Kannada NewsKarnataka NewsLatest

*CMPFO ಕೇಂದ್ರೀಕೃತ ಪೋರ್ಟಲ್ ಗೆ ಸಚಿವ ಪ್ರಹ್ಲಾದ ಜೋಶಿ ಚಾಲನೆ*

ಪ್ರಗತಿವಾಹಿನಿ ಸುದ್ದಿ: CMPFO ಇಂಡಿಯಾ ಕೇಂದ್ರೀಕೃತ ಕ್ಲೈಮ್ ಪ್ರೊಸೆಸಿಂಗ್ ಮತ್ತು ಸೆಟ್ಲ್‌ಮೆಂಟ್ ಪೋರ್ಟಲ್ ಗೆ ಕೇಂದ್ರ ಸಂಸದೀಯ ಮತ್ತು ಕಲ್ಲಿದ್ದಲು ಸಚಿವ ಪ್ರಹ್ಲಾದ ಜೋಶಿ ಅವರು ವೀಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದ್ದಾರೆ.

CMPFO India ಕೇಂದ್ರೀಕೃತವಾದ ಈ ಪೋರ್ಟಲ್ ಉತ್ತಮ ದಾಖಲೆ ನಿರ್ವಹಣೆ ಜತೆಗೆ ಪಾರದರ್ಶಕತೆಯನ್ನು ಹೆಚ್ಚಿಸುತ್ತದೆ. ಅಲ್ಲದೇ, ಸಮಸ್ಯೆಗಳ ತ್ವರಿತ ವಿಲೇವಾರಿಗೆ ಅನುಕೂಲವಾಗುತ್ತದೆ ಎಂದು ಸಚಿವ ಜೋಶಿ ಅವರು ಟ್ವೀಟರ್ ನಲ್ಲಿ ತಿಳಿಯಪಡಿಸಿದ್ದಾರೆ.

cdac india ಅಭಿವೃದ್ಧಿ ಪಡಿಸಿದ ಈ ವೆಬ್ ಪೋರ್ಟಲ್ 3.5 ಲಕ್ಷ CMPF ಚಂದಾದಾರರ ಅಗತ್ಯಗಳನ್ನು ಪೂರೈಸುತ್ತದೆ ಮತ್ತು 6 ಲಕ್ಷಕ್ಕೂ ಹೆಚ್ಚು ಪಿಂಚಣಿದಾರರಿಗೆ ಪ್ರಯೋಜನಕಾರಿಯಗಲಿದೆ ಎಂದು ಸಚಿವರು ತಿಳಿಸಿದ್ದಾರೆ.

CRS ಯೋಜನೆ ಉದ್ಘಾಟನೆ:
ಜಾರ್ಖಂಡ್‌ನ 200 ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಗಳಲ್ಲಿ ಸ್ಮಾರ್ಟ್ ಕ್ಲಾಸ್‌ಗಳು ಮತ್ತು ಕಂಪ್ಯೂಟರ್ ಲ್ಯಾಬ್‌ಗಳನ್ನು ನಿರ್ಮಿಸಲು ಉದ್ದೇಶಿಸಿದ Coal India HQನ CSR ಯೋಜನೆಗಳನ್ನು ಸಹ ಜೋಶಿ ಉದ್ಘಾಟಿಸಿದ್ದಾಗಿ ಜೋಶಿ ಹೇಳಿದ್ದಾರೆ.

ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮದ ತಾಂತ್ರಿಕ ಸಹಭಾಗಿತ್ವದೊಂದಿಗೆ ಸಿಐಎಲ್ ನ ಪ್ರತಿ ಅಂಗಸಂಸ್ಥೆಯಲ್ಲಿ ಬಹು ಕೌಶಲ್ಯ ಅಭಿವೃದ್ಧಿ ಸಂಸ್ಥೆಗಳನ್ನು ಸ್ಥಾಪಿಸುತ್ತದೆ. ಇದರೊಂದಿಗೆ ಸಂಸ್ಥೆಯು 655 ನಿರುದ್ಯೋಗಿ ಅಭ್ಯರ್ಥಿಗಳಿಗೆ ಕೌಶಲ್ಯ ತರಬೇತಿಯನ್ನೂ ನೀಡಲಿದೆ ಎಂದು ತಿಳಿಸಿದ್ದಾರೆ.

ಕಂಪನಿಯ CSR ಯೋಜನೆಗಳ ಮೂಲಕ ಭಾರತದಾದ್ಯಂತ ಸಾವಿರಾರು ಕುಟುಂಬಗಳಿಗೆ ಕಲ್ಯಾಣ ಕ್ರಮಗಳನ್ನು ತೆಗೆದುಕೊಳ್ಳುವಲ್ಲಿ CIL ನಾಯಕತ್ವ ವಹಿಸಿದೆ ಎಂದು ಶ್ಲಾಘಿಸಿದ್ದಾರೆ ಸಚಿವ ಜೋಶಿ ಅವರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button