Politics

*ಸಿದ್ದರಾಮಯ್ಯ ಔಟ್ ಗೋಯಿಂಗ್ ಸಿಎಂ: ಆರ್.ಅಶೋಕ್ ವಾಗ್ದಾಳಿ*

ಪ್ರಗತಿವಾಹಿನಿ ಸುದ್ದಿ: ಸಿಎಂ ಸಿದ್ದರಾಮಯ್ಯ ಸರ್ಕಾರ ಎಲ್ಲ ವಸ್ತುಗಳ ಬೆಲೆ ಏರಿಕೆ ಮಾಡುವ ಮೂಲಕ ರಾಜ್ಯದ ಜನರಿಗೆ ದೌರ್ಭಾಗ್ಯಗಳನ್ನು ಕೊಟ್ಟಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.

ವಿಧಾನಸೌಧದಲ್ಲಿ ಮಾತನಾಡಿದ ಆರ್.ಅಶೋಕ್, ಕಳೆದ ಒಂದು ವರ್ಷದಿಂದ ಕಾಂಗ್ರೆಸ್ ಸರ್ಕಾರ ಎಲ್ಲಾ ವಸ್ತುಗಳ ಬೆಲೆ ಏರಿಕೆ ಮಾಡಿದೆ. ಮಾತೆತ್ತಿದರೆ ಗ್ಯಾರಂಟಿ ಎಂದು ಹೇಳಿ ಜನರಿಗೆ ಬರೆ ಎಳೆದಿದ್ದಾರೆ. ಹಾಲು, ಹಣ್ಣು, ತರಕಾರಿ, ಮನೆ ತೆರಿಗೆ ಸ್ಟ್ಯಾಂಪ್ ಶುಲ್ಕ, ಈಗ ಪೆಟ್ರೋಲ್, ಡೀಸೆಲ್ ಎಲದರ ಬೆಲೆಯನ್ನು ದೊಡ್ಡ ಪ್ರಮಾಣದಲ್ಲಿ ಏರಿಸಿದ್ದಾರೆ. ಜನಸಾಮಾನ್ಯರು ಟೀ, ಕಾಫಿ ಕುಡಿಯಲೂ ಆಗದ ಸ್ಥಿತಿ ಬಂದಿದೆ ಎಂದು ಕಿಡಿಕಾರಿದ್ದಾರೆ.

ಸಿಎಂ ಸಿದ್ದರಾಮಯ್ಯ ಕೆಲ ದಿನಗಳ ಹಿಂದೆ ಆರ್.ಅಶೋಕ್ ಗೆ ಜ್ಞಾನ ಇಲ್ಲ ಅಂದಿದ್ದರು. ಸಿಎಂ ಸಿದ್ದರಾಮಯ್ಯನವರೇ ನಿಮಗೆ ಜ್ಞಾನ ಇದೆಯಾ? ಮಾನ ಮರ್ಯಾದೆ ಇದೆಯಾ? ರಾಜ್ಯದ ಜನರಿಗೆ ದೌರ್ಭಾಗ್ಯಗಳನ್ನು ಕೊಟಿದ್ದೀರಿ ಎಂದು ವಾಗ್ದಾಳಿ ನಡೆಸಿದರು.

15 ಬಾರಿ ಬಜೆಟ್ ಮಂಡನೆ ಮಾಡಿದ ಸಿಎಂ ಸಿದ್ದರಾಮಯ್ಯ ರಾಜ್ಯದ ಆರ್ಥಿಕ ವ್ಯವಸ್ಥೆಯನ್ನು ಹಾಳು ಮಾಡಿದ್ದಾರೆ. ಬಿಡಿಎ ಮಾರಾಟ ಮಾಡಲು ಸರ್ಕಾರ ಹೊರಟಿದೆ. ಕಮಿಷನ್ ಹೊಡೆಯಲು ಇವರ ಬಳಿ ದುಡ್ಡಿಲ್ಲ. ಬಿಬಿಎಂಪಿ ಕಚೇರಿ, ವಾರ್ಡ್ ಕಚೇರಿಗಳನ್ನು ಅಡ ಇಡುತ್ತಿದ್ದಾರೆ. ಸಿದ್ದರಾಮಯ್ಯ ವಿಧಾನಸೌಧವನ್ನೂ ಅಡ ಇಡುತ್ತಾರೆ. ಕಾರಣ ಅವರು ಔಟ್ ಗೋಯಿಂಗ್ ಮುಖ್ಯಮಂತ್ರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button