ಶುಧ್ದ ಕುಡಿಯುವ ನೀರಿನ ಘಟಕಗಳನ್ನು ಉದ್ಘಾಟಿಸಿದ ಶಾಸಕ ಅನಿಲ ಬೆನಕೆ :
ಪ್ರಗತಿವಾಹಿನಿ ಸುದ್ದಿ – ಬೆಳಗಾವಿ : ಶಾಸಕ ಅನಿಲ ಬೆನಕೆರವರು ರಾಮತೀರ್ಥ ನಗರದ ಬಸವೇಶ್ವರ ಬಡಾವಣೆ ಹಾಗೂ ಶಿವಾಲಯದಲ್ಲಿ ಶುಧ್ದ ಕುಡಿಯುವ ನೀರಿನ ಘಟಕಗಳನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು ರಾಮತೀರ್ಥ ನಗರದಲ್ಲಿ ನಗರಾಭಿವೃಧ್ದಿ ಪ್ರಾಧಿಕಾರದ ಅನುದಾನದಡಿಯಲ್ಲಿ ಇಲ್ಲಿನ ಸ್ಥಳೀಯರ ಬೇಡಿಕೆಗಣುಗುಣವಾಗಿ ಕುಡಿಯುವ ನೀರಿನ ಬವಣೆಯನ್ನು ತಪ್ಪಿಸುವ ಸಲುವಾಗಿ ಬಸವೇಶ್ವರ ಬಡಾವಣೆ ಹಾಗೂ ಶಿವಾಲಯದಲ್ಲಿ ಶುಧ್ದ ಕುಡಿಯುವ ನೀರಿನ ಘಟಕಕ್ಕೆ ಚಾಲನೆ ನೀಡಲಾಗಿದೆ ಅವುಗಳನ್ನು ಸಾರ್ವಜನಿಕರು ವ್ಯವಸ್ಥಿತವಾಗಿ ಸದುಪಯೋಗ ಪಡಿಸಿಕೊಳ್ಳಬೇಕೆಂದರು.
ರಾಮತೀರ್ಥ ನಗರದಲ್ಲಿ ನೀರು ಪೂರೈಕೆ ಮಾಡುತ್ತಿರುವ ಪಂಪಸೆಟ್ ಹಾಳಾಗಿರುವುದರಿಂದ ರಾಕಸಕೊಪ್ಪ ಜಲಾಶಯದಿಂದ ಬರುವ ನೀರನ್ನು ಈ ಪ್ರದೇಶಕ್ಕೆ 3 ದಿನಗಳವರೆಗೆ ಒದಗಿಸಲು ಪ್ರಯತ್ನಿಸಲಾಗುವುದು ಇಲ್ಲವಾದರೆ ಬಹಳ ಸಮಸ್ಯೆ ಕಂಡು ಬಂದಲ್ಲಿ ಟ್ಯಾಂಕರುಗಳ ಮೂಲಕ ಕುಡಿಯುವ ನೀರನ್ನು ಪೂರೈಕೆ ಮಾಡಲಾಗುವುದು ಇದರ ಸಲುವಾಗಿ ಇಂದು ಸಾಯಂಕಾಲ 4 ಗಂಟೆಗೆ ಮಹಾನಗರ ಪಾಲಿಕೆ ಅಧಿಕಾರಿಗಳ ಹಾಗೂ ಜಲ ಮಂಡಳಿ ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಿ ರಾಮತೀರ್ಥ ನಗರದ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಮತ್ತು ಅವಶ್ಯವಿದ್ದಲ್ಲಿ ಇನ್ನೂ 2 ಶುಧ್ದ ಕುಡಿಯುವ ನೀರಿನ ಘಟಕಗಳನ್ನು ಅಳವಡಿಸಿ ಸಮಸ್ಯೆಯನ್ನು ಬಗೆಹರಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಶಾಸಕರೊಂದಿಗೆ ಬುಡಾ ಅಭಿಯಂತರ ವಿ.ಎಸ್. ಹಿರೇಮಠ, ಈರಯ್ಯ ಖೋತ, ವಿಲಾಶ ಕೇರೂರ, ಆನಂದ ಕರಿಲಿಂಗನ್ನವರ, ಎಸ್.ಎಸ್. ಕಿವಡಸನ್ನವರ, ಕೋಲಕಾರ, ರಾಜು ಪಾಟೀಲ, ಸುರೇಶ ಯಾಧವ, ನಾಗೇಶ ತಡಸನ್ನವರ, ಬಸವರಾಜ ಜಿರ್ಲಿ ಹಾಗೂ ಇತರರು ಉಪಸ್ಥಿರಿದ್ದರು.
ಸಾಂಕ್ರಾಮಿಕ ರೋಗಗಳು ಹರಡದಂತೆ ಮುಂಜಾಗೃತ ಕ್ರಮವನ್ನು ತೆಗೆದುಕೊಂಡ ಶಾಸಕ ಅನಿಲ ಬೆನಕೆ:ಶಾಸಕ ಅನಿಲ ಬೆನಕೆರವರು ಬೆಳಗಾವಿಯ ಶಿವಾಜಿ ನಗರದಲ್ಲಿ ಸ್ವಾಮಿ ಪೌಂಡೇಶನ್ ಥಾಣೆ, ಮುಂಬೈ ಸಂಸ್ಥಾಪಕ ಅಧ್ಯಕ್ಷರಾದ ಮಹೇಶ ಕದಮ ಇವರ ಸಹಾಯದೊಂದಿಗೆ ಸಾಂಕ್ರಾಮಿಕ ರೋಗಗಳು ಹರಡದಂತೆ ಬ್ಲಿಚಿಂಗ್ ಪೌಡರ್ ಹರಡುವುದರೊಂದಿಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಅನಿಲ ಬೆನಕೆರವರು ನಗರದಲ್ಲಿ ಅತಿಯಾದ ಮಳೆಯಿಂದ ಅತಿವೃಷ್ಠಿ ಉಂಟಾಗಿ ಸಾಂಕ್ರಾಮಿಕ ರೋಗಗಳಾದ ಮಲೇರಿಯಾ, ಡೆಂಗ್ಯೂ ಹಾಗೂ ಚಿಕನ್ಗುನ್ಯಾ ರೋಗಗಳು ಹರಡುವ ಸಂಭವವಿರುವುದರಿಂದ ನಗರದ ಎಲ್ಲ ಸಾರ್ವಜನಿಕರು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಚವಾಗಿಟ್ಟುಕೊಂಡು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು.
ಹಾಗೂ ಮುನ್ನೆಚ್ಚರವಾಗಿ ಇಂದು ಸ್ವಾಮಿ ಪೌಂಡೇಶನ್ ಥಾಣೆಯ ಸಂಸ್ಥಾಪಕ ಅಧ್ಯಕ್ಷರೊಂದಿಗೆ ಶಿವಾಜಿ ನಗರದಲ್ಲಿ ಬ್ಲಿಚಿಂಗ ಪೌಡರನ್ನು ಹಾಕುವುದರೊಂದಿಗೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು. ನಗರದ ಎಲ್ಲ ಜನತೆಯು ತಮ್ಮ ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಬ್ಲಿಚಿಂಗ್ ಪೌಡರ ಹರಡಿ ಸಾಂಕ್ರಾಮಿಕ ರೋಗಗಳಿಂದ ದೂರವಿರಲು ವಿನಂತಿಸಿದರು.
ಈ ಸಂದರ್ಭದಲ್ಲಿ ಶಾಸಕರೊಂದಿಗೆ ಸ್ವಾಮಿ ಪೌಂಡೇಶನ್ ಥಾಣೆ, ಮುಂಬೈ ಸಂಸ್ಥಾಪಕ ಅಧ್ಯಕ್ಷರಾದ ಮೇಶ ಕದಮ, ಯೊಗೇಶ ಜಾಧವ, ನಿಖಿಲ ಮುರ್ಕುಟೆ, ಮಹೇಶ ಭಾಮಣೆ, ಪ್ರಶಾಂತ ದೇವನ, ತಾಜ ಶೇಖ ಹಾಗೂ ಇತರ ಸ್ಥಳೀಯರು ಉಪಸ್ಥಿತರಿದ್ದರು.///
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ