ಧರ್ಮಜಾಗೃತಿ ಮಾಡುವ ಮಠಗಳೆ ನಿಜವಾದ ಮಠಗಳು
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಜನರ ಸಮಸ್ಯೆಗೆ ಸ್ಪಂದಿಸುತ್ತಾ ಧರ್ಮ ಜಾಗೃತಿಯನ್ನು ಮಾಡುವ ಮಠಗಳೇ ನಿಜವಾದ ಮಠಗಳು ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾಗಿ ಆಯ್ಕೆಯಾದ ಮೋಹನ ಲಿಂಬಿಕಾಯಿ ಹೇಳಿದರು.
ಅವರು ನಗರದ ಲಕ್ಷ್ಮಿ ಟೇಕಡಿ ಯಲ್ಲಿರುವ ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ ಜರುಗಿದ ಇಪ್ಪತ್ತೆರಡನೆಯ ಮಾಸಿಕ ಸುವಿಚಾರ ಚಿಂತನದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ, ಹುಕ್ಕೇರಿ ಹಿರೇಮಠದ ಕಾರ್ಯ ಎಲ್ಲರಿಗೂ ಅಭಿಮಾನ ತರುವಂತಹ ಕಾರ್ಯವಾಗಿದೆ. ಎಲ್ಲರಿಗೆ ಧರ್ಮ ಸಂಸ್ಕಾರವನ್ನು ಬಿತ್ತುವುದರ ಜೊತೆಜೊತೆಗೆ ಜನರ ಸಮಸ್ಯೆಗೆ ಸ್ಪಂದಿಸುವ ಅಪರೂಪದ ಕಾರ್ಯವನ್ನು ಶ್ರೀಮಠ ಮಾಡುತ್ತಿದೆ. ಮಠಾಧ್ಯಕ್ಷರಾದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಸಾಹಿತ್ಯ, ಸಂಸ್ಕೃತಿ, ಶಿಕ್ಷಣ ಮತ್ತು ಸಾಮಾಜಿಕವಾಗಿ ವಿಶೇಷ ಕಾರ್ಯ ಮಾಡುತ್ತಿದ್ದಾರೆ. ಮಠಗಳ ನಿಜವಾದ ಕಾರ್ಯ ಇದು ಎಂದರು.
ಕಾರ್ಯಕ್ರಮದಲ್ಲಿ ಉಪದೇಶವನ್ನು ನೀಡಿರುವ ಕುಂದರಗಿಯ ಅಡವಿಸಿದ್ದೇಶ್ವರ ಮಠದ ಅಮರ ಸಿದ್ದೇಶ್ವರ ಸ್ವಾಮಿಗಳು ಮಾತನಾಡುತ್ತಾ, ಮಹಿಳೆಯರು ಮಕ್ಕಳಿಗೆ ಸಂಸ್ಕಾರವನ್ನು ಕಲಿಸಬೇಕು ಆಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದರು.
ಸಾನಿಧ್ಯವಹಿಸಿ ಮಾತನಾಡಿದ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಮಾಸ ಪೂರ್ಣ ಮಹಿಳೆಯರು ರುದ್ರಪಾರಾಯಣವನ್ನು ಮಾಡುತ್ತಿದ್ದು, ಶ್ರಾವಣದ ಮಂಗಲದಲ್ಲಿ ಎಲ್ಲರೂ ಕೂಡ ಪ್ರೀತಿ, ಸೌಹಾರ್ದತೆಯಿಂದ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮವನ್ನು ಮಹಿಳೆಯರು ಮಾಡಿದ್ದಾರೆ. ಗಣಪತಿ ಉತ್ಸವದಲ್ಲಿ ಅದ್ದೂರಿ ಆಡಂಬರ ಮಾಡದೆ ಪಟಾಕ್ಷಿ ಗಳನ್ನು ಹೆಚ್ಚು ಸುಡದೆ ಅದೇ ಹಣವನ್ನು ಸಂತ್ರಸ್ತರಿಗೆ ನೀಡುವಂತಹ ಕೆಲಸಕ್ಕೆ ಎಲ್ಲರೂ ಮುಂದಾಗಬೇಕು ಎಂದರು.
ಇದೇ ಸಂದರ್ಭದಲ್ಲಿ ಬೆಳಗಾವಿ ನಗರದ ಸುಮಾರು ಐದುನೂರಾ ಏಂಟು ಮಹಿಳೆಯರಿಗೆ ಶ್ರೀಚಕ್ರವನ್ನು ಮತ್ತು ವಸ್ತ್ರವನ್ನು ಉಡಿತುಂಬುವ ಕಾರ್ಯಕ್ರಮ ಜರುಗಿತು. ವಿಜಯ ಶಾಸ್ತ್ರಿಗಳು ವೇದಿಕೆ ಮೇಲೆ ಆಸೀನರಾಗಿದ್ದರು.
ಹುಕ್ಕೇರಿಯ ಕ್ಷೇತ್ರ ಶಿಕ್ಷಣ ಅಧಿಕಾರಿ ದಂಡಿನ ಅವರು, ಬೆಳಗಾವಿ ಗ್ರಾಮೀಣ ಭಾಗದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಲೀಲಾವತಿ ಹಿರೇಮಠ ಅವರು ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ವಿರುಪಾಕ್ಷಯ್ಯ ನೀರಲಗಿಮಠ ಅವರು ಸ್ವಾಗತಿಸಿದರು. ಶಿಂತ್ರೆ ಅವರು ವಿಶೇಷ ಉಪನ್ಯಾಸ ನೀಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ