*ಆತ್ಮಾವಲೋಕನಕ್ಕೆ ಭಗವದ್ಗೀತೆಗಿಂತ ಕನ್ನಡಿ ಬೇರೊಂದಿಲ್ಲ: ಸೂರ್ಯನಾರಾಯಣ ಭಟ್*
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಭಗವದ್ಗೀತೆ ಅನುಷ್ಠಾನ ಮಾಡುವಂತದ್ದು, ಕೇವಲ ಭೋಧಿಸುವುದಲ್ಲ. ಆತ್ಮಾವಲೋಕನಕ್ಕೆ ಗೀತೆಗಿಂತ ಕನ್ನಡಿ ಬೇರೊಂದಿಲ್ಲ ಎಂದು ವಿದ್ವಾನ್ ಸೂರ್ಯನಾರಾಯಣ ಭಟ್ ಹೇಳಿದ್ದಾರೆ.
ಬೆಳಗಾವಿಯ ಗೀತಗಂಗಾ ಕಟ್ಟಡದಲ್ಲಿ ಶುಕ್ರವಾರ ಗೀತಾ ಜಯಂತಿ ಹಿನ್ನೆಲೆಯಯಲ್ಲಿ ಸಂಘಟಿಸಲಾಗಿದ್ದ ಸಮಗ್ರ ಗೀತಾ ಪಠಣ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಪ್ರತಿಯೊಬ್ಬರೂ ಆತ್ಮಾವಲೋಕನ ಮಾಡಿಕೊಳ್ಳಬೇಕು. ನಾವು ಇರುವ ಗುಣದಿಂದ ಸತ್ವಗುಣಕ್ಕೆ ಏರಬೇಕು. ಆ ದಿಸೆಯಲ್ಲಿ ನಿರಂತರ ಪ್ರಯತ್ನ ಬೇಕು ಎಂದು ಅವರು ಹೇಳಿದರು.
ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ವತಿಯಿಂದ ಭಗವದ್ಗೀತೆ ಅಭಿಯಾನದ ಅಂಗವಾಗಿ ಬೆಳಗಾವಿಯ ಚಿದಂಬರ ನಗರ ಮತ್ತು ಗೀತಗಂಗಾ ಕಟ್ಟಡದಲ್ಲಿ ಶುಕ್ರವಾರ ಸಮಗ್ರ ಗೀತಾ ಪಠಣ ಆಯೋಜಿಸಲಾಗಿತ್ತು. 300ಕ್ಕೂ ಹೆಚ್ಚು ಮಹಿಳೆಯರು 4 ಗಂಟೆಗಳ ಕಾಲ ಸತತವಾಗಿ ಗೀತಾ ಪಠಣ ಮಾಡಿದರು.
ವಿದ್ವಾನ್ ಅರುಣ ಹೆಗಡೆ, ಖ್ಯಾತ ಗಾಯಕಿ ರಾಧಾ ದೇಸಾಯಿ, ಭಗವದ್ಗೀತೆ ಅಭಿಯಾನ ಸಮಿತಿ ಕಾರ್ಯಾಧ್ಯಕ್ಷ ಪರಮೇಶ್ವರ ಹೆಗಡೆ ಮೊದಲಾದವರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ