ಪ್ರಗತಿವಾಹಿನಿ ಸುದ್ದಿ: 19 ವರ್ಷದ ಅಪ್ರಾಪ್ತ 20 ದಿನಗಳ ಅಂತರದಲ್ಲಿ ಎರಡು ಮದುವೆ ಆಗಿರುವ ಘಟನೆ ಬಿಹಾರದ ಜಮುಯಿ ಜಿಲ್ಲೆಯ ಅಕ್ಷರ ಗ್ರಾಮದಲ್ಲಿ ನಡೆದಿದೆ.
ವಿನೋದ್ ಕುಮಾರ್ ಎಂಬ 19 ವರ್ಷದ ಯುವಕ ಅಕ್ಷರ ಗ್ರಾಮದಲ್ಲಿ ಡಿಜೆ, ಲೈಟಿಂಗ್ಸ್ ಕೆಲಸ ಮಾಡುತ್ತಿದ್ದ. ಈ ವೇಳೆ ಗಿರಿಜಾ ಕುಮಾರಿ ಎಂಬ ಯುವತಿಯ ಜೊತೆ ಲವ್ ಶುರು ಆಗಿದೆ. ಮದುವೆಯಾಗಲು ವಯಸ್ಸಲ್ಲದ ಕಾರಣ ಇಬ್ಬರ ಲವ್ ಮುಂದು ವರೆದಿದೆ. ಇದರ ನಡುವೆ ಫೇಸ್ಬುಕ್ನಲ್ಲಿ ವಿವಾಹಿತೆ ‘ಪ್ರೀತಿ’ ಎಂಬ ಮಹಿಳೆಯೊಬ್ಬಳು ಪರಿಚಯವಾಗಿದ್ದಾಳೆ. ಆಕೆಯ ಜತೆಗೂ ಲವ್ ಶುರು ಮಾಡಿದ್ದಾನೆ. ಕದ್ದುಮುಚ್ಚಿ ಆಕೆಯ ಮನೆಗೂ ಹೋಗಿ ಬರುತ್ತಿದ್ದ. ಆದರೆ ಒಂದು ದಿನ ‘ಪ್ರೀತಿ’ ಮನೆಯಲ್ಲಿ ರೆಡ್ಹ್ಯಾಂಡ್ ಆಗಿ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದ. ಹೀಗಾಗಿ ಗ್ರಾಮಸ್ಥರು ಸೇರಿ ದೇವಸ್ಥಾನದಲ್ಲಿ ಇಬ್ಬರಿಗೂ ಮದುವೆ ಮಾಡಿಸಿದ್ದಾರೆ.
ಮದುವೆ ಆಗಿರುವ ವಿಷಯ ಮೊದಲ ಪ್ರಿಯೇಸಿ ಗಿರಿಜಾಗೆ ತಿಳಿದಿಲ್ಲ. ಮದುವೆಯಾಗಿ 20 ದಿನವೂ ಕಳೆದಿಲ್ಲ, ಮೊದಲ ಪ್ರಿಯೇಸಿಯ ಮನೆಗೆ ಹೋಗಿದ್ದಾನೆ. ಈತ ಅಲ್ಲೂ ಸಿಕ್ಕಿಬಿದ್ದಿದ್ದಾನೆ. ಯುವತಿಯ ಪೋಷಕರು ಹಿಡಿದು ಅಲ್ಲೊಂದು ಮದುವೆ ಮಾಡಿಸಿದ್ದಾರೆ. ಹೀಗೆ 20 ದಿನದಲ್ಲಿ ಎರಡೆರಡು ಮದುವೆಯಾಗಿದ್ದಾನೆ.
ಪ್ರೀತಿ ಹಾಗೂ ಗಿರಿಜಾ ಇಬ್ಬರನ್ನೂ ಪ್ರೀತಿಸುತ್ತಿದ್ದ ವಿನೋದ್ ಕುಮಾರ್ ಎಲ್ಲವನ್ನೂ ಯಾರಿಗೂ ಗೊತ್ತಾಗದಂತೆ ನಿರ್ವಹಿಸುತ್ತಿದ್ದ. ಹೀಗಾಗಿ 20 ದಿನದಲ್ಲಿ 2 ಮದುವೆಯಾದ ವಿನೋದ್ ಕುಮಾರ್ ವಿರುದ್ಧ ಮೊದಲ ಪತ್ನಿ ಪ್ರೀತಿ ದೂರು ನೀಡಿದ್ದಾಳೆ. ಆದರೆ ಎರಡನೇ ಪತ್ನಿ ಗಿರಿಜಾ ಎಲ್ಲರೂ ಜತೆಯಾಗಿರಲು ನನ್ನ ಅಭ್ಯಂತರವಿಲ್ಲ. ನಾನು ವಿನೋದ್ ಕುಮಾರ್ ಬಿಟ್ಟುಕೊಡುವುದಿಲ್ಲ ಎಂದು ಪಟ್ಟುಹಿಡಿದಿದ್ದಾಳೆ. ಮೂವರೂ ಒಟ್ಟಾಗಿರೋಣ ಎಂದಿದ್ದಾಳೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ