Kannada NewsNationalPolitics

*ಭಾರತದ ಆತ್ಮದ ಪ್ರತಿ ಕಣ ಕಣದಲ್ಲಿಯೂ ಶ್ರೀರಾಮನಿದ್ದಾನೆ; ಇಂದಿನಿಂದ ದೇಶದಲ್ಲಿ ಹೊಸ ಇತಿಹಾಸ ಉದಯವಾಗಲಿದೆ; ಪ್ರಧಾನಿ ಮೋದಿ*

ಪ್ರತಿ ಮನೆಯಲ್ಲಿಯೂ ರಾಮಜ್ಯೋತಿ ಬೆಳಗಲಿ

ಪ್ರಗತಿವಾಹಿನಿ ಸುದ್ದಿ: ಭಾರತದ ಆತ್ಮದ ಪ್ರತಿ ಕಣ ಕಣದಲ್ಲಿಯೂ ಶ್ರೀರಾಮನಿದ್ದಾನೆ. ರಾಮ ಮಂದಿರ ನಿರ್ಮಾಣ ಕೇವಲ ವಿಜಯವಲ್ಲ, ಅದು ವಿನಯದಿಂದ ಕೂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.

ಐತಿಹಾಸಿಕ ಅಯೋಧ್ಯೆ ರಾಮ ಮಂದಿರದಲ್ಲಿ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಬಳಿಕ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಯುಗದ ಜನರು ರಾಮನನ್ನು ಗೆಲ್ಲಿಸಿದ್ದಾರೆ. ಭಾರತದ ಪ್ರತಿ ಆತ್ಮದ ಕಣ ಕಣದಲ್ಲಿಯೂ ರಾಮನಿದ್ದಾನೆ ಎಂದರು.

Home add -Advt

ಶ್ರೀರಾಮ ವಿವಾದವಲ್ಲ… ಶ್ರೀರಾಮ ಶಕ್ತಿ. ಅದೊಂದು ಸಮಾಧಾನ. ಶ್ರೀರಾಮ ವರ್ತಮಾನ ಅಲ್ಲ… ಅನಂತಕಾಲ. ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಅಯೋಧ್ಯೆಯಲ್ಲಿ ಶ್ರೀರಾಮನ ಪ್ರತಿಷ್ಠಾಪನೆಯಾಗಿದೆ. ಶ್ರೀರಾಮ ಭಾರತದ ಚೇತನ ಮಾತ್ರವಲ್ಲ ಚಿಂತನೆ ಕೂಡ. ರಾಮ ವ್ಯಾಪಕ, ವಿಶ್ವ, ವಿಶ್ವಾತ್ಮ ಪ್ರಭಾವ. ಪ್ರವಾಹ. ಶ್ರೀರಾಮನ ಭವ್ಯ ಮಂದಿರ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ ಆಗಿದೆ. ಮುಂದೇನು? ಕಾಲಚಕ್ರ ಬದಲಾಗುತ್ತಿದೆ. ಮುಂದಿನ ಪೀಳಿಗೆ ನಮ್ಮ ಕಾಲವನ್ನು ಸಾವಿರಾರು ವರ್ಷಗಳ ಕಾಲ ನೆನಪಿನಲ್ಲಿಡುತ್ತದೆ ಎಂದು ಹೇಳಿದರು.

ಶ್ರೀರಾಮನಿಂದ ರಾಷ್ಟ್ರದ ಚೇತನ ವಿಸ್ತಾರವಾಗಬೇಕಿದೆ. ಭವ್ಯ ಭಾರತದ ಆಧಾರ ಪ್ರಭು ಶ್ರೀರಾಮನಾಗಿರುತ್ತಾನೆ. ಪ್ರಭು ಶ್ರೀರಾಮನ ಅಸ್ತಿತ್ವಕ್ಕಾಗಿ ನಮ್ಮ ದೇಶದಲ್ಲಿ ಕಾನೂನು ಸಂಘರ್ಷ ಕೂಡ ನಡೆದಿದೆ. ಭಾರತದ ನ್ಯಾಯದೇವತೆ ಆದೇಶದಂತೆ ನ್ಯಾಯಬದ್ಧವಾಗಿ ಮಂದಿರ ನಿರ್ಮಾಣವಾಗಿದೆ ಇಂದು ಇಡೀ ದೇಶದ ಪ್ರತಿ ಮನೆಯಲ್ಲಿಯೂ ರಾಮ ಜ್ಯೋತಿ ಬೆಳಗಲಿದೆ. ಇಂದಿನಿಂದ ದೇಶದಲ್ಲಿ ಹೊಸ ಇತಿಹಾಸ ಉದಯವಾಗಲಿದೆ ಎಂದು ತಿಳಿಸಿದರು.

Related Articles

Back to top button