Kannada NewsKarnataka News

ಮೊಬೈಲ್‌ಗಳಲ್ಲಿ ಜೋರಾಗಿ ಹಾಡುಗಳನ್ನು ಹಾಕುವುದರಿಂದ ಶಬ್ದಮಾಲಿನ್ಯ

ವಾಹನ ಕಾಯ್ದೆ ಉಲ್ಲಂಘಿಸಿದರೆ ಪರಿಷ್ಕೃತ ದಂಡ ಆಕರಣೆ- ಆರ್.ಟಿ.ಓ. ಮಗದುಮ್ಮ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –

ಮೋಟಾರು ವಾಹನ ಕಾಯ್ದೆ ೧೯೮೮ರ ನಿಯಮ ೨೦೦ರ ವಿವಿಧ ಕಲಂಗಳ ಅಡಿಯಲ್ಲಿ ರಸ್ತೆ ನಿಯಮಗಳನ್ನು ಉಲ್ಲಂಘಿಸುವ ವಾಹನ ಸವಾರರಿಗೆ ಪರಿಷ್ಕೃತ ದಂಡವನ್ನು ಸಪ್ಟೆಂಬರ್ ೩ ರಿಂದ ವಿಧಿಸಲಾಗಿದೆ ಎಂದು ಬೆಳಗಾವಿ ವಿಭಾಗದ ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಎಸ್.ಬಿ. ಮಗದುಮ್ಮ ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಸಾರ್ವಜನಿಕರು ತಮ್ಮ ವಾಹನದ ಎಲ್ಲ ದಾಖಲೆಗಳನ್ನು ಅಂದರೆ ವಾಹನ ವಿಮೆ, ವಾಹನದ ನೋಂದಣಿ ಪ್ರಮಾಣ ಪತ್ರ, ವಾಯುಮಾಲಿನ್ಯ ಪ್ರಮಾಣ ಪತ್ರ ಇತ್ಯಾದಿಗಳನ್ನು ಕ್ರಮಬದ್ಧವಾಗಿ ವಾಹನದಲ್ಲಿರಿಸಿಕೊಳ್ಳಬೇಕು. ದ್ವಿಚಕ್ರ ವಾಹನ ಚಾಲಕರು ಹೆಲ್ಮೆಟ್ ಕಡ್ಡಾಯವಾಗಿ ಧರಿಸಿ ವಾಹನ ಚಲಾಯಿಸಬೇಕು ಎಂದು ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಯನ್ನು ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ಅಥವಾ ಇಲಾಖೆಯ ವೆಬ್‌ಸೈಟ್ ನಲ್ಲಿ ಪಡೆಯಬಹುದು.

ವಾಹನಗಳ ಸಂಖ್ಯಾ ಫಲಕ

ಕೇಂದ್ರ ಮೋಟಾರು ವಾಹನಗಳ ನಿಯಮಗಳು ೧೯೮೯ರ ನಿಯಮ ೫೦ ಮತ್ತು ೫೧ ಇವುಗಳ ವಿರುದ್ಧವಾಗಿ ವಾಹನಗಳ ನೋಂದಣಿ ಫಲಕಗಳಲ್ಲಿ ಅಂಕಿ ಸಂಖ್ಯೆಗಳನ್ನು ನಮೂದಿಸದೇ ನಿರ್ದಿಷ್ಟಪಡಿಸಿದ ನಿಯಮಾವಳಿಯ ಪ್ರಕಾರ ವಾಹನಗಳ ಸಂಖ್ಯಾ ಫಲಕಗಳನ್ನು ಪ್ರದರ್ಶಿಸಲು ತಿಳಿಸಿದ್ದಾರೆ.
ಉಚ್ಚ ನ್ಯಾಯಾಲಯದಲ್ಲಿ ದಾಖಲಾಗಿರುವ ರಿಟ್ ಅರ್ಜಿ ಸಂಖ್ಯೆ: ೨೬೬೭೬/೨೦೧೯ ಪ್ರಕರಣದಂತೆ ಕರ್ನಾಟಕ ಮೋಟಾರು ವಾಹನಗಳ ನಿಯಮಗಳು ೧೯೮೯ ರ ನಿಯಮ ೯೪ (೧)(ಗಿ)ನ್ನು ಉಲ್ಲಂಘಿಸಿ ಮೊಬೈಲ್‌ಗಳಲ್ಲಿ ಜೋರಾಗಿ ಹಾಡುಗಳನ್ನು ಹಾಕುವುದರಿಂದ ಶಬ್ದಮಾಲಿನ್ಯ ಉಂಟಾಗುತ್ತಿರುವುದನ್ನು ನಿಯಂತ್ರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಉಚ್ಚ ನ್ಯಾಯಾಲಯದಲ್ಲಿ ಬಾಕಿಯಿರುವ ರಿಟ್ ಅರ್ಜಿ ಸಂಖ್ಯೆ: ೧೨೧೮೧/೨೦೧೯ ಮತೆ ಸರಕು ಸಾಗಿಸುವ ವಾಹನಗಳಲ್ಲಿ ಪ್ರಯಾಣಿಕರನ್ನು ಸಾಗಿಸುವ ವಾಹನಗಳ ವಿರುದ್ಧ ಕ್ರಮಕೈಗೊಳ್ಳಲಾಗುತ್ತಿದ್ದು, ಈ ಕುರಿತು ವಾಹನ ಮಾಲಿಕರು, ಚಾಲಕರು ಜಾಗರೂಕತೆಯಿಂದ ವಾಹನ ಚಾಲನೆ ಮಾಡಬೇಕು.
ಕರ್ನಾಟಕ ಸಕಾಲ ಸೇವೆಗಳ ಅಧಿನಿಯಮ-೨೦೧೧ರ ಅಡಿಯಲ್ಲಿ ಸಾರಿಗೆ ಇಲಾಖೆಯ ೨೪ ಸೇವೆಗಳನ್ನು ವಾಹನ ತಂತ್ರಾಂಶದೊಂದಿಗೆ ಸಕಾಲ ಸೇವೆಯನ್ನು ಜೋಡಣೆಗೊಳಿಸಲಾಗಿದ್ದು ನಿಗದಿತ ಅವಧಿಯೊಳಗೆ ಅರ್ಜಿಯನ್ನು ವಿಲೆಗೊಳಿಸಲು ಕಾಲಮಿತಿ ನಿರ್ದಿಷ್ಟ ಪಡಿಸಲಾಗಿದೆ .
ಹೆಚ್ಚಿನ ಮಾಹಿತಿಗಾಗಿ ಕಚೇರಿಯಲ್ಲಿ ಹಾಗೂ  ವೆಬ್ ಸೈಟ್ ನಲ್ಲಿ ಪಡೆಯಬಹುದಾಗಿದೆ ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಎಸ್.ಬಿ. ಮಗದುಮ್ಮ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button