ಕಾಂಗ್ರೆಸ್ ಸರ್ಕಾರದ ವಿರುದ್ಧ ಪ್ರಹ್ಲಾದ ಜೋಶಿ ಕಿಡಿ
ಪ್ರಗತಿವಾಹಿನಿ ಸುದ್ದಿ: ಹಳೇ ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಆರೋಪಿಗಳನ್ನು ಕಾಂಗ್ರೆಸ್ ಪಕ್ಷ ಮತ್ತು ಸರ್ಕಾರ ಅಮಾಯಕರು ಎಂದಿದೆ. ಇದನ್ನು ತೀರ್ಮಾನಿಸಲು ನೀವ್ಯಾರು? ಎಂದು ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಪ್ರಶ್ನಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಇಂದು ಪತ್ರಕರ್ತರೊಂದಿಗೆ ಮಾತನಾಡುತ್ತ ಜಾಮೀನು ಪಡೆದು ಹೊರ ಬಂದ ಆರೋಪಿಗಳ ಪರ ಸಂಭ್ರಮಾಚರಣೆ ಕುರಿತು ಹೀಗೆ ಪ್ರತಿಕ್ರಿಯಿಸಿದರು.
ಗಲಭೆ ಪ್ರಕರಣದಲ್ಲಿ ನೂರಾರು ಆರೋಪಿಗಳ ಬಿಡುಗಡೆಗೆ ಕಾಂಗ್ರೆಸ್ ನವರು ಪತ್ರ ಬರೆಯುತ್ತಲೇ ಇದ್ರು. ಕೋರ್ಟ್ ಅಲ್ಲಿ ಜಾಮೀನು ಅರ್ಜಿ ವಿಚಾರಣೆಗೆ ಬಂದಾಗ ಕಾಂಗ್ರೆಸ್ ಸರ್ಕಾರ ಸರಿಯಾದ ವಾದ ಮಂಡಿಸಲಿಲ್ಲ. ಪರೋಕ್ಷವಾಗಿ ಆರೋಪಿಗಳ ಬಿಡುಗಡೆಗೆ ಸಹಕರಿಸಿದೆ ಎಂದು ಸಚಿವ ಜೋಶಿ ಆರೋಪಿಸಿದರು.
ಆಗಿದ್ದವರೂ ಪೊಲೀಸರಲ್ಲವೇ? ಗಲಭೆ ವೇಳೆ ಪೊಲೀಸ್ ಕಮಿಷನರ್ ಮೇಲೆಯೇ ಹಲ್ಲೆ ನಡೆಯಿತು. ಅನೇಕ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಮೇಲೆ ಹಲ್ಲೆ ನಡೆಯಿತು. ಪೊಲೀಸ್ ವಾಹನಗಳು ಜಖಂ ಗೊಂಡವು. ಇಷ್ಟೆಲ್ಲಾ ಆಗಿದ್ದರೂ ಏಕೆ ಸಮರ್ಪಕ ವಾದ ಮಂಡಿಸಲಿಲ್ಲ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಎಲ್ಲೋ ಒಬ್ಬಿಬ್ಬರು ಸಿಬಿಐ ಬಿಟ್ಟರೆ ಗಲಭೆ ನಡೆದಾಗ ಇದ್ದ ಪೊಲೀಸರೇ ಈಗಲೂ ಇದ್ದಾರೆ. ಆರೋಪಿಗಳಿಗೆ ಜಾಮೀನು ಕೊಡಿಸುವ ಮೂಲಕ ಈ ಸರ್ಕಾರ ಪೊಲೀಸರ ರಕ್ಷಣೆಯನ್ನೇ ಮರೆತಿದೆ. ಮತ್ತೊಮ್ಮೆ ಇಂಥ ಘಟನೆ ಮರುಕಳಿಸಿದಾಗ ಸರ್ಕಾರಕ್ಕೆ ಅರ್ಥವಾಗುತ್ತದೆ ಎಂದು ಎಚ್ಚರಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ