Belagavi NewsBelgaum NewsKannada NewsKarnataka News
ಮಹಿಳೆ ನಾಪತ್ತೆ

ಪ್ರಗತಿವಾಹಿನಿ ಸುದ್ದಿ : ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಹೊಸಯರಗುದ್ರಿ ಗ್ರಾಮದ ಸಂಗೀತಾ ಭರಮಣ್ಣಾ ನಾಯಕ ಎಂಬ ಮಹಿಳೆಯು ಏ.6 ರಂದು ತವರು ಮನೆಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವಳು ಕಾಣೆಯಾಗಿರುತ್ತಾಳೆ ಎಂದು ಪತಿ ಭರಮಣ್ಣಾ ರಂಗಣ್ಣ ನಾಯಕ ಅವರು ಕುಲಗೋಡ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮಹಿಳೆಯ ಚಹರೆ: ವಯಸ್ಸು ೨೪ ವರ್ಷ, ಎತ್ತರ ೪.೮, ಮೈ ಕಟ್ಟು ಸದೃಢ, ಮೈ ಬಣ್ಣ ಗೋದಿಗೆಂಪು, ಉದ್ದ ಮುಖ, ಕಪ್ಪು ಕೂದಲು, ನೀಲಿ ಕಲರ್ ಸೀರೆ ಧರಿಸಿರುತ್ತಾಳೆ.
ಮಹಿಳೆಯ ಕುರಿತು ಮಾಹಿತಿ ದೊರೆತಲ್ಲಿ ಕುಲಗೋಡ ಪೊಲೀಸ್ ಠಾಣೆಯ ದೂ. ೦೮೩೩-೪೨೨೨೩೩ ಸಂಖ್ಯೆಗೆ ಸಂಪರ್ಕಿಸಬೇಕು ಎಂದು ಕುಲಗೋಡ ಪೊಲೀಸ್ ಠಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




