Election NewsKannada NewsKarnataka NewsPolitics

ಮಂಡ್ಯದಲ್ಲಿ ರಾಹುಲ್‌ ಗಾಂಧಿ ಚುನಾವಣಾ ಕಹಳೆ: ನಿರುದ್ಯೋಗಿಗಳಿಗೆ ಉದ್ಯೋಗದ ಭರವಸೆ

ಪ್ರಗತಿವಾಹಿನಿ ಸುದ್ದಿ: ಬಡ ಕುಟುಂಬದ ಮಕ್ಕಳು ಪದವಿ ಮುಗಿಸಿದರು ಅವರಿಗೆ ಸೂಕ್ತ ಉದ್ಯೋಗ ಸಿಗುತ್ತಿಲ್ಲ. ಅದಕ್ಕಾಗಾಗಿ ಪದವಿ ಮುಗಿಸಿದವರಿಗೆ ಉದ್ಯೋಗ ನೀಡವ ಯೋಜನೆ ಜಾರಿಗೋಳಿಸಲಾಗುವುದು ಎಂದು ರಾಹುಲ್ ಗಾಂಧಿ ಅವರು ಭರವಸೆ ನೀಡಿದರು.‌

ಮಂಡ್ಯದ ವಿಶ್ವವಿದ್ಯಾಲಯದ ಮೈದಾನದಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕುಟುಂಬದ ಹಿರಿಯ ಮಹಿಳೆಗೆ ವರ್ಷಕ್ಕೆ ಒಂದು ಲಕ್ಷ ರೂಪಾಯಿ ಹಾಕಲು ಯೋಜಿಸಲಾಗಿದೆ. ಈ ಮೂಲಕ ಪ್ರತಿ ತಿಂಗಳು 8,500 ರೂಪಾಯಿ ಹಾಕಲಾಗುವುದು. ರಾಜ್ಯ ಸರ್ಕಾರದಿಂದ 2000 ಸಹ ಬರುತ್ತದೆ ಇದು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ‌ ಎಂದು ತಿಳಿಸಿದರು.

ನರೇಗಾ ಯೋಜನೆಯನ್ನು ನಗರ ಪ್ರದೇಶಕ್ಕೂ ವಿಸ್ತರಿಸಿ, ದಿನಕ್ಕೆ 400 ರೂ. ಕೂಲಿ ನೀಡಲಾಗುವುದು. ಖಾಸಗಿ ಸುದ್ದಿ ಸಂಸ್ಥೆಗೆ  ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಸಂದರ್ಶನದಲ್ಲಿ ಚುನಾವಣೆ ಬಾಂಡ್ ಕುರಿತು ಪ್ರಶ್ನೆ ಮಾಡಿದಾಗ, ಮೋದಿ ಅವರ ಕೈ ನಡುಗುತ್ತದೆ. ಇದನ್ನು ನೀವು ಆನ್ ಲೈನ್ ವಿಡಿಯೋದಲ್ಲಿಯೂ ನೋಡಬಹುದು ಎಂದರು. 

ಕರ್ನಾಟಕದಲ್ಲಿ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ 1 ಲಕ್ಷ ಮಹಿಳೆಯರಿಗೆ ಪ್ರತಿ ತಿಂಗಳು 2 ಸಾವಿರ ರೂ ಹಣ ಸಿಗುತ್ತಿದೆ. ಪ್ರತಿವರ್ಷ 24 ಸಾವಿರ ರೂ. ಮಹಿಳೆಯರ ಖಾತೆಗೆ ಜಮಾವಣೆಯಾಗುತ್ತಿದೆ. 1.30 ಕೋಟಿ ಕುಟುಂಬಗಳಿಗೆ 200 ಯುನಿಟ್ ವರೆಗೆ ಉಚಿತ ವಿದ್ಯುತ್, 1 ಕೋಟಿಗಿಂತಲೂ ಅಧಿಕ ಜನರಿಗೆ ಅನ್ನಭಾಗ್ಯ ಮೂಲಕ ಅಕ್ಕಿ ಸಿಗುತ್ತಿದೆ, ಯುವನಿಧಿ ಮೂಲಕ ನಿರುದ್ಯೋಗ ಯುವಕರಿಗೆ ಸಹಾಯಧನ ಸಿಗುತ್ತಿದೆ, ಕರ್ನಾಟಕದ ರಾಜ್ಯದಲ್ಲಿ ಮಹಿಳೆಯರು, ಹೆಣ್ಣು ಮಕ್ಕಳು ಉಚಿತವಾಗಿ ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದಾರೆ ಎಂದು ಹೇಳಿಕೊಳ್ಳಲು ಸಂತಸವಾಗುತ್ತಿದೆ’ ಎಂದು ಹೇಳಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button