನಿವೇಶ ಎದುರಾಗಿದೆ.

ವಿಶೇಷವೆಂದರೆ ಕಳೆದ 2005 ರಲ್ಲಿ ಇದೇ ರೀತಿಯಾಗಿ ಮಹಾಪೂರ ಬಂದಾಗ ಆಗ ನೇರೆ ಸಂತ್ರಸ್ತರಿಗೆಂದು 2005 ರಲ್ಲಿ ಆಯಾ ಗ್ರಾಮಗಳಿಗೆಂದು ಘೋಷಿಸಲಾದ ಪುನರ್ವಸತಿ ಕೇಂದ್ರಗಳೆ ಇವತ್ತಿನ ಗಂಜಿಕೇಂದ್ರಗಳಾಗಿದ್ದು ವಿಶೇಷವಾಗಿದೆ ,ಅಲ್ಲಿ ಈಗಾಗಲೆ ಮೊದಲೇ ನಿರ್ಮಿಸಲಾದ ಕಟ್ಟಡಗಳಲ್ಲಿ ಅವರಿಗೆ ಗಂಜಿ ಕೇಂದ್ರಗಳನ್ನ ನಿರ್ಮಿಸಲಾಗಿದ್ದು ಅಲ್ಲಿ ಇದುವರೆಗೂ ಒಂದೂ ಸಮರ್ಪಕವಾದಂತಹ ಸೌಲಭ್ಯವನ್ನು ಹೊಂದದಿರುವುದು ನಿರಾಶ್ರಿತರ ದುರಂತವಾಗಿದೆ. ಅದು ಅಲ್ಲದೆ ಇದುವರೆಗು ಅಲ್ಲಿ ಯಾವುದೇ ಒಂದು ಕಛೇರಿಯಾಗಲಿ , ಗ್ರಾಮಗಳಾಗಿ ಸ್ಥಳಾಂತರವಾಗಿಲ್ಲಾ ಆದರೂ ಸಹ ಕಟ್ಟಿದ ಕಟ್ಟಡಗಳಂತೂ ಸೋರುತ್ತಿರುವುದು ವಿರ್ಪಯಾಸವೇ ಸರಿ .

ಅಲ್ಲದೆ ತಾಲೂಕಿನ ರಡ್ಡೆರಹಟ್ಟಿ ಗ್ರಾಮದ ಬಳಿ ನಿರ್ಮಿಸಲಾದ ಗಂಜಿ ಕೇಂದ್ರಗಳಲ್ಲಿ ನಿರಾಶ್ರಿತರು ಹೇಳುವ ಪ್ರಕಾರ ಊಟಕ್ಕೆ ಸರಿಯಾಗಿ ನೀಡುತ್ತಿಲ್ಲಾ , ಬೆಳಿಗ್ಗೆ ಅಲ್ಪೋಪಹಾರ ನೀಡಿ ಹೋದ ಅಧಿಕಾರಿಗಳು ಬಹಳ ಸಮಯವಾದರೂ ಸಹ ಅಲ್ಲಿ ಬಂರುವುದಿಲ್ಲ ಇದರಿಂದಾಗಿ ನಮಗೆ ಹಸಿವಾಗುತ್ತಿದೆ. ಹಸಿವಾದರೆ ಬೇಕಾದಂತಹ ಊಟ ಎಲ್ಲಿ ಅಂತಾ ಹುಡುಕುವುದು ಎಂದು ತಿಳಿಯುತ್ತಿಲ್ಲವೆಂದು ನಾಗನೂರ ಗ್ರಾಮದ ನೆರೆಸಂತ್ರಸ್ತರ ಆರೋಪಾಗಿದೆ.ಗಂಜಿ ಕೇಂದ್ರಗಳಲ್ಲಿ ನಿರಾಶ್ರಿತರಿಗೆ ಸೌಲಭ್ಯಗಳಿಲ್ಲ !ಮತ್ತೆ ತಾಲೂಕಿನ ಸತ್ತಿ ಗ್ರಾಮದ ಬಳಿ ಇರುವ ಗಂಜಿ ಕೇಂದ್ರದಲ್ಲಿ ನೂರಾರು ಜಾನುವಾರುಗಳನ್ನು ಊರಿನ ಪ್ರಮುಖ ರಸ್ತೆ ಮಧ್ಯೇಯೇ ಕಟ್ಟಿದ್ದಾರೆ ಆದರೆ ಅವುಗಳಿಗೆ ಎರಡು ದಿನದಿಂದ ಮೇವು ನೀಡಿಲ್ಲಾ. ಕೇಳಿದರೆ ಮೇವು ತರಲು ಹೋಗಿದ್ದಾರೆ ಅವರು ಶೀಘ್ರ ಬರುತ್ತಾರೆ ಎಂದು ಎರಡು ದಿನದಿಂದು ಅದನ್ನೆ ಹೇಳುತ್ತಿದ್ದಾರೆ , ಮನೆಗಳನ್ನ ಇದ್ದಕ್ಕಿದ್ದ ಹಾಗೆ ಬಿಟ್ಟು ಬಂದವರೂ ಎಲ್ಲಿಂದ ಮೇವುಗಳನ್ನ ತರಬೇಕೆಂದು ಹಾಗೂ ಮೇವು ತರಲು ಅವರ ಬಳಿ ದುಡ್ಡು ಎಲ್ಲಿಂದ ಬರಬೇಕು? ಎಂದು ಸ್ಥಳೀಯ ನಿರಾಶ್ರಿತರ ವಾದವಾಗಿದೆ.

ನೆರೆ ಸಂತ್ರಸ್ತರಿಗೆಂದು ನಿರ್ಮಿಸಲಾದ ಗಂಜಿ ಕೇಂದ್ರಗಳಲ್ಲಿ ಅವರಗೆಂದು ಯಾವುದೇ ಹಾಸಿಗೆ ಹೊದಿಕೆ ಕೊಟ್ಟಿಲ್ಲಾ ಸೋರುತ್ತಿರುವ ಕಟ್ಟಡಗಳಲ್ಲಿ ಮಳೆ ನೀರಿನ ಮದ್ಯೆ ತಂಪು ನೆಲದ ಮೆಲೆ ನೆರೆಸಂತ್ರಸ್ತರು ಮಲಗಬೇಕಾದ ಪರಿಸ್ಥಿತಿ ಎದುರಾಗಿದೆ , ಅಂಗನವಾಡಿ ಕಾರ್ಯಕರ್ತನ್ನ ಬಿಟ್ಟು ಯಾವುದೇ ಇತರ ಸಿಬ್ಬಂದಿಗಳಿ ಇಲ್ಲಿ ಇರುವುದಿಲ್ಲಾ , ನಮ್ಮ ಕುಂದುಕೊರತೆ ಯಾರ ಮುಂದೆ ಹೇಳಬೇಕೆಂದು ಅಳಲು ತೋಡಿಕೊಂಡರು .

ನದಿಇಂಗಳಗಾವದಲ್ಲಿ ಈ ಮೊದಲು ನಿರ್ಮಿಸಲಾದ ಗಂಜಿ ಕೇಂದ್ರವನ್ನ ಬಂದು ಮಾಡಿ ಬೇರೆಡೆ ಸ್ಥಳಾಂತರಿಸಿದ್ದಾರೆ ಆದರೆ ನಿನ್ನೆ ಸ್ಥಳಾಂತರಿಸಲಾದ ಹೊಸ ಗಂಜಿ ಕೇಂದ್ರದಲ್ಲಿ ರೇಷನ ಸಿಕಿಲ್ಲವೆಂದು ಅಲ್ಲಿ ಅಡುಗೆಯನ್ನೆ ಮಾಡಿಲ್ಲಾ ನಿನ್ನ ಉಪವಾಸವೆ ಬೀಳುವ ಪರಿಸ್ಥಿತಿ ನೇರೆ ಸಂತ್ರಸ್ತರಿಗೆ ಎದುರಾಗಿದೆ ಎಂದು ಅವರ ಆರೋಪವಾಗಿದೆ.

ಅದಲ್ಲದೆ ಇನ್ನೂ ಕೆಲವು ಗಂಜಿ ಕೇಂದ್ರಗಳನ್ನು ನೋಡಿಕೊಳ್ಳಲು ಅಧಿಕಾರಿಗಳೆ ಇಲ್ಲ ಒಂದು ವೇಳೆ ಅವರು ಇದ್ದರೆ ಅವರಿಗೆ ಸುಮಾರು ಎರಡು ಮೂರು ಗಂಜಿ ಕೇಂದ್ರಗಳ ನಿರ್ವಹಣೆಯನ್ನು ಕೊಟ್ಟಿರುತ್ತಾರೆ ಹೀಗಾಗಿ ಅವರು ನಾವು ಬೇರೆ ಬೇರೆ ಗಂಜಿ ಕೇಂದ್ರದ ಉಸ್ತುವಾರಿಯಲ್ಲಿದ್ದೆವೆ ಎಂದು ಕರೆ ಮಾಡಿ ಕೇಳುವಂತಹ ಎಲ್ಲರಿಗೂ ಹಾರಿಕೆಯ ಉತ್ತರವನ್ನು ನೀಡುತ್ತಿದ್ದಾರೆ.

ಇದು ಹೀಗೆಯೇ ಮುಂದುವರೆದರೆ ಅಲ್ಲಿನ ನಿರಾಶ್ರಿತರಿಗೆ ಯಾವ ಸೌಲಭ್ಯವೂ ಕೂಡ ಸರಿಯಾಗಿ ದೊರೆಯುವುದಿಲ್ಲ ಶೀಘ್ರವೇ ಸಂಬಂಧ ಪಟ್ಟ ತಾಲೂಕಾಡಳಿತ ಇದನ್ನು ಗಂಭೀರವಾಗಿ ಪರಿಗಣಿಸಿ ಅವರಿಗೆ ಸಮರ್ಪಕ ಸೌಲಭ್ಯ ನೀಡಬೇಕೆಂದು ನಿರಾಶ್ರಿತರ ಬೇಡಿಕೆಯಾಗಿದೆ.////

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button