*ಕರ್ನಾಟಕ ಕ್ಷತ್ರಿಯ ಮರಾಠಾ ಪರಿಷತ್ ವತಿಯಿಂದ ವಿಶೇಷ ಸಭೆ ನಡೆಸಿದ ಅನೀಲ ಬೆನಕೆ*
ಪ್ರಗತಿವಾಹಿನಿ ಸುದ್ದಿ: ಕರ್ನಾಟಕ ಕ್ಷತ್ರಿಯ ಮರಾಠಾ ಪರಿಷತ್ ವತಿಯಿಂದ ಇಂದು ಬೆಳಗಾವಿಯ ಚವಾಟ ಗಲ್ಲಿಯಲ್ಲಿ ಕೆ.ಕೆ.ಎಂ.ಪಿ. ಅಧ್ಯಕ್ಷರಾದ ಅನಿಲ ಬೆನಕೆ ಅವರ ಕಚೇರಿಯಲ್ಲಿ ವಿಶೇಷ ಸಭೆ ನಡೆಯಿತು.
ಈ ಸಭೆಯಲ್ಲಿ ಬೆಳಗಾವಿಯ ಎಲ್ಲಾ ತಾಲೂಕುಗಳ ಮುಖ್ಯ ಪದಾಧಿಕಾರಿಗಳು ಈ ಸಭೆಯಲ್ಲಿ ಭಾಗವಹಿಸಿದ್ದರು. ಮರಾಠಾ ಸಮುದಾಯದ ಶಿಕ್ಷಣ, ಅಭಿವೃದ್ಧಿ ಮತ್ತು ಉನ್ನತಿಗಾಗಿ ಸಭೆಯನ್ನು ನಡೆಸಲಾಯಿತು. ಹಾಗೂ ಬೆಳಗಾವಿಯ ಸದಾಶಿವ ನಗರದಲ್ಲಿ 22 ಗುಂಟಾ ಭೂಮಿಯನ್ನು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯುರಪ್ಪ ಆದೇಶದ ಮೇರೆಗೆ ಗುತ್ತಿಗೆ ಆಧಾರದ ಮೇಲೆ ಪಡೆಯಲಾಗಿದ್ದು, ಸದರಿ ಜಾಗೆಯ ಅಭಿವೃದ್ಧಿಗಾಗಿ ಅನಿಲ ಬೆನಕೆ ಹಾಗೂ ಬೆಳಗಾವಿ ಜಿಲ್ಲೆ ಎಲ್ಲ ಕೆ.ಕೆ.ಎಂ.ಪಿ. ಪದಾಧಿಕಾರಿಗಳು ಹಾಗೂ ಪ್ರಮುಖ ಮುಖಂಡರ ಸಲಹೆ ಪಡೆದು ಮರಾಠಾ ಭವನ ನಿರ್ಮಾಣದ ಜವಾಬ್ದಾರಿಯನ್ನು ವಹಿಸಿಕೊಳ್ಳಲಾಗಿದೆ.
ಈ ನಿಟ್ಟಿನಲ್ಲಿ ದಿನಾಂಕ ಜೂನ್ 26 ರಂದು ಜಿಲ್ಲೆಯ ಎಲ್ಲಾ ತಾಲೂಕು ಕೆ.ಕೆ.ಎಂ.ಪಿ. ಪದಾಧಿಕಾರಿಗಳ ಸಭೆಯನ್ನು ನಡೆಸಲು ತೀರ್ಮಾನಿಸಲಾಗಿದೆ, ಈ ಯೋಜನೆಯಲ್ಲಿ ಎಲ್ಲಾ ಪದಾಧಿಕಾರಿಗಳು ಭಾಗವಹಿಸುವುದಾಗಿ ಭರವಸೆ ನೀಡಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ 15 ಲಕ್ಷ ಮರಾಠಾ ಸಮಾಜದವರಿದ್ದು, ಚದುರಿದ ಸಮುದಾಯಕ್ಕೆ ಆಗಬೇಕಾದ ಕೆಲಸ ದೊಡ್ಡದು. ಎಲ್ಲಾ ಮರಾಠಾ ಸಮುದಾಯದವರನ್ನು ಒಂದೇ ಸೂರಿನಡಿ ತಂದು ಸಮುದಾಯವನ್ನು ಬಲಪಡಿಸುವ ಕಾರ್ಯವನ್ನು ಕೆ.ಕೆ.ಎಂ.ಪಿ. ಕೈಗೊಳ್ಳುವುದು ಎಂದು ಅನಿಲ ಬೆನಕೆ ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಬೆಳಗಾವಿ ಕೆ.ಕೆ.ಎಂ.ಪಿ. ಜಿಲ್ಲಾಧ್ಯಕ್ಷ ಅನಿಲ ಬೆನಕೆ ಅವರೊಂದಿಗೆ ಜಿಲ್ಲಾ ಉಪಾಧ್ಯಕ್ಷ ದಿಲೀಪ ಪವಾರ, ಬಸವರಾಜ ಮ್ಯಾಗೋಟಿ, ಸಂಜೀವ ಭೋಸಲೆ, ಡಿ.ಬಿ.ಪಾಟೀಲ, ಎಸ್.ವಿ. ಜಾಧವ್, ಮನೋಜ ಪಾಟೀಲ್, ಪ್ರಮೋದ ಬಿ. ಗುಂಜಿಕರ್, ರೋಹನ್ ಕದಮ, ಸುರೇಶ ಪಾಟೀಲ್, ರಾಹುಲ್ ಪವಾರ್ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ