Kannada NewsKarnataka NewsLatest

*ಒಂದೇ ಬಾರಿಗೆ KSDLನ 21 ನೂತನ ಉತ್ಪನ್ನಗಳ ಬಿಡುಗಡೆ ಮಾಡಿದ ಸಿಎಂ ಸಿದ್ದರಾಮಯ್ಯ*

ಪ್ರಗತಿವಾಹಿನಿ ಸುದ್ದಿ: ಕರ್ನಾಟಕ ಮತ್ತು ಮಾರ್ಜಕ ನಿಯಮಿತ (KSDL)ದ 21 ನೂತನ ವೈವಿದ್ಯಮಯ ಉತ್ಪನ್ನಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆಗೊಳಿಸಿದರು.

ಕೆ.ಎಸ್.ಡಿ.ಎಲ್ ಇಂದು ಸಾಬೂನು, ಡಿಟರ್ಜೆಂಟ್ಸ್, ಸೌಂದರ್ಯವರ್ಧಕಗಳು, ಅಗರಬತ್ತಿ, ಧೂಪ ಸೇರಿದಂತೆ ಒಟ್ಟು 50 ಬಗೆಯ ಉತ್ಪನ್ನಗಳನ್ನು ತಯಾರಿಸುತ್ತಿದೆ. ಇದಕ್ಕೆ ಇಂದು ಹೊಸದಾಗಿ 21 ಉತ್ಪನ್ನಗಳು ಸೇರ್ಪಡೆಯಾಗುತ್ತಿದ್ದು, ಇವುಗಳನ್ನು ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು ಬಿಡುಗಡೆ ಮಾಡಿದರು.

ಕೈಗಾರಿಕಾ ಸಚಿವರಾದ ಎಂ.ಬಿ.ಪಾಟೀಲ್, KSDL ನ ವ್ಯವಸ್ಥಾಪಕ ನಿರ್ದೇಶಕರಾದ ಡಾ.ಪ್ರಶಾಂತ್, KSDL ಕನ್ಸಲ್ಟಂಟ್ ರಜನೀಕಾಂತ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

  • ಇಂದು ಬಿಡುಗಡೆಯಾಗಿರುವ ಹೊಸ ಉತ್ಪನ್ನಗಳು:

ಪ್ರೀಮಿಯಂ ಶ್ರೇಣಿಯ 10 ಬಗೆಯ ಸಾಬೂನು, 3 ತರಹದ ಶವರ್ ಜೆಲ್, 6 ಬಗೆಯ ಸೋಪ್ ಕಿಟ್ ಮತ್ತು ಒಂದು ಬಗೆಯ ಹ್ಯಾಂಡ್ ವಾಶ್.

*ಇವುಗಳ ಮಾರಾಟದ ಮೂಲಕ ಸಂಸ್ಥೆಯು ಇನ್ನೂ 1,000 ಕೋಟಿ ರೂ. ಮೌಲ್ಯದ ಹೆಚ್ಚಿನ ವಹಿವಾಟನ್ನು ನಿರೀಕ್ಷಿಸುತ್ತಿದೆ.

*ಇದಕ್ಕೆ ಪೂರಕವಾಗಿ ಸಂಸ್ಥೆಯು ಅಖಿಲ ಭಾರತ ಮಟ್ಟದ ಮಾರುಕಟ್ಟೆಯನ್ನು ಹೊಂದಲು ಮತ್ತು ವಿದೇಶಗಳಲ್ಲೂ ಸಂಸ್ಥೆಯ ಉತ್ಪನ್ನಗಳು ಸಿಗುವಂತೆ ಮಾಡಲು ರಚನಾತ್ಮಕ ಕ್ರಮಗಳನ್ನು ಸರಕಾರ ಕೈಗೊಂಡಿದೆ.

ಇಂದು ಬಿಡುಗಡೆಯಾಗಿರುವ ಹೊಸ ತರಹದ ಪ್ರೀಮಿಯಂ ಸಾಬೂನುಗಳಲ್ಲಿ…

*Mysore Sandal Wave Termaric,
*Wave Lime,
*Wave Deo,
*Milk Saffron,
*Almond Soap,

*Neem Soap,
*Aloe Soap,
*Jasmine Cream,
*Shikakayi Soap ಇಷ್ಟೂ ಇವೆ. ಜೊತೆಗೆ ಸ್ನಾನಕ್ಕೆ ಬಳಸುವ ಶವರ್-ಜೆಲ್ ಗಳಲ್ಲಿ

*Mysore Sandal Shower Gel, *Gold Shower Gel & *Millenium Shower Gel ಇವೆ.

ಇವೆಲ್ಲವೂ ಇಂದಿನ ಬಗೆಬಗೆಯ ಗ್ರಾಹಕರ ಅಭಿರುಚಿಗಳನ್ನು ಗಮನದಲ್ಲಿ ಇಟ್ಟುಕೊಂಡು ಹೊರತಂದಿರುವ ಉತ್ಪನ್ನಗಳೇ ಆಗಿವೆ.

  • ಕೆಎಸ್ಡಿಎಲ್ ಸಂಸ್ಥೆಯ ವಾರ್ಷಿಕ ವಹಿವಾಟು ಸದ್ಯಕ್ಕೆ 1,400 ಕೋಟಿ ರೂ.ಗಳ ಆಸುಪಾಸಿನಲ್ಲಿದೆ. ಇದನ್ನು ಮುಂದಿನ ಎರಡು ವರ್ಷಗಳಲ್ಲಿ 3,000 ಕೋಟಿ ರೂ.ಗಳ ಮಟ್ಟಕ್ಕೆ ಕೊಂಡೊಯ್ಯುವುದು ಗುರಿಯಾಗಿದೆ.

*ಈ ನಿಟ್ಟಿನಲ್ಲಿ, ಸಂಸ್ಥೆಯು ಶಿವಮೊಗ್ಗದಲ್ಲಿ ಹೊಂದಿರುವ ಘಟಕದ ಆವರಣದಲ್ಲಿ ಆಕ್ವಾ ಮಿನರಲ್ ವಾಟರ್ ಘಟಕವನ್ನು ಆರಂಭಿಸುವ ತಯಾರಿ ನಡೆಯುತ್ತಿದೆ.

*ಜೊತೆಗೆ Transparent Bathing Soap & Perfume Composition ತಯಾರಿಕೆಗೆ ಸಿದ್ಧತೆಗಳು ನಡೆಯುತ್ತಿವೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button