Kannada NewsKarnataka News

ಸೈಬರ್ ವಂಚನೆಗೆ ಸಿಲುಕಿ 5.17 ಕೋಟಿ ಕಳೆದುಕೊಂಡ ಉದ್ಯಮಿ

ಪ್ರಗತಿವಾಹಿನಿ ಸುದ್ದಿ: ಸೈಬರ್​​ ವಂಚನೆಗೆ ಸಿಲುಕಿ ಉದ್ಯಮಿಯೊಬ್ಬರು ಬರೋಬ್ಬರಿ 5.17 ಕೋಟಿ ರೂ. ಕಳೆದುಕೊಂಡಿದ್ದಾರೆ. ವಂಚನೆಗೊಳಗಾದ ಉದ್ಯಮಿ ಅಶೋಕ್ ತಿರುಪಲಪ್ಪ ಎಂದು ತಿಳಿದುಬಂದಿದೆ.

ಕಳೆದ ಫೆಬ್ರವರಿ 3ರಂದು ಅಶೋಕ್​ ಅವರ ವಾಟ್ಸಪ್​ಗೆ ಅಪರಿಚಿತ ನಂಬರ್​​ನಿಂದ ಒಂದು ಲಿಂಕ್ ಬಂದಿತ್ತು. ಈ ಬಗ್ಗೆ ಅಶೋಕ್ ತಲೆಕೆಡಿಸಿಕೊಂಡಿರಲಿಲ್ಲ. ಆದರೆ ಕೆಲ ದಿನಗಳ ನಂತರ ವೈ-5-ಎವರ್ ಕೋರ್ ಫೈನಾನ್ಸಿಯಲ್ ಲೀಡರ್ ಎಂಬ ವಾಟ್ಸಪ್​ ಗ್ರೂಪ್​ಗೆ ಅಶೋಕ್ ರನ್ನು ಸೇರಿಸಲಾಯಿತು. ಆ ಬಳಿಕ ಕೆಲ ಅಪರಿಚಿತರು ಅಶೋಕ್ ಕರೆ ಕರೆ ಮಾಡಿ ಈ ಆ್ಯಪ್ ನಲ್ಲಿ ಹಣ ಹೂಡಿ ಹೆಚ್ಚಿನ ಲಾಭ ಬರುತ್ತದೆ ಎಂದು ಆಮಿಷ ಒಡ್ಡಿದರು.

ನಂತರ ಅಶೋಕ್ ಆ್ಯಪ್ ಡೌನ್ ಲೋಡ್ ಮಾಡಿ ಅಪರಿಚಿತರು ಹೇಳಿದಂತೆ ಕೆಲ ಅಕೌಂಟ್​ಗೆ ಹಂತ ಹಂತವಾಗಿ ಹಣ ಹಾಕಲು ಆರಂಭಿಸಿದರು. ಹೀಗೆ ಬರೊಬ್ಬರಿ 5.17 ಕೋಟಿ ರೂಪಾಯಿಯನ್ನು ಹೂಡಿಕೆ ಮಾಡಿದ ನಂತರ ಎಚ್ಚೇತ್ತ ಅಶೋಕ್ ನನ್ನ ಹಣವನ್ನು ವಾಪಸ್ ಆ್ಯಪ್ ಮೂಲಕ ಪಡೆಯಲು ಪ್ರಯತ್ನಿಸಿ ವಿಫಲರಾಗುತ್ತಾರೆ. ಇದಾದ ಬಳಿಕ ತಾವು ಮೋಸ ಹೋಗಿದ್ದಾಗಿ ಮನವರಿಕೆಯಾದ ಬಳಿಕ ಅಶೋಕ ಸೈಬರ್​ ಕ್ರೈಂ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಸಂಬಂಧ ಸೈಬರ್​ ಕ್ರೈಂ ಪೊಲೀಸರು ಎಫ್​ಐಆರ್ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button