ಪ್ರಗತಿವಾಹಿನಿ ಸುದ್ದಿ: ಗದಗದಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಪೊಲೀಸರು ಇದೊಂದು ಪೂರ್ವ ನಿಯೋಜಿತ ಕೃತ್ಯವೆಂದು ಹೇಳಿದ್ದಾರೆ.
ಗದಗದಲ್ಲಿ ಸುದ್ದಿಗಾರರೊಂದಿಗೆ ಮಾತನಡಿದ ಎಸ್ ಪಿ ಬಿ.ಎಸ್.ನೇಮಗೌಡ, ಏಪ್ರಿಲ್ 19ರ ಮುಂಜಾನೆ 3 ಗಂಟೆಗೆ ಐವರು ಮನೆಯೊಳಗೆ ನುಗ್ಗಿ ಕೊಲೆಗೈದು ಪರಾರಿಯಾಗಿದ್ದಾರೆ. ಹಂತಕರ ಚಲನವಲನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ ಎಂದರು.
ಆಸ್ತಿ ವಿಚಾರ, ವೈಯಕ್ತಿಕ ಕಾರಣಕ್ಕೆ ಕೊಲೆಯಾಗಿರುವ ಅನುಮಾನವಿದೆ. ಎಲ್ಲಾ ಆಯಾಮಗಲಲ್ಲಿಯೂ ತನಿಖೆ ನಡೆಯುತ್ತಿದೆ. ಒಟ್ಟು ಐದು ತಂಡ ರಚಿಸಿ ಹಂತಕರಿಗಾಗಿ ಹುಡುಕಾಟ ನಡೆಸಿದ್ದೇವೆ ಎಂದು ಹೇಳಿದರು.
ಗದಗ ನಗರಸಭೆ ಉಪಾಧ್ಯಕ್ಷೆ ಸುನಂದಾ ಬಾಕಳೆ ಪುತ್ರ ಕಾರ್ತಿಕ್ ಸೇರಿದಂತೆ ನಾಲ್ವರನ್ನು ಮನೆಯಲ್ಲಿಯೇ ಹತ್ಯೆಗೈದು ದುಷ್ಕರ್ಮಿಗಳು ಪರಾರಿಯಾಗಿದ್ದರು. ಕಾರ್ತಿಕ್ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಎಂದು ಸಂಬಂಧಿಕರು ಆಗಮಿಸಿದ್ದರು. ಕಾರ್ತಿಕ್ ಹಾಗೂ ಮನೆಯಲ್ಲಿ ತಂಗಿದ್ದ ಸಂಬಂಧಿಕರು ಸೇರಿ ನಾಲ್ವರನ್ನು ಹಯೆಗೈದು ದುಷ್ಕರ್ಮಿಗಳು ಎಸ್ಕೇಪ್ ಆಗಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ