Belagavi NewsBelgaum NewsKannada NewsKarnataka NewsLatestPolitics

*ಬೆಳಗಾವಿ ಜಿಲ್ಲೆಗೆ 28,421 ನ್ಯಾಚುರಲ್ ಗ್ಯಾಸ್ ಸಂಪರ್ಕ; ಸಂಸದ ಈರಣ್ಣ ಕಡಾಡಿ ಮಾಹಿತಿ*

ಪ್ರಗತಿವಾಹಿನಿ ಸುದ್ದಿ; ಮೂಡಲಗಿ: ಬೆಳಗಾವಿ ಜಿಲ್ಲೆಯಲ್ಲಿ ೩೧.೧೦.೨೦೨೩ ರಂತೆ ಪೈಪ್‌ಲೈನ್‌ಗಳ ಮೂಲಕ ೨೮,೪೨೧ (ಪಿಎನ್‌ಜಿ) ನ್ಯಾಚುರಲ್ ಗ್ಯಾಸ್ (ದೇಶೀಯ) ಸಂಪರ್ಕವನ್ನು ಒದಗಿಸಲಾಗಿದೆ ಮತ್ತು ೨೦೩೨ರ ಹೊತ್ತಿಗೆ ೪೯೧೯೩ ಪ್ರಸ್ತಾವಿತ ಸಂಪರ್ಕ ಒದಗಿಸುವ ಗುರಿ ಹೊಂದಲಾಗಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಸಚಿವಾಲಯದ ರಾಜ್ಯ ಸಚಿವ ರಾಮೇಶ್ವರ ತೇಲಿ ಅವರು ಲಿಖಿತ ಉತ್ತರದಲ್ಲಿ ಮಾಹಿತಿ ನೀಡಿದ್ದಾರೆಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.

ನವದೆಹಲಿಯಲ್ಲಿ ನಡೆಯುತ್ತಿರುವ ರಾಜ್ಯಸಭೆಯ ಸಂಸತ್ತಿನ ಚಳಿಗಾಲ ಅಧಿವೇಶನದಲ್ಲಿ ಪೈಪ್‌ಲೈನ್‌ಗಳ ಮೂಲಕ ನೈಸರ್ಗಿಕ ಅನಿಲ ಪೂರೈಕೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು ಕೊಳವೆ ಮಾರ್ಗಗಳ ಪೈಪಲೈನ್ ಮೂಲಕ ನೈಸರ್ಗಿಕ ಅನಿಲ ಪೂರೈಕೆ ಮಾಡುವದು ನಗರ ಭಾಗದ ಅಭಿವೃದ್ಧಿಗೆ ಪೂರಕವಾದ ಭಾಗವಾಗಿದೆ. ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ನಿಯಂತ್ರಣದAತಹ ಇತರೆ ಮಂಡಳಿಗಳು ಸಹ ಇದೇ ವಿಧಾನಗಳನ್ನು ಅನುಸರಿಸುತ್ತಿವೆ.

೧೧ಡಿ ಸುತ್ತಿನ ಹರಾಜು ಪ್ರಕ್ರಿಯೆಯನ್ನು ಪೂರ್ಣಗೊಂಡ ಬಳಿಕ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ನಿಯಂತ್ರಣ ಮಂಡಳಿ ಸುಮಾರು ೯೮% ಜನಸಂಖ್ಯೆಯನ್ನು ಒಳಗೊಂಡಿರುವ ೩೦೦ ಭೌಗೋಳಿಕ ಪ್ರದೇಶಗಳಲ್ಲಿ ಈ ಪೈಪಲೈನ್ ಅನಿಲ ಪೂರೈಕೆಯನ್ನು ಹಂಚಿಕೆ ಮಾಡಿದೆ ಮತ್ತು ಸಿಟಿ ಗ್ಯಾಸ್ ಡಿಸ್ಟಿçಬ್ಯೂಷನ್ ನೆಟ್‌ವರ್ಕ್ನ ಅಭಿವೃದ್ಧಿಗಾಗಿ ಕರ್ನಾಟಕ ಸೇರಿದಂತೆ ದೇಶಾದ್ಯಂತ ಒಟ್ಟು ೬೩೦ ಜಿಲ್ಲೆಗಳ ೮೮% ಭೌಗೋಳಿಕ ಭಾಗದಲ್ಲಿ ಪೈಪಲೈನ್ ಹಂಚಿಕೆ ಮಾಡಲಾಗಿದೆ. ಕರ್ನಾಟಕ ರಾಜ್ಯದಲ್ಲಿ ಪೈಪ್‌ಲೈನ್‌ಗಳ ಮೂಲಕ ೪೧೫೦೩೪ (ಪಿಎನ್‌ಜಿ) ನ್ಯಾಚುರಲ್ ಗ್ಯಾಸ್ (ದೇಶೀಯ) ಸಂಪರ್ಕವನ್ನು ಒದಗಿಸಲಾಗಿದೆ ಮತ್ತು ೨೦೩೨ರ ಹೊತ್ತಿಗೆ ೯೨೩೯೫೨೯ ಪ್ರಸ್ತಾವಿತ ಸಂಪರ್ಕ ಒದಗಿಸುವ ಗುರಿ ಹೊಂದಲಾಗಿದೆ ಎಂದು ಸಚಿವರು ಉತ್ತರಿಸಿದ್ದಾರೆಂದು ಸಂಸದ ಈರಣ್ಣ ಕಡಾಡಿ ಮಾಹಿತಿ ನೀಡಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button