ಕಂಗಾಲಾದ ಪಾಕ್ ಜನರು, ರೂ.300 ಕ್ಕೆ ಏರಿದ ಟೊಮ್ಯಾಟೊ ಬೆಲೆ
ಪ್ರಗತಿವಾಹಿನಿ ಸುದ್ದಿ : ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆದಂತೆ, ಈಗಿನ ಪಾಕಿಸ್ತಾನದ ಜನರ ಜೀವನ ದುಬಾರಿಯಾಗಿದೆ, ಚಿಕ್ಕ ಪುಟ್ಟ ಕೈಗೆಟುಕುವ ದಿನನಿತ್ಯದ ಬಳಕೆಯ ವಸ್ತುಗಳು ಗಗನ ಮುಟ್ಟಿವೆ, ಆದರೆ ಇದಕ್ಕೆಲ್ಲಾ ಕಾರಣ ಅವರೇ….. 370 ನೇ ವಿಧಿಯನ್ನು ರದ್ದುಪಡಿಸಿದ ಬಗ್ಗೆ ಆಕ್ರೋಶಗೊಂಡ ಪಾಕಿಸ್ತಾನ ಸರ್ಕಾರ, ಕಾಶ್ಮೀರಿಗಳ ಒಗ್ಗಟ್ಟಿನ ಹೆಸರಿನಲ್ಲಿ ಭಾರತದೊಂದಿಗಿನ ವ್ಯಾಪಾರ ಸಂಬಂಧವನ್ನು ಕಡಿತಗೊಳಿಸಿದೆ.
ಇದರ ಪರಿಣಾಮವಾಗಿ ಭಾರತದಿಂದ 130 ಕೋಟಿಗೂ ಹೆಚ್ಚು ಮಾರುಕಟ್ಟೆಗೆ ರಫ್ತು ಮಾಡಿಕೊಳ್ಳುವ ಅವಕಾಶವನ್ನು ಕಳೆದುಕೊಂಡಿದೆ. ಭಾರತದಿಂದ ಆಗುತ್ತಿದ್ದ ರಫ್ತು, ಆಮದು ವ್ಯವಹಾರ ನಿಲ್ಲಿಸಲಾಗಿದೆ. ಆದ್ದರಿಂದ ಪಾಕಿಸ್ತಾನದ ಸಾಮಾನ್ಯ ಜನರು ದುಬಾರಿ ಬೆಲೆಗಳೊಂದಿಗೆ ಕಂಗಾಲಾಗಿದ್ದಾರೆ. ಟೊಮ್ಯಾಟೊ ಬೆಲೆ ಕೇವಲ 10 ರೂ. ಇದ್ದದ್ದು 300 ರೂ. ಗೆ ಏರಿದೆ.
ಪಾಕ್ ಅಫ್ಘಾನಿಸ್ತಾನದಿಂದ ಟೊಮೆಟೊವನ್ನು ಆಮದು ಮಾಡಿಕೊಳ್ಳುತ್ತದೆ, ಆದರೆ ಅವು ಸಾಕಷ್ಟು ಉತ್ತಮವಾಗಿಲ್ಲ, ಮತ್ತು ಸಾಕಾಗುತ್ತಿಲ್ಲ.. ಆಲೂಗಡ್ಡೆ 10 ರೂ.ನಿಂದ 30 ರೂ.ಗೆ ಏರಿದೆ. ಪಾಕಿಸ್ತಾನವು ಈರುಳ್ಳಿ, ಸಕ್ಕರೆ, ಕಾಫಿ, ಚಹಾ, ಸಿರಿಧಾನ್ಯಗಳು, ಸೋಯಾಬೀನ್, ಚಪ್ಪಲಿ, ಸಾವಯವ ರಾಸಾಯನಿಕಗಳು, ಪರಮಾಣು ರಿಯಾಕ್ಟರ್, ಬಾಯ್ಲರ್, ಪ್ಲಾಸ್ಟಿಕ್ ಉತ್ಪನ್ನಗಳು, ಕಬ್ಬಿಣ, ಉಕ್ಕು, ತಾಮ್ರ ಇತ್ಯಾದಿಗಳನ್ನು ಭಾರತದಿಂದ ಹೆಚ್ಚು ಆಮದು ಮಾಡಿಕೊಳ್ಳುತ್ತಿತ್ತು. ವಾಣಿಜ್ಯ ವ್ಯವಹಾರ ಸಂಬಂಧವನ್ನು ಈಗ ರದ್ದು ಪಡಿಸಿರುವುದರಿಂದ ಈ ಬೆಲೆಗಳು ಏರಿಕೆಯಾಗಲಿವೆ.
ಭಾರತವು ಹತ್ತಿ, ತಾಜಾ ಹಣ್ಣು, ಸಿಮೆಂಟ್, ಪೆಟ್ರೋಲಿಯಂ ಉತ್ಪನ್ನಗಳು ಮತ್ತು ಖನಿಜಗಳನ್ನು ಪಾಕಿಸ್ತಾನದಿಂದ ಆಮದು ಮಾಡಿಕೊಳ್ಳುತ್ತದೆ. ಕಳೆದ ವರ್ಷ ಭಾರತ ಸುಮಾರು 14,000 ಕೋಟಿ ರೂ. ವಹಿವಾಟು ನಡೆಸಿದ್ದರೆ, ಈ ಬಾರಿ ಪಾಕಿಸ್ತಾನದಿಂದ ಕೇವಲ 3500 ಕೋಟಿ ಉತ್ಪನ್ನಗಳನ್ನು ಆಮದು ಮಾಡಿಕೊಂಡಿದೆ. ಪುಲ್ವಾಮಾ ದಾಳಿಯ ನಂತರ ಭಾರತ ಪಾಕಿಸ್ತಾನದ ಆದ್ಯತೆಯ ಸ್ಥಾನಮಾನವನ್ನು ರದ್ದುಗೊಳಿಸಿದೆ. ಎಲ್ಲಾ ಸರಕುಗಳ ಆಮದಿನ ಮೇಲೆ ಶೇ 200 ರಷ್ಟು ಕಸ್ಟಮ್ಸ್ ವಿಧಿಸುತ್ತದೆ. /////
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ