ಪ್ರಗತಿವಾಹಿನಿ ಸುದ್ದಿ: ಪ್ರಸಕ್ತ ಸಾಲಿನಲ್ಲಿ ಸಮನ್ವಯ ಶಿಕ್ಷಣ ಕಾರ್ಯತಂತ್ರದಡಿಯಲ್ಲಿ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗಾಗಿ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ೮ ವಲಯಗಳಲ್ಲಿ ಅಗತ್ಯವಿರುವ ೧೨ ಪ್ರಾಥಮಿಕ ಹಾಗೂ ೧೬ ಪ್ರೌಢ ಶಾಲಾ ಶಿಕ್ಷಕರು ಒಟ್ಟು ೨೮ ಸಂಪನ್ಮೂಲ ಶಿಕ್ಷಕರ ಹುದ್ದೆಗಳಿಗೆ ನೇರಗುತ್ತಿಗೆ ಮೂಲಕ ತಾತ್ಕಾಲಿಕವಾಗಿ ಗುತ್ತಿಗೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲು ಡಿ.ಇಡಿ/ಬಿ.ಇಡಿ ಪಡೆದಿರುವ (ಆರ್.ಸಿ.ಐ ಪ್ರಮಾಣ ಪತ್ರ ಹೊಂದಿರುವ) ಅರ್ಜಿ ಆಹ್ವಾನಿಸಲಾಗಿದೆ.
ಸದರಿ ನೇರಗುತ್ತಿಗೆ ಅವಧಿಯು ಮಾ.೩೧ (೨೦೨೫) ರವರೆಗೆ ಮಾತ್ರ ಇರುವುದು (ಸಾಮಾನ್ಯ ಡಿ.ಇಡಿ/ಬಿ.ಇಡಿ ವಿದ್ಯಾರ್ಹತೆ ಅನ್ವಯಾಗುವುದಿಲ್ಲ) ಪ್ರಯುಕ್ತ ಪ್ರಾಥಮಿಕ ಬಿ.ಐ.ಇ.ಆರ್.ಟಿ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಡಿ.ಇಡಿ ಅಥವಾ ಎಮ್.ಸಿ.ಟಿ.ಟಿ ವಿದ್ಯಾರ್ಹತೆ (ಆರ್.ಸಿ.ಐ ನಿಯಮಗಳ ಪ್ರಕಾರ ಸಿ.ಆರ್.ಆರ್ ನಂಬರ) ಹೊಂದಿರಬೇಕು ಹಾಗೂ ಪ್ರೌಢ ಬಿ.ಐ.ಇ.ಆರ್.ಟಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಜೂ.೧೮ ಸಾಯಂಕಾಲ ೫ ಗಂಟೆ ಒಳಗಾಗಿ ಉಪನಿರ್ದೇಶಕರು (ಆಡಳಿತ) ಹಾಗೂ ಜಿಲ್ಲಾ ಯೋಜನಾ ಸಮನ್ವಯಾಧಿಕಾರಿಗಳು ಸಮಗ್ರ ಶಿಕ್ಷಣ ಕರ್ನಾಟಕ ಶೈಕ್ಷಣಿಕ ಜಿಲ್ಲೆ ಚಿಕ್ಕೋಡಿ ಯಲ್ಲಿ ಅರ್ಜಿ ಪಡೆದು ಉಪನಿರ್ದೇಶಕರ ಕಛೇರಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ದೂ: ೯೪೪೮೯೯೯೪೩೨ ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಉಪನಿದೇಶಕರು(ಆಡಳಿತ) ಹಾಗೂ ಜಿಲ್ಲಾಯೋಜನಾ ಸಮನ್ವಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ